/newsfirstlive-kannada/media/post_attachments/wp-content/uploads/2024/06/Bike-Fire.jpg)
ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲ್ಪಿಸಿ ಸಿಲಿಂಡರ್ ಸ್ಫೋಟಗೊಂಡು ಎರಡು ಅಂತಸ್ತಿನ ಕಟ್ಟಡ ಬೆಂಕಿಗಾಹುತಿಯಾಗಿದೆ. ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ 18 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸೂರತ್ನ ಲಿಂಬಯತ್ ಬಳಿಯ ಲಕ್ಷ್ಮೀ ಪಾರ್ಕ್ ಸೊಸೈಟಿ ಬಳಿ ಈ ದುರ್ಘಟನೆ ನಡೆದಿದೆ. ಬೆಳಿಗ್ಗೆ 5;30ರ ಸುಮಾರಿಗೆ ಸಿಲಿಂಡರ್ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡಿದೆ. ರಾತ್ರಿ ಪೂರ್ತಿ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಹಾಕಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿದೆ. ಹೀಗಾಗಿ ಬೆಂಕಿ ಕಾಣಿಸಿಕೊಂಡು ಪಸರಿಸಿದೆ. ಪರಿಣಾಮ ಹತ್ತಿರದ ಸಿಲಿಂಡರ್ಗೂ ತಗುಲಿದ್ದು ಸ್ಫೋಟಗೊಂಡಿದೆ.
ಇದನ್ನೂ ಓದಿ: ಘಾಟ್ ರಸ್ತೆಯಲ್ಲಿ ಉರುಳಿ ಬಿದ್ದ ಸರ್ಕಾರಿ ಬಸ್.. ಚಾಲಕ, ಕಂಡಕ್ಟರ್ ಸೇರಿ ನಾಲ್ವರು ಸಾವು
ಮನೆಯಲ್ಲಿ ಮಲಗಿದ್ದ 18 ವರ್ಷದ ಯುವತಿ ದೋಲರಾಮ್ ಸಿರ್ವಿ ಸಾವನ್ನಪ್ಪಿದ್ದಾಳೆ. ಆಕೆಯ ತಾಯಿ ಚಂಪಾ ಸಿರ್ವಿ (42), ತಂದೆ ಡೋಲಾರಾಮ್ ಸಿರ್ವಿ (46), ಸಹೋದರಿ ದೇವಿಕಾ (14) ಮತ್ತು ಚಿರಾಗ್ (8) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಸ್ಮಿಮರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Kudos to surat fire team! ?? pic.twitter.com/F7dBmZwZwW
— Mansi Joshi (@MansiJoshi_17)
Kudos to surat fire team! 👏🏻 pic.twitter.com/F7dBmZwZwW
— Mansi Joshi 🇮🇳 (@MansiJoshi_17) June 21, 2024
">June 21, 2024
ಬೆಂಕಿ ಕಾಣಿಸಿಕೊಂಡತೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದಾರೆ. ಒಂದು ಗಂಟೆಯವರೆಗೆ ಕಾರ್ಯಚರಣೆ ಮಾಡಿ ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