newsfirstkannada.com

ಮೋದಿ ಮುಂದೆ ನಾಯ್ಡು ಭಾರೀ ಡಿಮ್ಯಾಂಡ್.. ದೊಡ್ಡ ದೊಡ್ಡ ಹುದ್ದೆಗಳ ಮೇಲೆ ಕಣ್ಣು.. ಅವು ಯಾವುದು?

Share :

Published June 6, 2024 at 7:49am

Update June 6, 2024 at 7:50am

    ನಿನ್ನೆ ದೆಹಲಿಯಲ್ಲಿ ಎನ್​ಡಿಎ ಸಭೆಯಲ್ಲಿ ನಾಯ್ಡು ಭಾಗಿ

    ಟಿಡಿಪಿ ಬಿಜೆಪಿ ಮುಂದೆ ಇಡುವ ಬೇಡಿಕೆಗಳು ಏನೇನು?

    ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾದ ನಾಯ್ಡು, ನಿತೀಶ್

ಉತ್ತರದಲ್ಲಿ ನಿತೀಶ್​ ಆದ್ರೆ ದಕ್ಷಿಣದಲ್ಲಿ ಚಂದ್ರಬಾಬು ನಾಯ್ಡು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಎನ್​ಡಿಎಲ್ಲಿರಬೇಕಾದ್ರೆ ಇಬ್ಬರೂ ಕೇಳುವ ಬೇಡಿಕೆಗಳಿಗೆ ಮೋದಿ ಅಸ್ತು ಎನ್ನಲೇಬೇಕಿದೆ. ಹಳೆಯ ದೋಸ್ತಿ ಚಂದ್ರಬಾಬು ನಾಯ್ಡು ಹಲವು ಸಚಿವ ಸ್ಥಾನದ ಜೊತೆಗೆ ಭಾರೀ ದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

ಅತ್ತ ನಿತೀಶ್​ ಕುಮಾರ್​ ಎನ್​ಡಿಎ ಭಾಗವಾಗಿರಲು ಹಲವು ಬೇಡಿಕೆಗಳನ್ನು ಇಟ್ಟಿದ್ರೆ ಇತ್ತ ನಾವೇನು ಕಮ್ಮಿ ಇಲ್ಲ ಅಂತ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ಅಖಾಡಕ್ಕಿಳಿದಿದ್ದಾರೆ.

ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಬೇಡಿಕೆ ಇಡುವ ಸಾಧ್ಯತೆ
ಬಿಜೆಪಿಯ ಹಳೇ ದೋಸ್ತಿ ಚಂದ್ರಬಾಬು ನಾಯ್ಡು ಈ ಬಾರಿಯ ಲೋಕಸಭೆ ಹಾಗೂ ಆಂದ್ರಪ್ರದೇಶದ ವಿಧಾನಸಭೆಯಲ್ಲಿ ಕಮಾಲ್ ಮಾಡಿದ್ದಾರೆ. ಜಗನ್​ಮೋಹನ್ ರೆಡ್ಡಿಗೆ ಮಣ್ಣುಮುಕ್ಕಿಸಿ ಭಾರೀ ಬಹುಮತದಿಂದ ಆಂಧ್ರದ ಗದ್ದುಗೆ ಹಿಡಿದಿದ್ದಾರೆ. ಲೋಕಸಭೆಯಲ್ಲೂ 16 ಸ್ಥಾನಗಳನ್ನು ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಎನ್‌ಡಿಎ ಜೊತೆಗಿರುವುದಾಗಿ ಹೇಳಿದ್ದರೂ ಡಿಮ್ಯಾಂಡ್‌ಗಳನ್ನ ಮುಂದಿಡಲು ಸಜ್ಜಾಗಿದ್ದಾರೆ.

ನಾಯ್ಡು ಬೇಡಿಕೆಗಳು!

