newsfirstkannada.com

ಚಿಕ್ಕಮಗಳೂರು TO ಅಮೆರಿಕ.. T20 ವಿಶ್ವಕಪ್​​ನಲ್ಲಿ ಪಾಕ್​ಗೆ ಮುಖಭಂಗ ಮಾಡಿದ ಕನ್ನಡಿಗ.. ಈತನ ಬಗ್ಗೆ ಗೊತ್ತಾ?

Share :

Published June 8, 2024 at 12:41pm

Update June 8, 2024 at 12:48pm

    ಅಮೆರಿಕ ತಂಡದಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ಹೈದ

    ನಿರರ್ಗಳವಾಗಿ ಕನ್ನಡ ಮಾತನಾಡುವ ಈ ಆಟಗಾರ ಯಾರು?

    ಪಾಕ್​ ಸೋಲಿಗೆ ಈತನೇ ಕಾರಣ.. ಈತ ಓದಿರೋದು ಬೆಂಗಳೂರಲ್ಲಿ!

ಗುರುವಾರ ನಡೆದ ಟಿ20 ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಅಮೆರಿಕ ಗೆದ್ದಿದೆ. ಅನುಭವಿ ಪಾಕ್​ ಯುಎಸ್​ಎ ವಿರುದ್ಧ ಸೋತಿರೋದು ದೊಡ್ಡ ಮುಖಭಂಗಕ್ಕೆ ಕಾರಣವಾಗಿದೆ. ಆದರೆ ಪಾಕ್​ ಅನ್ನು ಸೋಲಿಸಲು ಅಮೆರಿಕ ತಂಡ ಕನ್ನಡಿಗನನ್ನು ಅಸ್ತ್ರವನ್ನಾಗಿ ಬಳಸಿರೋದು ಬಹುತೇಕರಿಗೆ ತಿಳಿದಿಲ್ಲ.

ಹೌದು. ಅಮೆರಿಕ ತಂಡ ನೊಸ್ತುಶ್​ ಕೆಂಜಿಗೆ​​ ಮೂಲಕ ಪಾಕ್ ತಂಡದ​ ಮೇಲೆ ಬೌಲಿಂಗ್​ ದಾಳಿ ಮಾಡಿದರು. ನೊಸ್ತುಶ್ ಎಸೆತಕ್ಕೆ ಪಾಕ್​ 3 ವಿಕೆಟ್​ ಉದುರಿತ್ತು. ಇದಾದ ಬಳಿಕ ಅಬ್ಬರದ ಜೊತೆಗೆ ಆತ ಕನ್ನಡಿಗ ಎಂಬ ಸುದ್ದಿಯೂ ವೈರಲ್​ ಆಯ್ತು.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್​​​ಗೆ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರು.. ನಾಲ್ವರು ಪ್ರಯಾಣಿಕರು ಬಚಾವ್​ ಆಗಿದ್ದೇ ರೋಚಕ

ಅಂದಹಾಗೆಯೇ ನೊಸ್ತುಶ್ ಮೂಲತಃ​​ ಕರ್ನಾಟಕದವನು. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನವರು. ಮೂಡಿಗೆರೆ ಮೂಲದ ಇವರು ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಸದ್ಯ ಈ ಕನ್ನಡಿಗನ ಮಾತು ವೈರಲ್​ ಆಗಿದೆ. ಇನ್​ಸ್ಟಾದಲ್ಲಿ ಅವರು ಕನ್ನಡದಲ್ಲಿ ಮಾತನಾಡಿರುವುದು ಹರಿದಾಡುತ್ತಿದೆ. ನೊಸ್ತುಶ್ ಮಾತುಗಳ ಕೇಳಿ ಕನ್ನಡಿಗರು ಮನಸೋತಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ನೊಸ್ತುಶ್​ ಕೆಂಜಿಗೆ​​ 

