newsfirstkannada.com

ಬೆನ್ನು ಬಿಡದ ಬೇತಾಳದಂತೆ ಕಾಡಿದ ದುರಾದೃಷ್ಟ.. 11 ವರ್ಷದಲ್ಲಿ 9 ಪಂದ್ಯ.. ಕಪ್​ ನಮ್ದಲ್ಲ..!

Share :

Published June 5, 2024 at 6:52am

Update June 5, 2024 at 1:00pm

    T20 ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಪಂದ್ಯ ಆರಂಭಕ್ಕೆ ಕೌಂಟ್​ಡೌನ್

    ಅಮೆರಿಕದಲ್ಲಿ ವರ್ಲ್ಡ್​​ಕಪ್​ ಗೆಲ್ಲಲು ಪಣ ತೊಟ್ಟ ರೋಹಿತ್​ ಶರ್ಮಾ ಬಳಗ

    ಈ ಬಾರಿ ಬ್ರೇಕ್​ ಬೀಳುತ್ತಾ, ಕಪ್ ಗೆಲ್ಸಿ ಕೊಡ್ತಾರಾ ರೋಹಿತ್ ಬಾಯ್ಸ್?

65 ದಿನಗಳ ಕಾಲ ನಡೆದ ಐಪಿಎಲ್​​ ಕ್ರಿಕೆಟ್​ ಜಾತ್ರೆ ಫ್ಯಾನ್ಸ್​ಗೆ ಫುಲ್​ ಮೀಲ್ಸ್​ ಮನರಂಜನೆ ನೀಡ್ತು. ರಣರೋಚಕ ಕಾದಾಟಗಳು ಟ್ವಿಸ್ಟ್​ ಅಂಡ್ ಟರ್ನ್​​, ಬೌಂಡರಿ-ಸಿಕ್ಸರ್​​ಗಳ ಸುರಿಮಳೆ, ಬೌಲರ್​​ಗಳ ವಿಕೆಟ್​ ಬೇಟೆ. ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇದೀಗ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​ 17ಕ್ಕೆ ಅದ್ಧೂರಿ ತೆರೆಬಿದ್ದಿದೆ. ಎಲ್ಲರ ಗಮನ ಟಿ20 ವಿಶ್ವಕಪ್​​ ಕಡೆಗೆ ಶಿಫ್ಟ್​ ಆಗಿದೆ.

T20 ವಿಶ್ವಕಪ್​ ಟೀಮ್​ ಇಂಡಿಯಾ ರೆಡಿ..!
ಮಹೇಂದ್ರ ಸಿಂಗ್​ ಧೋನಿ. ಟೀಮ್​​ ಇಂಡಿಯಾ ಕಂಡ ಸರ್ವಶ್ರೇಷ್ಠ ಕ್ಯಾಪ್ಟನ್​. ಮೂರೂ ಮಾದರಿಯಲ್ಲಿ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಿದ ನಾಯಕ. ನಾಯಕನ ಪಟ್ಟವೇರಿದ 49 ದಿನಗಳಲ್ಲೇ ಟಿ20 ವಿಶ್ವಕಪ್​ ಗೆದ್ದು ಕೊಟ್ಟಿದ್ದ ಧೋನಿ, ಭಾರತೀಯರ 28 ವರ್ಷಗಳ ಏಕದಿನ ವಿಶ್ವಕಪ್​​​ನ ಕೊರಗಿಗೂ ಬ್ರೇಕ್​​ ಹಾಕಿದ್ರು. 2013ರಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನೂ ಗೆದ್ದು ಬೀಗಿದ್ರು. ಚಾಂಪಿಯನ್​ ಧೋನಿ 3 ಮಾದರಿಯ ಟ್ರೋಫಿ ಗೆಲ್ಲಿಸಿದ್ರು. 2013 ಕೊನೆ, ಆ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಸತತ ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ಲೀಗ್​​ ಗೆಲ್ಲೋ ಇಂಡಿಯಾಗೆ ನಾಕೌಟ್​​ನಲ್ಲಿ ಕಂಟಕ..!
2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಕಳಪೆ ಪರ್ಫಾಮೆನ್ಸ್​ ನೀಡ್ತಿಲ್ಲ. ಲೀಗ್​ ಹಂತದಲ್ಲಿ ಜಬರ್ದಸ್ತ್​ ಪರ್ಫಾಮೆನ್ಸ್ ನೀಡ್ತಿದೆ. ಲೀಗ್​ ಸ್ಟೇಜ್​ನಲ್ಲಿ ಅಬ್ಬರದ ಆಟವಾಡೋ ತಂಡ ನಾಕೌಟ್​​​ನಲ್ಲಿ ಮುಖಭಂಗ ಅನುಭವಿಸೋದು ಖಾಯಂ ಆಗಿಬಿಟ್ಟಿದೆ.

