ಕೊಡಲಿಯಿಂದ ಕೊಚ್ಚಿ ಅಪ್ಪ-ಅಮ್ಮ, ಹೆಂಡತಿ, ಮಗು ಸೇರಿ ಒಂದೇ ಕುಟುಂಬ 8 ಮಂದಿಯ ಬರ್ಬರ ಹತ್ಯೆ

author-image
Ganesh
Updated On
ಕೊಡಲಿಯಿಂದ ಕೊಚ್ಚಿ ಅಪ್ಪ-ಅಮ್ಮ, ಹೆಂಡತಿ, ಮಗು ಸೇರಿ ಒಂದೇ ಕುಟುಂಬ 8 ಮಂದಿಯ ಬರ್ಬರ ಹತ್ಯೆ
Advertisment
  • ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು
  • ಬರ್ತಿದ್ದಂತೆಯೇ ಇಡೀ ಗ್ರಾಮವನ್ನೇ ಸೀಲ್ ಮಾಡಿ ತನಿಖೆ
  • 7 ಮಂದಿ ಹತ್ಯೆಗೈದು ತಾನೂ ಆತ್ಮಹತ್ಯೆಗೈದಿರುವ ಆರೋಪಿ

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಭೀಕರ ಸಾಮೂಹಿಕ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಹುಲ್ಜಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೋದಲಕ್ಚಾರ್ ಗ್ರಾಮದಲ್ಲಿ ಸಾಮೂಹಿಕ ಹತ್ಯೆ ನಡೆದಿದೆ.

ಒಂದೇ ಕುಟುಂಬದ 8 ಸದಸ್ಯರ ಬರ್ಬರ ಸಾವಾಗಿದೆ. ವರದಿಗಳ ಪ್ರಕಾರ ಮಗನೇ ಕೊಡಲಿಯಿಂದ ಕೊಚ್ಚಿ ಎಲ್ಲರನ್ನೂ ಕೊಂದಿದ್ದಾನೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕೊಲೆಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ.
ಮೂಲಗಳ ಪ್ರಕಾರ.. ಬುಡಕಟ್ಟು ಕುಟುಂಬದ ಯುವಕ ತನ್ನ ಪೋಷಕರು, ಹೆಂಡತಿ, ಮಗು ಮತ್ತು ಸಹೋದರ ಸೇರಿದಂತೆ ಒಟ್ಟು 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಕೊಲೆ ಮಾಡಿದ ಬಳಿಕ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:ಟ್ರೋಫಿ ಗೆದ್ದ ಬೆನ್ನಲ್ಲೇ ಅಯ್ಯರ್ ವೈರಲ್.. ಬ್ಯಾಚುಲರ್ ಬಾಯ್​ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರ ಜೊತೆ..?

ಮಂಗಳವಾರ ರಾತ್ರಿ ಭೀಕರ ಹತ್ಯೆ
ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಇಡೀ ಗ್ರಾಮವನ್ನೇ ಸೀಲ್ ಮಾಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಬರಬೇಕಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment