newsfirstkannada.com

ಮಾಸ್ಕೋದಲ್ಲಿ ನರಮೇಧ; ಭೂತಾನ್​ನಿಂದಲೇ ರಷ್ಯಾದ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ

Share :

Published March 23, 2024 at 8:44am

Update March 23, 2024 at 10:05am

    ಈ ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ

    ರಾತ್ರಿ ಇಡೀ ಮಾಲ್​ ಎಲ್ಲ ಬೆಂಕಿಯಿಂದ ಹೊತ್ತಿ ಉರಿಯುತ್ತಿತ್ತು

    ರಷ್ಯಾದ ಒಕ್ಕೂಟ ಸರ್ಕಾರದ ಜನರೊಂದಿಗೆ ಭಾರತ ಇರುತ್ತದೆ

ನವದೆಹಲಿ: ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್​ನಲ್ಲಿ ಭಯೋತ್ಪಾದಕರು ಗನ್​ನಿಂದ ಮನಸೋ ಇಚ್ಛೆ ಫೈರಿಂಗ್ ಮಾಡಿದ್ದರಿಂದ 60 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 145ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯೋತ್ಪಾದಕರ ಹೇಯ ಕೃತ್ಯವನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ರಷ್ಯಾಗೆ ಧೈರ್ಯ ನೀಡಿದ್ದಾರೆ.

ಭೂತಾನ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿಂದಲೇ ಟ್ವಿಟ್ ಮಾಡುವ ಮೂಲಕ ರಷ್ಯಾ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇವೆ. ನಾವು ಎಂದಿಗೂ ಸಂತ್ರಸ್ತರ ಪರವಾಗಿ ಇದ್ದು ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಇಂತಹ ದುಃಖದ ಸಮಯದಲ್ಲಿ ರಷ್ಯಾದ ಒಕ್ಕೂಟ ಸರ್ಕಾರ ಮತ್ತು ಅಲ್ಲಿನ ಜನರೊಂದಿಗೆ ಭಾರತ ಇರುತ್ತದೆ ಎಂದಿದ್ದಾರೆ.

ಇದನ್ನು ಓದಿ: ಮಾಸ್ಕೋ ಮೇಲಿನ ದಾಳಿ ಹೊಣೆ ಹೊತ್ತ ISIS ಭಯೋತ್ಪಾಕ ಸಂಘಟನೆ.. ನರಮೇಧ ಮಾಡಿದ್ದು ನಾವೇ ಎಂದ ಉಗ್ರರು

ಕ್ರೋಕಸ್ ಸಿಟಿ ಹಾಲ್​ನಲ್ಲಿ ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದನ್ನೇ ಟಾರ್ಗೆಟ್ ಮಾಡಿದ್ದ ಐಎಸ್​ಐಎಸ್​ನ ಉಗ್ರರು ಏಕಕಾಲದಲ್ಲಿ ಸಂಗೀತ ನಡೆಯುವ ಹಾಲ್​ಗೆ ನುಗ್ಗಿ ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಭೀಕರ ದಾಳಿಯ ಹೊಣೆಯನ್ನು ISIS ಭಯೋತ್ಪಾಕ ಸಂಘಟನೆ ಹೊತ್ತುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಸ್ಕೋದಲ್ಲಿ ನರಮೇಧ; ಭೂತಾನ್​ನಿಂದಲೇ ರಷ್ಯಾದ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ

https://newsfirstlive.com/wp-content/uploads/2024/03/MODI_RUSSIA.jpg

Load More