2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಭಾರತ
2014ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ 6 ವಿಕೆಟ್​ಗಳ ಸೋಲುಂಡ ಟೀಮ್​ ಇಂಡಿಯಾ 2015ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ 95 ರನ್​ಗಳ ಸೋಲುಂಡಿತ್ತು. 2016 ಟಿ 20 ವಿಶ್ವಕಪ್​ ಸೆಮಿಸ್​ನಲ್ಲಿ 95 ರನ್​ಗಳ ಸೋಲುಂಡು ನಿರ್ಗಮಿಸಿದ್ದ ಬ್ಲೂ ಬಾಯ್ಸ್​ ಪಡೆ, 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ 180 ರನ್​ಗಳ ಮುಖಭಂಗ ಅನುಭವಿಸಿತ್ತು. 2019ರ ಏಕದಿನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ 18 ರನ್​ಗಳ ಸೋಲುಂಡಿದ್ದ ಟೀಮ್​ ಇಂಡಿಯಾ, 2021 ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ 8 ವಿಕೆಟ್​, 2022ರ ಟಿ20 ವಿಶ್ವಕಪ್​ನಲ್ಲಿ 10 ವಿಕೆಟ್​ಗಳ ಸೋಲಿಗೆ ಶರಣಾಗಿತ್ತು. ಕಳೆದ ವರ್ಷ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ 209 ರನ್​ಗಳಿಂದ ಮುಗ್ಗರಿಸಿದ ಭಾರತ ತಂಡ, ಏಕದಿನ ವಿಶ್ವಕಪ್​ ಫೈನಲ್​ನಲ್ಲಿ 6 ವಿಕೆಟ್​ಗಳ ಸೋಲಿಗೆ ಶರಣಾಗಿತ್ತು.

ಐಸಿಸಿ ಟೂರ್ನಮೆಂಟ್​ನಲ್ಲಿ ರೋಹಿತ್​ಗೆ ಅನ್​ಲಕ್
2011 ಏಕದಿನ ವಿಶ್ವಕಪ್​ ತಂಡದಿಂದಲೇ ಹೊರಬಿದ್ದಿದ್ದ ರೋಹಿತ್​ ಶರ್ಮಾ, ಆ ಬಳಿಕ ಭಾರತದ ಪರ ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ತಂಡವನ್ನ ಪ್ರತಿನಿಧಿಸಿದ್ದಾರೆ. ಪ್ರತಿಷ್ಟಿತ ಟೂರ್ನಿಗಲ್ಲಿ ಸಾಲಿಡ್​ ಪರ್ಫಾಮೆನ್ಸ್​ ಕೂಡ ಕೊಟ್ಟಿದ್ದಾರೆ. ಹಿಟ್​​ ಮ್ಯಾನ್​​ ಕಪ್​ ಗೆಲ್ಲುವಲ್ಲಿ ಮಾತ್ರ ಎಡವಿದ್ದಾರೆ.

