Advertisment

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.. ಕಚೇರಿಯಲ್ಲಿ ಗಡದ್ದಾಗಿ ನಿದ್ದೆ ಹೊಡೆಯುವ ಅಧಿಕಾರಿ; ರೈತರ ಆಕ್ರೋಶ

author-image
AS Harshith
Updated On
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.. ಕಚೇರಿಯಲ್ಲಿ ಗಡದ್ದಾಗಿ ನಿದ್ದೆ ಹೊಡೆಯುವ ಅಧಿಕಾರಿ; ರೈತರ ಆಕ್ರೋಶ
Advertisment
  • ಕರ್ತವ್ಯದಲ್ಲಿದ್ದಾಗಲೇ ಗಡದ್ದಾಗಿ ನಿದ್ದೆ ಹೊಡೆಯುತ್ತಿರುವ ಅಧಿಕಾರಿ
  • ಭೀಕರ ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ಗೋಳು ಕೇಳುವರ್ಯಾರು?
  • ಎಲ್ಲರ ಕೋಪಕ್ಕೆ ಕಾರಣವಾದ ಅಸಿಸ್ಟೆಂಟ್ ಎಂಜಿನಿಯರ್ ವರ್ತನೆ

ಚಿಕ್ಕೋಡಿ: ಅಸಿಸ್ಟೆಂಟ್ ಎಂಜಿನಿಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಗಡದ್ದಾಗಿ ನಿದ್ದೆ ಹೊಡೆಯುತ್ತಿರುವ ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನೀರಾವರಿ ಉಪವಿಭಾಗದ ಕಚೇರಿ ಈ ದೃಶ್ಯ ಕಂಡಿದೆ.

Advertisment

ಒಂದು ಕಡೆ ಭೀಕರ ಬರಗಾಲದಿಂದ ರೈತಾಪಿ ವರ್ಗ ತತ್ತರಿಸಿದೆ. ಹೀಗಿರುವಾಗ ಅಸಿಸ್ಟೆಂಟ್ ಎಂಜಿನಿಯರ್ ವರ್ತನೆ ಎಲ್ಲರ ಕೋಪಕ್ಕೆ ಕಾರಣವಾಗಿದೆ.

ಘಟಪ್ರಭಾ ಎಡದಂಡೆ ಕಾಲುವೆ ಉಪವಿಭಾಗ ರಾಯಬಾಗ ಕಚೇರಿಯಲ್ಲಿ ಘಟನೆ ಇದಾಗಿದ್ದು, ಅಸಿಸ್ಟೆಂಟ್ ಎಂಜಿನಿಯರ್ ಸಂಜಯಕುಮಾರ್ ಅಮ್ಮಿನಭಾವಿ ಎಂಬ ಅಧಿಕಾರಿ ಕಚೇರಿಯಲ್ಲಿ ಗಡದ್ದಾಗಿ ನಿದ್ದೆ ಹೊಡೆದಿದ್ದಾರೆ.

ಇದನ್ನೂ ಓದಿ:ಸ್ಮಾರ್ಟ್​ಫೋನ್​ ಮಾತ್ರವಲ್ಲ, ಕಾರು ಉತ್ಪಾದನೆಗೂ ಇಳಿದ ಶಿಯೋಮಿ! ಈ ಕಾರು ಒಂದು ಬಾರಿ ಚಾರ್ಜ್​ ಮಾಡಿದ್ರೆ 800km ಕ್ರಮಿಸುತ್ತೆ!

Advertisment

ಇನ್ನು ಕಚೇರಿಯಲ್ಲಿ ನಿದ್ದೆ ಮಾಡಬೇಡಿ ಎಂದು ಮುಖ್ಯ ಎಂಜಿನಿಯರ್ ಅನೇಕ ಬಾರಿ ಹೇಳಿದ್ದಾರಂತೆ. ಆದರೂ ಸಹ ಅವರ ಮಾತು ಕೇಳದೆ ಸಂಜಯಕುಮಾರ್ ನಿದ್ದೆ ಮಾಡುತ್ತಿದ್ದರು. ಇದೀಗ ಅಧಿಕಾರಿಯ ಬೇಜವಾಬ್ದಾರಿ ನಡೆಗೆ ರೈತಾಪಿ ವರ್ಗ ಆಕ್ರೋಶ ಹೊರಹಾಕಿದೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment