newsfirstkannada.com

ಶಾರ್ಟ್ ಸರ್ಕ್ಯೂಟ್​​​ಗೆ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರು.. ನಾಲ್ವರು ಪ್ರಯಾಣಿಕರು ಬಚಾವ್​ ಆಗಿದ್ದೇ ರೋಚಕ

Share :

Published June 8, 2024 at 11:10am

  ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆಯೇ ಕಾಣಿಸಿಕೊಂಡ ಬೆಂಕಿ

  ನಡುರಸ್ತೆಯಲ್ಲೇ ಹೊತ್ತಿ ಉರಿದ ಮಾರುತಿ ಸುಜುಕಿ ಸ್ವಿಫ್ಟ್​ ಕಾರು

  ನಾಲ್ವರು ಪ್ರಯಾಣಿಕರಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

ಚಿಕ್ಕಮಗಳೂರು: ಕಾರೊಂದು ಶಾರ್ಟ್ ಸರ್ಕ್ಯೂಟ್​​​ನಿ‌ಂದ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ಈ ಘಟನೆ ನಡೆದಿದೆ.

ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಭಸ್ಮವಾಗಿದೆ. ಚಿಕ್ಕಮಗಳೂರಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಬೈಕ್​ಗೆ ಗುದ್ದಿ ಪಲ್ಟಿ ಹೊಡೆದ ಸರ್ಕಾರಿ ಬಸ್​.. 30 ಅಡಿ ಎತ್ತರಕ್ಕೆ ಹಾರಿ ಪ್ರಾಣಬಿಟ್ಟ ಸವಾರ

ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ನಾಲ್ವರು ಪ್ರಯಾಣಿಕರು ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಅನ್ನದಾತ’ ರಾಮೋಜಿ ರಾವ್​.. ಕೃಷಿ ಕುಟುಂಬದಿಂದ ಬಂದು ಬಡವರ ಹಸಿವು ನೀಗಿಸಿದ ಪುಣ್ಯಾತ್ಮ

ತಕ್ಷಣವೇ ಸ್ಥಳಕ್ಕೆ ಬಂದ ಕಡೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾರ್ಟ್ ಸರ್ಕ್ಯೂಟ್​​​ಗೆ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಕಾರು.. ನಾಲ್ವರು ಪ್ರಯಾಣಿಕರು ಬಚಾವ್​ ಆಗಿದ್ದೇ ರೋಚಕ

https://newsfirstlive.com/wp-content/uploads/2024/06/car-Fire-1.jpg

Load More