newsfirstkannada.com

×

ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ

Share :

Published May 20, 2024 at 7:12am

Update May 20, 2024 at 7:13am

    ಧೋನಿಗೆ 42 ವರ್ಷ, ಮುಂದಿನ ವರ್ಷ ಆಡೋದು ಕಷ್ಟ

    3 ವರ್ಷಗಳಿಂದ ಧೋನಿ ನಿವೃತ್ತಿ ಬಗ್ಗೆ ಮಾತನಾಡುತ್ತಾ ಬಂದಿದ್ದೇವೆ

    ಮಾಹಿ ಮತ್ತು ಚೆನ್ನೈ ತಂಡದ ಅಭಿಮಾನಿಗಳ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ

‘‘ಎಂಎಸ್​ ಧೋನಿ ಇಂಡಿಯನ್ಸ್​ ಪ್ರೀಮಿಯರ್​ ಲೀಗ್​​ನಿಂದ ನಿವೃತ್ತರಾದ ಬಳಿಕ ಸಿಎಸ್​​ಕೆ ತಂಡ ಅಭಿಮಾನಿಗಳನ್ನು ಕಳೆದುಕೊಳ್ಳುತ್ತದೆ’’

ಪ್ಲೇಆಫ್​ ಸುತ್ತಿನಲ್ಲಿ ಆರ್​ಸಿಬಿ ವಿರುದ್ಧ ಸೋಲುಂಡ ಸಿಎಸ್​ಕೆ ತವರು ಸೇರಿದೆ. ಮತ್ತೊಂದೆಡೆ ಮಹೇಂದ್ರ ಸಿಂಗ್​ ಧೋನಿಯವರು ಇದು ಕೊನೆಯ ಐಪಿಎಲ್​ ಆಗಿದ್ದು, ನಿವೃತ್ತಿ ಹೊಂದಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮಾಹಿ ನಿನ್ನೆ ಚೆನ್ನೈನಲ್ಲಿ ಆಡಿರುವ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಿವೃತ್ತಿಯ ಹಿಂಟ್​​ ಕೊಟ್ಟಂತಿದೆ. ಇಂಥಾ ಸನ್ನಿವೇಶಗಳ ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಅವರು ಸಿಎಸ್​ಕೆಯ ಕುರಿತು ಭವಿಷ್ಯ ನುಡಿದಿದ್ದಾರೆ.

ವಿರೇಂದ್ರ ಸೆಹ್ವಾಗ್​, ‘‘ಧೋನಿ ಇಂಡಿಯನ್ಸ್​ ಪ್ರೀಮಿಯರ್​ ಲೀಗ್​​ನಿಂದ ನಿವೃತ್ತರಾದ ಬಳಿಕ ಸಿಎಸ್​​ಕೆ ತಂಡ ಅಭಿಮಾನಿಗಳನ್ನು ಕಳೆದುಕೊಳ್ಳುತ್ತದೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರುನಾಡಿನಲ್ಲಿ ಮೇಘರಾಜನ ಆರ್ಭಟ.. ಮದುವೆ ಹಾಲ್​, ಹೋಟೆಲ್​ಗೆ ನುಗ್ಗಿದ ಮಳೆನೀರು

ಇನ್ನೊಂದು ವರ್ಷ ಆಡೋದು ಕಷ್ಟಕರ.

ಬಳಿಕ ಮಾತು ಮುಂದುವರೆಸಿದ ಅವರು, ‘‘ಮೂರು ವರ್ಷಗಳಿಂದ ಧೋನಿ ನಿವೃತ್ತಿ ಬಗ್ಗೆ ಮಾತನಾಡುತ್ತಾ ಬಂದಿದ್ದೇವೆ. ಆದರೂ ಅವರು ಅಚ್ಚರಿ ನೀಡುವಂತೆ ಹಿಂತಿರುಗುತ್ತಿದ್ದಾರೆ. ನನ್ನ ಪ್ರಕಾರ ಈಗ ಅವರಿಗೆ 42 ವರ್ಷ, ಕೊನೆಯ ಋತುವಿನಲ್ಲಿ ಆಡಿದ್ದಾರೆ. ಇನ್ನೊಂದು ವರ್ಷ ಆಡೋದು ಕಷ್ಟಕರ. ಮುಂದಿನ ವರ್ಷ 43 ಆಗುತ್ತದೆ. ಆ ವಯಸ್ಸು ತಲುಪಿದಾಗ ಬೆರಳಿನಲ್ಲಿನ ನೋವು ಮುಖದಲ್ಲಿ ಗೋಚರಿಸುತ್ತದೆ’’ ಎಂದು ಹೇಳಿದ್ದಾರೆ.

‘‘ಚೆನ್ನೈ ತಂಡಕ್ಕೆ ಉತ್ತಮ ಬೆಂಬಲವಿದೆ. ಇದಕ್ಕೆ ಧೋನಿ ಕಾರಣ. ಹಳದಿ ಜೆರ್ಸಿಯಲ್ಲಿ ಬಹಳಷ್ಟು ಮಂದಿಯನ್ನು ನೋಡಿದ್ದೇವೆ. ಧೋನಿ ಐಪಿಎಲ್​ನಿಂದ ನಿವೃತ್ತಿಯಾದರೆ ಇದು ಹೀಗೆ ಮುಂದುವರೆಯುತ್ತದೆ ಎಂದು ನಾನು ಭಾವಿಸೋದಿಲ್ಲ. ದೇಶದ ವಿವಿಧ ಭಾಗಗಳಿಗೆ ಅಭಿಮಾನಿಗಳು ಪ್ರಯಾಣಿಸೋದನ್ನು ನೀವು ನೋಡೋದಿಲ್ಲ’’ ಎಂದು ವೀರೇಂದ್ರ ಸೆಹ್ವಾಗ್​ ಹೇಳಿದ್ದಾರೆ.

ಇದನ್ನೂ ಓದಿ: VIDEO: ಹಸ್ತಲಾಘವ ಮಾಡದೆ ಡ್ರೆಸ್ಸಿಂಗ್​ ರೂಂ ಸೇರಿದ ಮಾಹಿ.. ಹುಡುಕಿಕೊಂಡು ಹೋದ ವಿರಾಟ್​!

ಸಚಿನ್​ ತೆಂಡುಲ್ಕರ್​​ 20 ವರ್ಷಗಳ ಕಾಲ ಆಟವಾಡಿ ನಿವೃತ್ತಿ ಘೋಷಿಸಿಕೊಂಡರು. ಧೋನಿ ವಿಚಾರದಲ್ಲೂ ಹೀಗೆ ಆಗಿದೆ. ಅವರು ಮೊದಲಿನಿಂದಲೂ ಫ್ರಾಂಚೈಸಿಯೊಂದಿಗೆ ಇದ್ದಾರೆ. ನೀವು ತಂಡಕ್ಕಾಗಿ ಆಡಿದಾಗ ಎಲ್ಲರೂ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ’’ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ

https://newsfirstlive.com/wp-content/uploads/2024/04/dhoni2.jpg

Load More