/newsfirstlive-kannada/media/post_attachments/wp-content/uploads/2024/06/CHANDRABABU.jpg)
ಡೆಲ್ಲಿ ದರ್ಬಾರ್ನಲ್ಲಿ ಮತ್ತೊಂದು ಇತಿಹಾಸ ರಚನೆಗೆ ಕ್ಷಣಗಣನೆಗಳು ಶುರುವಾಗಿವೆ. ಕೇಂದ್ರದಲ್ಲಿ ಮತ್ತೊಮ್ಮೆ ಸಿಂಹಾಸನ ಏರಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ಸೇತರ ನಾಯಕರೊಬ್ಬರು ಸತತ ಮೂರನೇ ಬಾರಿಗೆ ಪ್ರಧಾನಿ ಕುರ್ಚಿ ಏರ್ತಿದ್ದಾರೆ. ಇದು ಸುಖಾಸಿನ ಕುರ್ಚಿಯಲ್ಲ. ಅದು ಮುಳ್ಳಿನ ಕುರ್ಚಿ..
ಭಾನುವಾರ ಸಂಜೆ 6ಕ್ಕೆ ನಮೋ ಪದಗ್ರಹಣ!
ಅಂದ್ಹಾಗೆ ಭಾನುವಾರ ದಿನಾಂಕ 9ರಂದು ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ಜೊತೆಗೆ ಸಂಪುಟ ರಚನೆಯೂ ಸಹ ಆಗಲಿದ್ದು, ಕರ್ತವ್ಯಪಥದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ.. ಈ ಕಾರ್ಯಕ್ರಮಕ್ಕೆ ನೆರೆ ಹೊರೆಯ 8-10 ದೇಶಗಳ ಮುಖ್ಯಸ್ಥರಿಗೂ ಆಹ್ವಾನ ನೀಡ್ಲಾಗಿದೆ. ಬಾಂಗ್ಲಾ ಪ್ರಧಾನಿ ಶೇಕ್ ಹಸೀನ ಆಗಮನ ನಿಶ್ಚಯವಾಗಿದೆ. ಅಚ್ಚರಿ ಎಂಬಂತೆ ಮಾಲ್ಡೀವ್ಸ್ ಅಧ್ಯಕ್ಷರಿಗೂ ಆಮಂತ್ರಣ ನೀಡಲಾಗಿದೆ.
ಇದನ್ನೂ ಓದಿ:ಚುನಾವಣೆ ಗೆದ್ದ ಬೆನ್ನಲ್ಲೇ ಮೊದಲ ಕಾನೂನು ಸಂಕಷ್ಟ.. ಬೆಂಗಳೂರು ಕೋರ್ಟ್ ಕಟಕಟೆಯಲ್ಲಿ ರಾಹುಲ್ ಗಾಂಧಿ..!
ಇವತ್ತು ದೆಹಲಿಯಲ್ಲಿ ಎನ್ಡಿಎ, ಬಿಜೆಪಿ ಕೂಟದಲ್ಲಿ ಸರಣಿ ಸಭೆ
ದೆಹಲಿಯಲ್ಲಿ ಇವತ್ತು ಹೈವೋಲ್ಟೇಜ್ ಮೀಟಿಂಗ್ಗಳು ನಡೆಯಲಿವೆ. ಬಿಜೆಪಿಯ ಸಂಸದೀಯ ಸಭೆ ಆಯೋಜನೆ ಆಗಿದ್ದು, ಸಂಸದೀಯ ನಾಯಕರಾಗಿ ಮೋದಿ ಆಯ್ಕೆ ಆಗಲಿದ್ದಾರೆ. ಸಂಜೆ ಎನ್ಡಿಎ ಕೂಟ ಪ್ರಮುಖರ ಸಭೆ ನಡೆಯಲಿದೆ. ಇದೇ ಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ ಅನ್ನೋದು ನಿರ್ಧಾರ ಆಗಲಿದೆ. ಸಂಪುಟ ರಚನೆಗಾಗಿ ಬಿಜೆಪಿ ಮುಂದೆ ಟಿಡಿಪಿ ಹೊಸ ಸೂತ್ರ ಮುಂದಿಟ್ಟಿದೆ.
ಸ್ಥಾನಮಾನಕ್ಕೆ ಚೌಕಾಸಿ!