  • ಚಂದ್ರಬಾಬು ನಾಯ್ಡು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆ ಸಾಧ್ಯತೆ
  • ಅಮರಾವತಿಯನ್ನ ರಾಜಧಾನಿ ಮಾಡುವ ಕನಸು ಹೊಂದಿರುವ ನಾಯ್ಡು
  • ಜಗನ್‌ ಅಧಿಕಾರ ಹಿಡಿಯುತ್ತಲೇ ರಾಜಧಾನಿಯನ್ನು ವಿಜಯವಾಡಕ್ಕೆ ಶಿಫ್ಟ್‌
  • ಅಮರಾವತಿ ರಾಜಧಾನಿ ಮಾಡಲು ಮುಂದು, ಇಲ್ಲೇ ಪ್ರಮಾಣ ವಚನ
  • ರಾಜಧಾನಿ ಅಭಿವೃದ್ಧಿ ಸೇರಿ ಭರವಸೆ ಈಡೇರಿಸಬೇಕಾದ ಅನಿವಾರ್ಯತೆ
  • ಆಂಧ್ರಕ್ಕೆ ಹೈದರಾಬಾದ್‌ನಿಂದ ಬರುವ ಆದಾಯಕ್ಕೂ ಕೊಕ್ಕೆ ಹಿನ್ನೆಲೆ ಸಂಕಷ್ಟ
  • ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಮುಂದಿಡೋ ಸಾಧ್ಯತೆ

ಲೋಕಸಭೆ ಸ್ಪೀಕರ್ ಸ್ಥಾನದ ಜೊತೆ ಮಂತ್ರಿಗಿರಿ ಮೇಲೂ ಕಣ್ಣು
ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ಜೊತೆಗೆ ನಾಯ್ಡು ಪ್ರಮುಖ ಸಚಿವ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಮೊದಲು ಸ್ಪೀಕರ್ ಸ್ಥಾನ ಕೇಳಿದೆ. ಈ ಹಿಂದೆ ವಾಜಪೇಯಿ ಅವಧಿಯಲ್ಲಿ ಟಿಡಿಪಿ ಪಕ್ಷದ ಜಿಎಂಸಿ ಬಾಲಯೋಗಿ ಲೋಕಸಭಾ ಸ್ಪೀಕರ್ ಆಗಿದ್ರು. ಈಗ ಮತ್ತೆ 16 ಸ್ಥಾನ ಗೆದ್ದಿರುವುದರಿಂದ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಬೇಡಿಕೆ ಇಟ್ಟಿದೆ. ಇದರ ಜೊತೆಗೆ 5-6 ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಹಣಕಾಸು ಖಾತೆ, ಐಟಿ ಮತ್ತು ಸಂವಹನ, ಕೃಷಿ ಮಂತ್ರಾಲಯ, ಜಲಶಕ್ತಿ ಸಾರಿಗೆ, ಆರೋಗ್ಯ ಮತ್ತು ಗ್ರಾಮೀಣ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ:ಬೆನ್ನು ಬಿಡದ ಬೇತಾಳದಂತೆ ಕಾಡಿದ ದುರಾದೃಷ್ಟ.. 11 ವರ್ಷದಲ್ಲಿ 9 ಪಂದ್ಯ.. ಕಪ್​ ನಮ್ದಲ್ಲ..!

ಚುನಾವಣೆ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟದಿಂದ ದೊಡ್ಡ ದೊಡ್ಡ ಆಫರ್‌ಗಳು ಬರುತ್ತಿವೆ. ಆ ಆಫರ್‌ ರಿಜೆಕ್ಟ್‌ ಮಾಡಿ ಮೋದಿ ಜೊತೆಯೇ ನಿಲ್ಲಲು ನಾಯ್ಡು ದೊಡ್ಡ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಬಗ್ಗೆ ಅಮಿತ್‌ ಶಾ ಹಾಗೂ ಮೋದಿ ಯಾವ ನಿರ್ಧಾರ ಕೈಗೊಳ್ತಾರೆ ಕಾದು ನೋಡಬೇಕಿದೆ. ಅದರಲ್ಲೂ ನಾಯ್ಡು ರಾಜಕೀಯ ಇತಿಹಾಸವನ್ನು ನೋಡಿಕೊಂಡು ಬಂದಿರುವ ಕೇಂದ್ರ ನಾಯಕರು ಬಹಳ ಮುನ್ನೆಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಮುಂದೆ ನಾಯ್ಡು ಭಾರೀ ಡಿಮ್ಯಾಂಡ್.. ದೊಡ್ಡ ದೊಡ್ಡ ಹುದ್ದೆಗಳ ಮೇಲೆ ಕಣ್ಣು.. ಅವು ಯಾವುದು?

https://newsfirstlive.com/wp-content/uploads/2024/06/CHANDRABABU.jpg

Load More