newsfirstkannada.com

‘CBI ತನಿಖೆ ಆದ್ರೆ ಮಾತ್ರ ಬಹುಕೋಟಿ ಹಗರಣದ ರಹಸ್ಯ ಬಯಲು’- ಚಂದ್ರಶೇಖರ್‌ ಪತ್ನಿ ಸ್ಫೋಟಕ ಹೇಳಿಕೆ

Share :

Published June 1, 2024 at 1:17pm

Update June 1, 2024 at 1:33pm

    SIT ತನಿಖೆ ಬೇಡ ಈ ಪ್ರಕರಣದಲ್ಲಿ ಸಿಬಿಐ ತನಿಖೆಯೇ ಆಗಬೇಕು

    ಸಚಿವರ ಮೌಖಿಕ ಆದೇಶ ಇಲ್ಲದೇ ಈ ಹಗರಣ ನಡೆಯುತ್ತದೆಯೇ?

    ಹಣದ ಹೊರೆತು ಉಳಿದ ಅಂಶಗಳು ಯಾಕೆ ಬಹಿರಂಗವಾಗಿಲ್ಲ?

ಶಿವಮೊಗ್ಗ: ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಪತ್ನಿ ಕವಿತಾ ಅವರು ನ್ಯೂಸ್‌ ಫಸ್ಟ್‌ ಜೊತೆ ಮಾತನಾಡಿ ರಾಜ್ಯ ಸರ್ಕಾರದ ತನಿಖೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ನಮಗೆ SIT ತನಿಖೆ ಬೇಡ. ಈ ಪ್ರಕರಣದಲ್ಲಿ ಸಿಬಿಐ ತನಿಖೆಯೇ ಆಗಬೇಕು. ಸಚಿವರ ಮೌಖಿಕ ಆದೇಶ ಅಂದರೆ ಅವರಿಗೆ ಗೊತ್ತಿಲ್ಲದೇ ಹಗರಣ ನಡೆಯುತ್ತದೆಯೇ? ಸಚಿವರು ಇದರಲ್ಲಿ ಭಾಗಿಯಾಗದೇ ಇರ್ತಾರಾ? ಹೀಗಾಗಿ ಸಿಬಿಐ ತನಿಖೆಯೇ ಆಗಬೇಕು ಎಂದು ಚಂದ್ರಶೇಖರ್ ಅವರ ಪತ್ನಿ ಕವಿತಾ ಆಗ್ರಹಿಸಿದ್ದಾರೆ.

ಇನ್ನು, ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಏನು ಮಾಡ್ತಾ ಇತ್ತು. ಇಷ್ಟೊಂದು ಹಣ ಬಿಡುಗಡೆ ಆಗಿರುತ್ತೆ ಎಂದು ಸಚಿವರಿಗೆ ಗೊತ್ತಿರಿಲ್ವಾ. ಅವರು ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ಭಾಗಿಯಾಗಿರಬಹುದು. ನಮಗೆ ರಾಜ್ಯ ಸರ್ಕಾರದ ತನಿಖೆ ಮೇಲೆ ನಂಬಿಕೆ ಇಲ್ಲ. ಅಷ್ಟು ಹಣ ಲೆಕ್ಕ ಸಿಗದ ಹಾಗೆ ದುಡ್ಡನ್ನು ಭ್ರಷ್ಟಾಚಾರ ಮಾಡಿ ಒಬ್ಬ ಅಧಿಕಾರಿಯನ್ನು ಸಾಯಿಸಿ ಬಿಟ್ರಲ್ಲಾ ಎಂದು ಕವಿತಾ ಅವರ ಕಣ್ಣೀರು ಹಾಕಿದರು.

ಇದನ್ನೂ ಓದಿ: BREAKING: ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್.. ಇಬ್ಬರು ಹಿರಿಯ ಅಧಿಕಾರಿಗಳು ಅರೆಸ್ಟ್! 

ಬಂಧಿತರಿಗೆ ಹೆಚ್ಚಿನ ಶಿಕ್ಷೆ ಆಗಬೇಕು. ಮನೆಗೆ ಬಂದ ಎಲ್ಲರೂ ಭರವಸೆ ನೀಡಿದ್ದಾರೆ. ನ್ಯಾಯ ಸಿಗಬಹುದು ಎಂಬ ನಂಬಿಕೆ ಇದೆ. ನಮ್ಮ ಮನೆಯವರ ಸಾವಿಗೆ ನ್ಯಾಯ ಸಿಗಬೇಕು. ಮನೆಯವರು ಎಷ್ಟು ನೋವು ಅನುಭವಿಸಿರಬಹುದು. ಬ್ಯಾಂಕ್‌ನ ಮಹಿಳಾ ‌ಅಧಿಕಾರಿಯ ಬಂಧನ‌ ಆಗಿಲ್ಲ. ಮಹಿಳೆಯ ನೋವು ಏನು ಎಂದು ಅವರಿಗೆ ಗೊತ್ತಾಗಬೇಕು.

ಇದನ್ನೂ ಓದಿ: EXCLUSIVE: ವಾಲ್ಮೀಕಿ ನಿಗಮ ಅಕ್ರಮ; ₹89.62 ಕೋಟಿ ಹಣ ಹೋಗಿದ್ದು ಯಾರ ಖಾತೆಗೆ? 

ಈ ತನಕ ಬರೀ ಹಣದ ಮೊತ್ತ ಮಾತ್ರ ಹೊರಗೆ ಬಂದಿದೆ. ಉಳಿದ ಅಂಶಗಳು ಯಾಕೆ ಬಹಿರಂಗವಾಗಿಲ್ಲ. ನನ್ನ ಗಂಡನ ಸಾವಿನ‌‌ ಹಿಂದಿನ ‌ಸತ್ಯ ಹಾಗೂ ವಾಸ್ತವಾಂಶ ಗೊತ್ತಾಗಬೇಕು. ಸಿಎಂ ಬಳಿಯೂ ಇದನ್ನೇ ಕೇಳುತ್ತೇನೆ. ಮನೆಯ ‌ಆದಾಯದ ಮೂಲವೇ ಇಲ್ಲವಾಗಿದೆ. ನಾವು ತೊಂದರೆಯಲ್ಲಿದ್ದೇವೆ, ಮುಂದೆ ಏನು ಎಂದು ಕವಿತಾ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘CBI ತನಿಖೆ ಆದ್ರೆ ಮಾತ್ರ ಬಹುಕೋಟಿ ಹಗರಣದ ರಹಸ್ಯ ಬಯಲು’- ಚಂದ್ರಶೇಖರ್‌ ಪತ್ನಿ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/06/Valmiki-Nigama-Scam-1.jpg

Load More