22 ವಷದಿಂದ ವೃತ್ತಿಪರ ಕ್ರಿಕೆಟಿಗನಾಗಲು ಬಯಸಿದ್ದರು. ಅದಕ್ಕಾಗಿ ಕರ್ನಾಟಕ ಇನ್​​ಸ್ಟಿಟ್ಯೂಟ್​​ ಆಫ್​ ಕ್ರಿಕೆಟ್​​ನಲ್ಲಿ ಕಠಿಣ ತರಬೇತಿ ಪಡೆದರು. ಆದರೆ ಅಮೆರಿಕಾದ ಪ್ರಜೆಯಾದ ಈತ ಬೆಂಗಳೂರಿನ ದಯಾನಂದ ಸಾಗರ​ ಕಾಲೇಜ್​ ಆಫ್​ ಇಂಜಿನಿಯರಿಂಗ್​ನಿಂದ ಜೈವಿಕ ತಂತ್ರಜ್ನಾನದಲ್ಲಿ ಪದವಿಯನ್ನು ಪಡೆದು ಬಳಿಕ ಯುಎಸ್​ಎಗೆ ಮರಳಿದರು.

ಇದನ್ನೂ ಓದಿ: ಪಕ್ಕಾ ಚಾಕಲೇಟ್​ ಗರ್ಲ್​​ ಎಂದಿದ್ದ ಚಂದನ್​ ಶೆಟ್ಟಿ! ನಿವೇದಿತಾ ಜೊತೆಗಿನ ಸಂಸಾರಕ್ಕೆ ಬ್ರೇಕ್ ನೀಡಲು​ ಇದೇನಾ ಕಾರಣ?

ಆ ಬಳಿಕ ಅಮೆರಿಕ ತಂಡ ಸೇರಿಕೊಂಡರು. 2019ರಲ್ಲಿ ನೊಸ್ತುಶ್ ಕೆಂಜಿಗೆ ಯುಎಇ ವಿರುದ್ಧ ಮೈದಾನಕ್ಕೆ ಕಾಲಿಟ್ಟರು. ಅಂದಿನಿಂದ ಕೆಂಜಿಗೆ 40 ಒಡಿಐ ಮತ್ತು 7 ಟಿ20ಐಗಳನ್ನು ಆಡಿದ್ದಾರೆ.

ಇದನ್ನೂ ಓದಿ: ಬರಲಿ ಮಳೆ.. ಹರಿಯಲಿ ಹೊಳೆ.. ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಅಂದಹಾಗೆಯೇ ಪಾಕ್​ ವಿರುದ್ಧ ಆಡಿದ ಪಂದ್ಯ ನೊಸ್ತುಶ್​ ಕೆಂಜಿಗೆ​​ 4 ಓವರ್​ನಲ್ಲಿ 30 ರನ್​ ನೀಡಿ 3 ವಿಕೆಟ್​ ಉರುಳಿಸಿದ್ದಾರೆ. ಆ ಮೂಲಕ ಅಮೆರಿಕ ತಂಡದ ಗೆಲುವಿಗೆ ಮತ್ತು ಪಾಕ್​ ಸೋಲಿಗೆ ಕಾರಣರಾಗಿದ್ದಾರೆ. ಇದಕ್ಕೂ ಮುಖ್ಯವಾಗಿ ನೊಸ್ತುಶ್​ ಕನ್ನಡಿಗ ಎಂಬ ವಿಚಾರ ಎಲ್ಲರಿಗೂ ಹೆಮ್ಮ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಮಗಳೂರು TO ಅಮೆರಿಕ.. T20 ವಿಶ್ವಕಪ್​​ನಲ್ಲಿ ಪಾಕ್​ಗೆ ಮುಖಭಂಗ ಮಾಡಿದ ಕನ್ನಡಿಗ.. ಈತನ ಬಗ್ಗೆ ಗೊತ್ತಾ?

https://newsfirstlive.com/wp-content/uploads/2024/06/Nosthush-Kenjige.jpg

Load More