/newsfirstlive-kannada/media/post_attachments/wp-content/uploads/2024/10/Channapatna-HDK-Nikhil-Kumaraswamy.jpg)
ಕೊನೆಗೂ ರಾಜ್ಯದ ಉಪ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣದ ರಣಾಂಗಣಕ್ಕೆ ವೇದಿಕೆ ರೆಡಿ ಆಗಿದೆ. ನವೆಂಬರ್ 13ಕ್ಕೆ ಸತ್ವ ಪರೀಕ್ಷೆ ಎದುರಾಗಲಿದೆ. ಆದ್ರೆ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಯೇ ದೋಸ್ತಿಗೆ ತಲೆ ನೋವು ತರಿಸಿದೆ. ಇಡೀ ರಾಷ್ಟ್ರದಲ್ಲಿ ಕೇರಳದ ವಯನಾಡು ಹೈವೋಲ್ಟೇಜ್ ಕ್ಷೇತ್ರವಾಗಿ ಗಮನ ಸೆಳೆಯುತ್ತಿದೆ.
ಹರಿಯಾಣ, ಜಮ್ಮು ಕಾಶ್ಮೀರ ಎಲೆಕ್ಷನ್ ಮುಗಿದ ಬೆನ್ನಲ್ಲೆ ಮತ್ತೆರಡು ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗೆ ಎಲೆಕ್ಷನ್ ನಡೆಯಲಿದ್ದು, ಇಂಡಿಯಾ ಮತ್ತು ಎನ್ಡಿಎ ನಡುವೆ ನೇರ ಸಮರ ನಡೆಯಲಿದೆ. ಇದರ ಜೊತೆಗೆ ಬೈಎಲೆಕ್ಷನ್ ಸಹ ಅನೌನ್ಸ್ ಆಗಿದ್ದು, ಕೇರಳದ ವಯನಾಡು ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ:ಚನ್ನಪಟ್ಟಣ ಬೈ ಎಲೆಕ್ಷನ್; ಮೈತ್ರಿ ಟಿಕೆಟ್ ಯಾರ ಪಾಲಾಗುತ್ತೆ.. ಕಾಂಗ್ರೆಸ್ಗೆ ಹೋಗ್ತಾರಾ ಸಿ.ಪಿ ಯೋಗೇಶ್ವರ್?
ಪ್ರಿಯಾಂಕಾ ಗಾಂಧಿ ಎಲೆಕ್ಷನ್ ಪಾಲಿಟಿಕ್ಸ್ಗೆ ಎಂಟ್ರಿ!
ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಧುಮುಕ್ತಿದ್ದಾರೆ.. ರಾಹುಲ್ ರಾಜೀನಾಮೆ ಕಾರಣಕ್ಕೆ ತೆರವಾದ ವಯನಾಡನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಖಚಿತವಾಗಿದೆ. ಬೈ ಎಲೆಕ್ಷನ್ ಡೇಟ್ ಹೊರ ಬೀಳ್ತಿದ್ದಂತೆ ಪ್ರಿಯಾಂಕಾ ಗಾಂಧಿ ಹೆಸರನ್ನ ಕಾಂಗ್ರೆಸ್ ಘೋಷಣೆ ಮಾಡಿದೆ.. ಈ ಮೂಲಕ ಸಂಸತ್ನಲ್ಲಿ ಅಣ್ಣ-ತಂಗಿ ಕಾಂಗ್ರೆಸ್ ಮುನ್ನಡೆಸುವ ಇರಾದೆ ಹೊಂದಿದ್ದಾರೆ.
ಮೈತ್ರಿಗೆ ಸೆಡ್ಡು ಹೊಡೆದು ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಖಚಿತ
ರಾಜ್ಯದ ಶಕ್ತಿ ಕ್ಷೇತ್ರವಾಗಿ ಚನ್ನಪಟ್ಟಣ ಮಾರ್ಪಟ್ಟಿದೆ. ಕೇಂದ್ರ ಸಚಿವ ಹೆಚ್ಡಿಕೆ, ಡಿಸಿಎಂ ಡಿಕೆಶಿ, ಮಾಜಿ ಸಚಿವ ಸಿಪಿವೈ ನಡುವೆ ನೇರ ಯುದ್ಧಕ್ಕೆ ಸಜ್ಜಾಗಿದೆ. ಕಮಲ-ದಳ ಮೈತ್ರಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಕಣಕ್ಕಿಳಿಯಲು ಸಿ.ಪಿ.ಯೋಗೇಶ್ವರ್ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಮತ್ತೊಂದು ಅಸ್ತ್ರ ಹೂಡ್ತಿದೆ. ಸ್ಪರ್ಧೆಗೆ ನಿಖಿಲ್ ಹಿಂದೇಟು ಹಾಕ್ತಿರುವ ಕಾರಣ ಮತ್ತೆ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸೈನಿಕನ ಬಂಡಾಯದ ಬಗ್ಗೆ ಡಿಕೆಶಿ ಮತ್ತು ವಿಜಯೇಂದ್ರ ಮಾತ್ನಾಡಿದ್ದಾರೆ.
ಇದನ್ನೂ ಓದಿ:Wayanad: ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿಯಾದ ಪ್ರಿಯಾಂಕಾ ಗಾಂಧಿ; ಏನಿದರ ಪ್ಲಾನ್?
ಈವರೆಗೆ ಮುಡಾದಲ್ಲಿ ಮೂಡಿ ಆಗಿದ್ದ ನಾಯಕರಿಗೆ ಬೈಎಲೆಕ್ಷನ್ ಅಗ್ನಿ ಪರೀಕ್ಷೆ ಒಡ್ಡಿದೆ. ಅದರಲ್ಲೂ ಸಿದ್ದು ವರ್ಚಸ್ಸು, ಬಿಜೆಪಿ ಸವಾಲು, ಹೆಚ್ಡಿಕೆ-ಡಿಕೆಶಿಯ ಪ್ರತಿಷ್ಠೆ, ಯೋಗೇಶ್ವರ್ರ ಅಸ್ತಿತ್ವದ ಹೋರಾಟಕ್ಕೆ ಈ ಮೂರು ಬೈ ಎಲೆಕ್ಷನ್ಗಳು ಸಾಕ್ಷಿ ಆಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