/newsfirstlive-kannada/media/post_attachments/wp-content/uploads/2024/06/Durgesh-Pandey.jpg)
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಗೆಲುವು ಸಾಧಿಸಿತ್ತು. ಆದರೆ ಗೆಲುವನ್ನು ಸಂಭ್ರಮಿಸೋದಕ್ಕೂ ಮೊದಲು ವ್ಯಕ್ತಿಯೊಬ್ಬರು ತನ್ನ ಬೆರಳನ್ನು ಕತ್ತರಿಸುವ ಮೂಲಕ ಕಾಳಿ ದೇವಿಗೆ ಅರ್ಪಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಛತ್ತೀಸ್​ಗಢದದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಲರಾಮ್​ಪುರದ 30 ವರ್ಷದ ವ್ಯಕ್ತಿ ದುರ್ಗೇಶ್​ ಪಾಂಡೆ ತನ್ನ ಕೈಬೆರಳನ್ನು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾರೆ. ಪ್ರಾರಂಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸುತ್ತಿದೆ ಎಂದು ಖಿನ್ನತೆಗೆ ಒಳಗಾಗಿದ್ದ ದುರ್ಗೆಶ್​ ಬಳಿಕ ಕಾಳಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದ್ದಾರೆ. ಬಿಜೆಪಿ ಗೆಲುವು ಸಾಧಿಸಿದಂತೆ ತನ್ನ ಕೈಬೆರಳು ದೇವಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಮನೆ ಖಾಲಿ, ಮನ ಖಾಲಿ.. ಫೋನ್ ಸ್ವಿಚ್ ಆಫ್.. ಎಲ್ಲಿ ಹೋದ್ರು ನಿವೇದಿತಾ ಫ್ಯಾಮಿಲಿ?
ದುರ್ಗೇಶ್​ ಪಾಂಡೆ ಎಡಕೈ ಬೆರಳು ಕತ್ತರಿಸಿದ ಬಳಿಕ ರಕ್ತಸ್ರಾವ ಜಾಸ್ತಿಯಾಯಿತು. ಬ್ಯಾಂಡೇಜ್​ ಕಟ್ಟಿದರು ರಕ್ತಸ್ರಾವ ನಿಲ್ಲಲಿಲ್ಲ. ಕೊನೆಗೆ ಆತಂಕಗೊಂಡ ಆತನ ಮನೆಯವರು ಸಮರಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು.
ವೈದ್ಯಕೀಯ ಸಿಬ್ಬಂದಿ ದುರ್ಗೇಶ್​ ಪಾಂಡೆ ಮಾಡಿದ ಅನಾಹುತವನ್ನು ನೋಡಿ ಅಂಬಿಕಾಪುರದ ವೈದ್ಯಕೀಯ ಕಾಲೇಜಿಗೆ ಹೋಗಲು ಹೇಳಿದರು. ಬಳಿಕ ಅಲ್ಲಿ ಸರಿಯಾದ ಚಿಕಿತ್ಸೆ ನೀಡಲಾಯಿತು. ಆದರೆ ಕತ್ತರಿಸಿದ ಬೆಳರನ್ನು ಮತ್ತೆ ಜೋಡಿಸಲು ಸಾಧ್ಯವಾಗಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us