newsfirstkannada.com

IPL: ಅದೇ ರಾಗ, ಅದೇ ಹಾಡು.. ಕೈಕೊಟ್ಟ ಕೊಹ್ಲಿ, ಮ್ಯಾಕ್ಸಿ.. ಮೊದಲ ಪಂದ್ಯ ದೇವರಿಗೆ ಎಂದ RCB ಫ್ಯಾನ್ಸ್

Share :

Published March 23, 2024 at 9:48am

    ಅನುಜ್​​ ರಾವತ್​- ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​ನಿಂದ RCB ಚೇತರಿಕೆ

    ಮುಸ್ತಫಿಜುರ್​ ರೆಹ್ಮಾನ್ ಕೊಟ್ಟ ಬೌಲಿಂಗ್​ ಶಾಕ್​ಗೆ ಆರ್​​ಸಿಬಿ ಕಂಗಾಲು​

    ರವೀಂದ್ರ ಜಡೇಜಾ-ಶಿವಂ ದುಬೆ ಬೊಂಬಾಟ್ ಆಟದಿಂದ ಚೆನ್ನೈ ಜಯ

ಸೀಸನ್​ ಬದಲಾಯ್ತು.. ಹೆಸರು, ಲೋಗೋ, ಆಟಗಾರರು ಎಲ್ಲ ಬದಲಾಯಿಸಲಾಯಿತು. ಆದರೂ ಅದೇ ರಾಗ, ಅದೇ ಹಾಡು. ಈ ಸೀಸನ್​​ನಲ್ಲೂ ಆರ್​​ಸಿಬಿ ಮೊದಲ ಪಂದ್ಯವನ್ನ ದೇವರಿಗೆ ಕೊಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಮಾತಿದ್ಯಲ್ಲ.. ಚೆನ್ನೈನಲ್ಲಿ ಆರ್​​ಸಿಬಿಗೆ ಆಗಿದ್ದೂ ಅದೇ.

ಸ್ಲೋ & ಸ್ಟಡಿ ಆರಂಭ.. ದಿಢೀರ್​​ ಕುಸಿತ..!

ಪಂದ್ಯದಲ್ಲಿ ಟಾಸ್​​​ ಗೆದ್ದು ಬ್ಯಾಟಿಂಗ್​ಗಿಳಿದ ಆರ್​​ಸಿಬಿ ನಿಧಾನಗತಿಯ ಆರಂಭ ಪಡೆದುಕೊಳ್ತು. ಕ್ಯಾಪ್ಟನ್​ ಫಾಫ್​ ಡುಪ್ಲೆಸಿ, ವಿರಾಟ್​ ಕೊಹ್ಲಿ ಪವರ್​​ ಪ್ಲೇನಲ್ಲಿ ಅಬ್ಬರಿಸಲಿಲ್ಲ. 4 ಓವರ್​​​ಗಳಲ್ಲಿ ಕೇವಲ 37 ರನ್​ ಸಿಡಿಸಿದರು.

ಇದನ್ನು ಓದಿ: ಮಾಸ್ಕೋದಲ್ಲಿ ನರಮೇಧ; ಭೂತಾನ್​ನಿಂದಲೇ ರಷ್ಯಾದ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ

ಮುಸ್ತಫಿಜುರ್​ ಕೊಟ್ಟ ಶಾಕ್​ಗೆ ಆರ್​​ಸಿಬಿ ಕಂಗಾಲ್​.!

5ನೇ ಓವರ್​ನಲ್ಲಿ ದಾಳಿಗಿಳಿದ ಮುಸ್ತಫಿಜುರ್​​ ರೆಹಮಾನ್​ ಒಂದೇ ಓವರ್​ನಲ್ಲಿ ಡಬಲ್​ ಶಾಕ್​ ಕೊಟ್ರು. ಫಾಫ್​ ಡುಪ್ಲೆಸಿ, ರಜತ್​ ಪಟಿದಾರ್​ಗೆ ಪೆವಿಲಿಯನ್ ದಾರಿ ತೋರಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್​ ಮ್ಯಾಕ್ಸ್​ವೆಲ್​ ಡಕೌಟ್​ ಆಗಿ ನಿರ್ಗಮಿಸಿದರು. ಅದರ ಬೆನ್ನಲ್ಲೇ, ವಿರಾಟ್​ ಕೊಹ್ಲಿ, ಕ್ಯಾಮರೂನ್​ ಗ್ರೀನ್​ ಆಟಕ್ಕೆ ಮತ್ತೆ ಮುಸ್ತಫಿಜುರ್​​ ಬ್ರೇಕ್ ಹಾಕಿದರು.

RCBಗೆ ಜೀವ ತುಂಬಿದ ಅನುಜ್​​ ರಾವತ್​ -ಕಾರ್ತಿಕ್​​.!

