newsfirstkannada.com

ನಾನ್​ವೆಜ್ ಪ್ರಿಯರಿಗೆ ಕಹಿ ಸುದ್ದಿ; ಚಿಕನ್ ಬೆಲೆ ದಿಢೀರ್ ಏರಿಕೆ.. 1KG ಎಷ್ಟು?

Share :

Published March 24, 2024 at 6:34am

Update March 24, 2024 at 6:35am

    ಬೇಡಿಕೆ ಇರುವಷ್ಟು ಕೋಳಿ ಮಾಂಸ ಉತ್ಪಾದನೆ ಇಲ್ಲವಂತೆ!

    ಸುಮಾರು 1.7 ಕೋಟಿ ಕೆಜಿಯಷ್ಟು ಕೋಳಿ ಮಾಂಸ ಉತ್ಪಾದನೆ

    ಮಾರುಕಟ್ಟೆಯಲ್ಲಿ ಕೋಳಿ ಬೇಡಿಕೆ ಹೆಚ್ಚಳ, ಪ್ರತಿ ಕೆಜಿಗೆ ಎಷ್ಟು?

ಬೆಂಗಳೂರು: ಕೂಗೋ ಕೋಳಿಗೆ ಖಾರ ಮಸಾಲೆ ಅರೆಯದಿದ್ರೆ ನಾನ್​ ವೆಜ್​ ಪ್ರಿಯರ ಬಾಯಿಗೆ ರುಚಿ ಸಿಗುತ್ತಾ ಹೇಳಿ. ಅದರಲ್ಲೂ ವೀಕೆಂಡ್​ ಬಂತು ಸಾಕು ಒಂದೊಳ್ಳೆ ಬಿರಿಯಾನಿ ಜೊತೆಗೆ ಎರಡೇ ಎರಡು ಕಬಾಬ್ ಪೀಸ್​​. ಒಂಚೂರು ಚಿಕನ್​ ಗ್ರೇವಿ ತಿಂದು ಬಿಡೋಣ ಅಂತಾ ಅಂದುಕೊಳ್ಳುತ್ತಾರೆ. ಆದರೆ ನೀವು ಹೀಗೆ ಅಂದುಕೊಂಡ್ರೆ ನಿಮಗೆ ನಿರಾಸೆ. ಯಾಕಂದ್ರೆ ಚಿಕನ್​ ರೇಟು ಸರ್..​ ಅಂತ ಮೇಲೇರಿ ಜೇಬು ಸುಡ್ತಿದೆ.

ಇದನ್ನು ಓದಿ: ‘ದತ್ತು’ ಮಾತೇ ಕುತ್ತು.. ಸೋನು ಗೌಡಗೆ ಜಾಮೀನು ಸಿಗುತ್ತಾ? ರೀಲ್ಸ್​ ಸ್ಟಾರ್​ ಕಥೆ ಮುಂದೇನು?

ನಾನ್ ವೆಜ್ ತಿನ್ನುವವರ ಬಳಿ ಹೋಗಿ ನಿಮ್ಮ ಫೇವರೇಟ್ ಡಿಶ್ ಯಾವುದು ಅಂತ ಕೇಳಿದ್ರೆ ಬಹುತೇಕರ ಮೊದಲ ಆಯ್ಕೆಯೇ ಕೋಳಿ. ಆದ್ರೀಗ ಚಿಕನ್ ರೇಟ್ ಕೇಳ್ತಾ ಇದ್ರೆ ಚಿಕನ್ ತಿನ್ನಬೇಕೋ ಬೇಡ್ವೋ ಅಂತ ಯೋಚನೆ ಮಾಡೋ ತರ ಇದೆ. 200ರ ಆಸು ಪಾಸಲ್ಲಿದ್ದ ಚಿಕನ್ ರೇಟ್ ಹತ್ ಹತ್ತಿರ ಸರ್​​ ಅಂತ ಏರಿಬಿಟ್ಟಿದೆ. ರಾಜ್ಯದಲ್ಲಿ 35 ಸಾವಿರದಿಂದ 40 ಸಾವಿರ ಮಂದಿ ಕೋಳಿ ಸಾಕಣೆದಾರರಿದ್ದು, ಪ್ರತಿ ವಾರ 80 ಲಕ್ಷ ಕೋಳಿ ಉತ್ಪಾದನೆ ಮಾಡಲಾಗುತ್ತದೆ. ಸುಮಾರು 1.7 ಕೋಟಿ ಕೆ.ಜಿ.ಯಷ್ಟು ಕೋಳಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಪ್ರತಿ ಕೆ.ಜಿ. ಕೋಳಿ ಉತ್ಪಾದನೆಗೆ ಈ ಹಿಂದೆ 60ರಿಂದ 70 ರೂ. ಖರ್ಚಾಗುತ್ತಿತ್ತು. ಈಗ ಕೆ.ಜಿ.ಗೆ 98 ರಿಂದ 100 ರೂ. ತಗುಲುತ್ತಿದೆ. ಮಾರುಕಟ್ಟೆಯಲ್ಲಿ ಕೋಳಿಗಳ ಬೇಡಿಕೆ ಹೆಚ್ಚಳವಾಗುತ್ತಿದ್ದು, ಪ್ರತಿ ಕೆಜಿ ಕೋಳಿ ಮಾಂಸದ ದರ 300 ರೂ.ಗಳ ಗಡಿ ತಲುಪಿದೆ.

ಇನ್ನು ಕುಕ್ಕಟೋದ್ಯಮಕ್ಕೆ ಬಿಸಿಲಿನ ಝಳವೂ ಶಾಪವಾಗಿದ್ದು, ಬೇಸಿಗೆಯಲ್ಲಿ ಕೋಳಿಗಳಿಗೆ ಐಬಿಎಚ್‌ ಸೋಂಕು ತಗುಲುವುದರಿಂದ, ರೋಗ ನಿರೋಧಕ ಶಕ್ತಿ ಕುಂದುತ್ತೆ. ಹೀಗಾಗಿ ಬೇಡಿಕೆ ಇರುವಷ್ಟು ಕೋಳಿ ಮಾಂಸ ಉತ್ಪಾದನೆ ಇಲ್ಲ. ಹೀಗಾಗಿ, ಕಳೆದ ಒಂದು ತಿಂಗಳಲ್ಲಿ ಅನೇಕ ಬಾರಿ ಕೋಳಿ ದರ ಏರಿಕೆಯಾಗಿದ್ದು, ಒಂದು ವಾರದ ಹಿಂದೆ 180 ರೂಪಾಯಿ ಇದ್ದ ಒಂದು ಕೆಜಿ ಕೋಳಿ ಮಾಂಸದ ಬೆಲೆ ಈಗ 250 ರೂಪಾಯಿಗೆ ತಲುಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನ್​ವೆಜ್ ಪ್ರಿಯರಿಗೆ ಕಹಿ ಸುದ್ದಿ; ಚಿಕನ್ ಬೆಲೆ ದಿಢೀರ್ ಏರಿಕೆ.. 1KG ಎಷ್ಟು?

https://newsfirstlive.com/wp-content/uploads/2024/02/Cock_hen.jpg

Load More