- 4 ಸಂಸದ ಸ್ಥಾನಕ್ಕೆ ಒಂದು ಮಂತ್ರಿ ಸ್ಥಾನ ಎಂಬ ಫಾರ್ಮೂಲ
- ಫಾರ್ಮೂಲಗೆ ಬಿಜೆಪಿ ಒಪ್ಪಿದ್ರೆ ಟಿಡಿಪಿಗೆ 4, ಜೆಡಿಯುಗೆ 3 ಸ್ಥಾನ
- ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ 2, LJPಗೆ ಒಂದು
- ಸಚಿವ ಸ್ಥಾನದ ಜೊತೆ ಇನ್ನೂ 2 ಬೇಡಿಕೆ ಮಂಡಿಸಿರುವ ಟಿಡಿಪಿ
- ಸ್ಪೀಕರ್ಗೆ ಟಿಡಿಪಿ ಬೇಡಿಕೆ, ಡೆಪ್ಯೂಟಿ ನೀಡಲು ಬಿಜೆಪಿ ಸರ್ಕಸ್
- ರಾಜಧಾನಿ ಹೈದರಾಬಾದ್ ಕಳೆದುಕೊಂಡಿರುವ ಆಂಧ್ರಪ್ರದೇಶ
- ಕನಸಿನ ಅಮರಾವತಿಗೆ ವಿಶೇಷ ಪ್ಯಾಕೇಜ್ ಕೇಳ್ತಿರುವ ನಾಯ್ಡು
ಇದನ್ನೂ ಓದಿ:ಚುನಾವಣೆ ಸೋಲು ಬೆನ್ನಲ್ಲೇ ಕೋಲಾಹಲ.. ಅಸ್ಥಿರಗೊಳ್ಳುವ ಆತಂಕದಲ್ಲಿ ಮಹಾರಾಷ್ಟ್ರ ಸರ್ಕಾರ..!
ಆ ನಾಲ್ಕು ಸಚಿವ ಸ್ಥಾನ ಬಿಟ್ಟುಕೊಡದಿರಲು ಬಿಜೆಪಿ ನಿರ್ಧಾರ
ಬಹುಮುಖ್ಯ ನಾಲ್ಕು ಸಚಿವ ಸ್ಥಾನಗಳನ್ನ ಬಿಟ್ಟುಕೊಡದಿರಲು ಬಿಜೆಪಿ ತೀರ್ಮಾನ ಕೈಗೊಂಡಿದೆ. ದೇಶದ ಹಿತದೃಷ್ಟಿಯಿಂದ ಗೃಹ ಇಲಾಖೆ, ಹಣಕಾಸು, ರಕ್ಷಣೆ, ವಿದೇಶಾಂಗ ಇಲಾಖೆ ತನ್ನಲ್ಲೆ ಇರಿಸಿಕೊಳ್ಳಲು ಮುಂದಾಗಿದೆ ಅಂತ ಗೊತ್ತಾಗಿದೆ. ರೈಲ್ವೇ, ಸಾರಿಗೆ, ಕೃಷಿ, ಮೂಲ ಸೌಕರ್ಯ ಖಾತೆ ಉಳಿಸಿಕೊಳ್ಳುವ ಇಂಗಿತದಲ್ಲಿದೆ.. ಜೆಡಿಯುಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಒಪ್ಪಿಸುವ ಸಾಧ್ಯತೆ ಇದೆ.. ವಿಮಾನಯಾನ ಮತ್ತು ಸ್ಟೀಲ್ ಖಾತೆಯನ್ನ ಟಿಡಿಪಿಗೆ ಬೃಹತ್ ಕೈಗಾರಿಕೆ ಶಿವಸೇನೆ ಶಿಂಧೆ ಬಣಕ್ಕೆ ಸಿಗಲಿದೆ. ಉಳಿದ ಹಣಕಾಸು ರಾಜ್ಯ ಖಾತೆ, ರಕ್ಷಣಾ ಖಾತೆ ರಾಜ್ಯ ಇಲಾಖೆ ಮಿತ್ರರಿಗೂ ನೀಡುವ ಸಾಧ್ಯತೆ ಇದೆ.. ಟೂರಿಸಂ, ಎಂಎಸ್ಎಂಇ, ಸ್ಕಿಲ್ ಡೆವಲಪ್ಮೆಂಟ್, ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಭೂ ವಿಜ್ಞಾನ, ಸಾಮಾಜಿಕ ನ್ಯಾಯ ಮತ್ತು ಯುವ ಸಬಲಿಕರ ಮಿತ್ರರಿಗೆ ಹಂಚಿಕೆ ಆಗಲಿದೆ. ಚೌಕಾಸಿಗಳು ಆರಂಭವಾಗಲಿದ್ದು, ಯಾರಿಗೆ ಯಾವ ಖಾತೆ ಹಂಚಿಕೆ ಆಗಲಿದೆ ಅನ್ನೋದು ಸಂಜೆ ಸಭೆ ಬಳಿಕ ನಿರ್ಧಾರವಾಗಲಿದೆ.
ಇದನ್ನೂ ಓದಿ:ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