ವಿರಾಟ್​ ಕೊಹ್ಲಿಯ ಬೆನ್ನುಬಿದ್ದ ದುರಾದೃಷ್ಟ.!
ಅಂಡರ್​ 19 ವಿಶ್ವಕಪ್​ ಗೆದ್ದ ಬಳಿಕ ಟೀಮ್​​ ಇಂಡಿಯಾಗೆ ಕಾಲಿಟ್ಟ ಕೊಹ್ಲಿ, 2011ರಲ್ಲಿ ವಿಶ್ವಕಪ್​, 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಜಯಿಸಿದ್ರು. ಆದ್ರೆ, ಆ ಬಳಿಕ ದುರಾದೃಷ್ಟ ಬೆನ್ನುಬಿದ್ದಿದೆ. 2014ರ ಟಿ20 ವಿಶ್ವಕಪ್​, 2016 ಟಿ20 ವಿಶ್ವಕಪ್​, ಮತ್ತು 2023ರ ಏಕದಿನ ವಿಶ್ವಕಪ್​ನಲ್ಲಿ ಅಮೋಘ ಆಟವಾಡಿ ಪ್ಲೇಯರ್​ ಆಫ್​ ದ ಟೂರ್ನಮೆಂಟ್​ ಅನ್ನಿಸಿಕೊಂಡ ಕೊಹ್ಲಿಗೆ ಐಸಿಸಿ ಟ್ರೋಫಿ ಗೆಲ್ಲಲಾಗಲಿಲ್ಲ.

ಇದನ್ನೂ ಓದಿ:ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

ನಾಯಕ’ರಾಗಿ ಇಬ್ಬರಿಗೂ ICC ಟೂರ್ನಿಯಲ್ಲಿ ಬ್ಯಾಡ್​ಲಕ್.​.!
ನಾಯಕನಾಗಿ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್ ಹಾಗೂ 2019 ವಿಶ್ವಕಪ್​ ಸೆಮಿಸ್​ನಲ್ಲಿ ಟೀಮ್​ ಇಂಡಿಯಾ ಸೋಲುಂಡಿತು. 2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲೂ ಕ್ಯಾಪ್ಟನ್​ ಕೊಹ್ಲಿ ಅನುಭವಿಸಿದ್ದು ನಿರಾಸೆಯನ್ನೇ. ರೋಹಿತ್​ ನಾಯಕತ್ವದಲ್ಲಿ 2022 ಟಿ20 ವಿಶ್ವಕಪ್​ ಸೆಮಿಫೈನಲ್​ ಸೋತ ಟೀಮ್​ ಇಂಡಿಯಾ, 2023ರಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಹಾಗೂ ಏಕದಿನ ವಿಶ್ವಕಪ್​​ನಲ್ಲಿ ಸೋಲುಂಡಿದೆ.

ಇದೀಗ ಮತ್ತೊಂದು ವಿಶ್ವಕಪ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಈ ಬಾರಿಯೂ ಕೊಹ್ಲಿ-ರೋಹಿತ್​ ಮೇಲೆಯೇ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಬಹುತೇಕ ಇಬ್ಬರಿಗೂ ಇದನ್ನೇ ಕೊನೆಯ ಐಸಿಸಿ ಟೂರ್ನಿ ಎನ್ನಲಾಗ್ತಿದೆ. ಈ ಕೊನೆಯ ಟೂರ್ನಿಯಲ್ಲಿ ಕಪ್​ ಗೆದ್ದು ಇಬ್ಬರೂ ಟೂರ್ನಿಗೆ ಗುಡ್​ ಬೈ ಹೇಳಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆನ್ನು ಬಿಡದ ಬೇತಾಳದಂತೆ ಕಾಡಿದ ದುರಾದೃಷ್ಟ.. 11 ವರ್ಷದಲ್ಲಿ 9 ಪಂದ್ಯ.. ಕಪ್​ ನಮ್ದಲ್ಲ..!

https://newsfirstlive.com/wp-content/uploads/2024/05/Team-India_m.jpg

Load More