6ನೇ ವಿಕೆಟ್​ಗೆ ಜೊತೆಯಾದ ದಿನೇಶ್​ ಕಾರ್ತಿಕ್​, ಅನುಜ್​ ರಾವತ್​​ ತಂಡಕ್ಕೆ ಚೇತರಿಕೆ ನೀಡಿದರು. 95 ರನ್​ಗಳ ಸಾಲಿಡ್​ ಜೊತೆಯಾಟವಾಡಿದ ಈ ಜೋಡಿ ಆರ್​​ಸಿಬಿ ಬಿಗ್​ಸ್ಕೋರ್​​​ ಕಲೆ ಹಾಕುವಲ್ಲಿ ನೆರವಾದರು. 20 ಓವರ್​​ಗಳ ಅಂತ್ಯಕ್ಕೆ ಆರ್​ಸಿಬಿ 6 ವಿಕೆಟ್​​​ ಕಳೆದುಕೊಂಡು 173 ರನ್​ಗಳಿಸ್ತು.

174 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಅಬ್ಬರದ ಆರಂಭದ ಸೂಚನೆ ನೀಡಿತು. ಆದ್ರೆ, ಇಂಪ್ಯಾಕ್ಟ್​ ಪ್ಲೇಯರ್​​ ಯಶ್​ ದಯಾಳ್​, ಋತುರಾಜ್​ ಗಾಜ್ವಾಡ್​ಗೆ ಪೆವಿಲಿಯನ್​ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ವಿಕೆಟ್​​ ಕಳೆದರು ಅಬ್ಬರದ ಆಟವಾಡ್ತಿದ್ದ ರಚಿನ್​ ರವೀಂದ್ರ, ಕರನ್​ ಶರ್ಮಾ ಸ್ಪಿನ್​ ಬಲೆಗೆ ಬಿದ್ದರು.

ಚೆನ್ನೈಗೆ ಡಬಲ್​ ಶಾಕ್​ ಕೊಟ್ಟ ಕ್ಯಾಮರೂನ್​ ಗ್ರೀನ್​.!

ಬಳಿಕ ಜೊತೆಯಾದ ಡೇರಿಲ್​ ಮಿಚೆಲ್​, ಅಜಿಂಕ್ಯಾ ರಹಾನೆ ಸ್ಟಡಿ ಇನ್ನಿಂಗ್ಸ್​ ಕಟ್ಟೋ ಯುತ್ನದಲ್ಲಿದ್ದರು. ಆದ್ರೆ, ಇವರ ಜೊತೆಯಾಟಕ್ಕೆ ಕ್ಯಾಮರೂನ್​ ಗ್ರೀನ್​ ಬ್ರೇಕ್​ ಹಾಕಿದರು.

ಜಡ್ಡು -ದುಬೆ ಬೊಂಬಾಟ್ ಆಟ.. ಚೆನ್ನೈಗೆ ಜಯ.!

ಆರ್​​ಸಿಬಿ ಸುಲಭಕ್ಕೆ ಗೆಲ್ಲೋ ಸಿಚ್ಯುವೇಶನ್​ ನಿರ್ಮಾಣವಾಗಿತ್ತು. ಆದ್ರೆ, 5ನೇ ವಿಕೆಟ್​ಗೆ ಜೊತೆಯಾದ ಶಿವಮ್​ ದುಬೆ, ರವಿಂದ್ರ ಜಡೇಜಾ ಎಚ್ಚರಿಕೆಯ ಆಟ ಗೆಲುವಿನ್ನ ಕಸಿದುಕೊಂಡರು. ಆರ್​​ಸಿಬಿ ಶಾರ್ಟ್​​ಬಾಲ್​ ತಂತ್ರ, ಬೈಸ್​​, ಓವರ್​ ಥ್ರೋ ರೂಪದಲ್ಲಿ ನೀಡಿದ ಬಿಟ್ಟಿ ರನ್​ಗಳು ಗೆಲುವಿಗೆ ಮುಳುವಾದವು. 18.4 ಓವರ್​​ಗಳಲ್ಲಿ ಗುರಿ ಮುಟ್ಟಿದ ಚೆನ್ನೈ 6 ವಿಕೆಟ್​​ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL: ಅದೇ ರಾಗ, ಅದೇ ಹಾಡು.. ಕೈಕೊಟ್ಟ ಕೊಹ್ಲಿ, ಮ್ಯಾಕ್ಸಿ.. ಮೊದಲ ಪಂದ್ಯ ದೇವರಿಗೆ ಎಂದ RCB ಫ್ಯಾನ್ಸ್

https://newsfirstlive.com/wp-content/uploads/2024/03/RCB-2-2.jpg

Load More