Chennai Video: ರಸ್ತೆ ಪೂರ್ತಿ ನೀರು, ಫ್ಲೈ ಓವರ್​ ಮೇಲೆ ಕಾರು! ಮಳೆ ನೀರಿನಿಂದ ರಕ್ಷಿಸಲು ಎಂಥಾ ಐಡಿಯಾ ಗುರೂ

author-image
AS Harshith
Updated On
Chennai Video: ರಸ್ತೆ ಪೂರ್ತಿ ನೀರು, ಫ್ಲೈ ಓವರ್​ ಮೇಲೆ ಕಾರು! ಮಳೆ ನೀರಿನಿಂದ ರಕ್ಷಿಸಲು ಎಂಥಾ ಐಡಿಯಾ ಗುರೂ
Advertisment
  • ನಿರಂತರ ಮಳೆಯಿಂದಾಗಿ ತತ್ತರಿಸಿದ ತಮಿಳುನಾಡು
  • ಪಾರ್ಕಿಂಗ್​ ಮಾಡಲು ಫ್ಪೈ ಓವರ್​ ಏರಿದ ಕಾರುಗಳು
  • ಚೆನ್ನೈನಲ್ಲಿ ಕಾರುಗಳನ್ನು ರಕ್ಷಿಸಲು ಎಂಥಾ ಐಡಿಯಾ ಮಾಡಿದ್ರು ನೋಡಿ

ನಿರಂತರ ಮಳೆಯಿಂದಾಗಿ ತಮಿಳುನಾಡು ತತ್ತರಿಸಿದೆ. ರಸ್ತೆ, ಮನೆ ಪೂರ್ತಿ ನೀರು ಆವರಿಸಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲಿ ಮಳೆ ನೀರಿನಲ್ಲಿ ಕಾರುಗಳು ಮುಳುಗಡೆಯಾಗದಂತೆ ತಡೆಯಲು ಕಾರು ಚಾಲಕರು ಹೊಸ ಐಡಿಯಾ ಕಂಡುಹಿಡಿದಿದ್ದಾರೆ. ಅದೇನೆಂದರೆ ಪ್ಲೈ ಓವರ್ ಗಳ ಮೇಲೆ ಕಾರು ಪಾರ್ಕಿಂಗ್‌ ಮಾಡುತ್ತಿದ್ದಾರೆ.

ಈ ಹಿಂದೆ ಚೆನ್ನೈನಲ್ಲಿ ಭಾರೀ ಮಳೆಯಾದಾಗ ಕಾರುಗಳು ಮುಳುಗಡೆಯಾಗಿದ್ದವು. ಕಾರುಗಳ ರಿಪೇರಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾಗಿತ್ತು. ದುಬಾರಿ, ಐಷಾರಾಮಿ ಕಾರುಗಳು ಮಳೆ ನೀರಿನಲ್ಲಿ ಮುಳುಗಡೆಯಾಗದಂತೆ ತಡೆಯಲು ಹೊಸ ಐಡಿಯಾ ಮಾಡಿದ್ದಾರೆ. ಪ್ಲೈ ಓವರ್ ನ ಒಂದು ಸೈಡ್ ಸಂಪೂರ್ಣ ಕಾರ್ ಗಳನ್ನು ಪಾರ್ಕಿಂಗ್‌ ಮಾಡಿದ್ದಾರೆ.

ಇದನ್ನೂ ಓದಿ: 6 ಅಡಿ ಎತ್ತರ, 2 ಅಡಿ ಅಗಲ.. ಅಪರೂಪದ ಮಾಸ್ತಿಕಲ್ಲು ಮತ್ತು ಶಾಸನ ಪತ್ತೆ! ಎಲ್ಲಿ?


">October 15, 2024

ಚೆನ್ನೈನ ಅನೇಕ ಪ್ಲೈ ಓವರ್ ಗಳ ಮೇಲೆಯೇ ಕಾರ್ ಗಳನ್ನು ಪಾರ್ಕಿಂಗ್‌ ಮಾಡಿದ್ದಾರೆ. ಪಾರ್ಕಿಂಗ್‌ಗೆ ಬಿಟ್ಟು ಉಳಿದ ಜಾಗದಲ್ಲಿ ಕಾರ್ ಗಳ ಸಂಚಾರ ಕಾಣಬಹುದಾಗಿದೆ. ಎತ್ತರದ ಪ್ರದೇಶಗಳಲ್ಲಿ ಜನರು ಕಾರ್ ಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Bengaluru Rain: ರಸ್ತೆ ಜಲಾವೃತ, ವಾಹನ ಸವಾರರ ಪರದಾಟ.. ಎಲ್ಲೆಲ್ಲಿ ಏನೇನಾಗಿದೆ ಗೊತ್ತಾ?

ಇನ್ನೂ 2 ದಿನ ಚೆನ್ನೈನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಚೆನ್ನೈನ ಬಹುತೇಕ ಪ್ರದೇಶಗಳು ಮುಳುಗಡೆಯಾಗುವ ಮುನ್ಸೂಚನೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment