/newsfirstlive-kannada/media/post_attachments/wp-content/uploads/2024/03/Xiaomi-SU7.jpg)
ಚೀನಾ ಸ್ಮಾರ್ಟ್​ಫೋನ್​ ಕಂಪನಿ ಶಿಯೋಮಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಾಕಷ್ಟು ಸ್ಮಾರ್ಟ್​ಫೊನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿದಲ್ಲದೆ, ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್​ಫೋನ್​ ಸಂಸ್ಥೆಗಳಿಗೆ ಟಕ್ಕರ್​ ನೀಡಿದ ಕಂಪನಿ. ಆದರೆ ಇದೇ ಸಂಸ್ಥೆ ಸ್ಮಾರ್ಟ್​ಫೊನ್​ ಹೊರತುಪಡಿಸಿ ಎಲೆಕ್ಟ್ರಿಕ್​ ವಾಹನ ತಯಾರಿಸುತ್ತಿರೋ ವಿಚಾರ ಹಲವರಿಗೆ ಗೊತ್ತಿಲ್ಲ. ಇದೀಗ ಕಳೆದ ವರ್ಷ ಅನಾವರಣಗೊಳಿಸಿದ ನೂತನ ಕಾರನ್ನು ಶಿಯೋಮಿ ವಿತರಣೆ ಮಾಡಲು ಮುಂದಾಗಿದೆ.
ಚೀನೀಗರು ಏನಾದರೊಂದು ಪ್ರಯತ್ನ ಮಾಡುತ್ತಿರುತ್ತಾರೆ. ಅದರ ಪ್ರತಿಫಲವಾಗಿ ಶಿಯೋಮಿ ಸಂಸ್ಥೆ ಹುಟ್ಟಿಕೊಂಡಿರೋದು ಎಲ್ಲರಿಗೂ ಗೊತ್ತಿರಬಹುದು. ಯಾವಾಗ ಮಾರುಕಟ್ಟೆಯಲ್ಲಿ ಶಿಯೋಮಿ ಬೇಡಿಕೆ ಕಡಿಮೆಯಾಗುತ್ತಾ ಬಂತೋ ಇತ್ತ ಎಲೆಕ್ಟ್ರಿಕ್​ ವಾಹನ ಉತ್ಪಾದನೆಯತ್ತ ತೊಡಗಿತು. ಅದರಂತೆಯೇ ಕಳೆದ ವರ್ಷ ಶಿಯೋಮಿ SU7 ಅನಾವರಣಗೊಳಿಸಿತು. ಇದೀಗ ಈ ಕಾರನ್ನು ವಿತರಣೆಗೆ ಮುಂದಾಗಿದೆ. ಇದೇ ತಿಂಗಳಿಂದ ಪ್ರಾರಂಭಿಸುತ್ತಿದೆ.
ಮಾಹಿತಿ ಪ್ರಕಾರ ಮಾರ್ಚ್​ 28ರಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಆ ಬಳಿಕ ಅಂತರಾಷ್ಟ್ರೀಯ ಮಾರುಕಟ್ಟೆಯತ್ತ ಪರಿಚಯಿಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಶಿಯೋಮಿ SU7 ಎಲೆಕ್ಟ್ರಿಕ್​ ಸೆಡಾನ್ ಬೆಲೆ 57 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಸದ್ಯ ಚೀನಾ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್​ ವಾಹನಕ್ಕೆ ವಿಶೇಷ ಬೆಡಿಕೆಯಿದೆ. ಅದರ ಜೊತೆಗೆ ಶಿಯೋಮಿ SU7 ಸ್ಪರ್ಧೆಗೆ ಇಳಿದಿದೆ.
/newsfirstlive-kannada/media/post_attachments/wp-content/uploads/2024/03/Xiaomi-SU7-1.jpg)
ಬ್ಯಾಟರಿ ಮತ್ತು ಕಾರ್ಯಕ್ಷಮತೆ
ಶಿಯೋಮಿ SU7 ಕಾರು 73.6kwh ಬ್ಯಾಟರಿಯನ್ನು ಹೊಂದಿದೆ. ಉನ್ನತ ಶ್ರೇಣಿ 101 kwh ಬ್ಯಾಟರಿಯನ್ನು ಹೊಂದಿದೆ. ಅಚ್ಚರಿಯ ಸಂಗತಿ ಎಂದರೆ ಒಂದೇ ಚಾರ್ಜ್​ನಲ್ಲಿ 800 ಕಿಲೋ ಮೀಟರ್​​ ಓಡುತ್ತೆ.
ಇದನ್ನೂ ಓದಿ: 7,698 ಕಾರುಗಳನ್ನು ಹಿಂಪಡೆಯಲು ಮುಂದಾದ ಹ್ಯುಂಡೈ ಕಂಪನಿ.. ಕಾರಿನಲ್ಲಿ ಕಾಣಿಸಿಕೊಂಡ ಸಮಸ್ಯೆಯೇನು?
ಇನ್ನು 2025ರಲ್ಲಿ ಶಿಯೋಮಿ ಕಂಪನಿ ಹೊಸ ರೂಪಾಂತರ ಪರಿಚಯಿಸಲು ಮುಂದಾಗಿದೆ. ಸದ್ಯ ಶಿಯೋಮಿ SU7 ಕಾರಿನಲ್ಲಿ ಅಡಾಪ್ಟಿವ್​ ಕ್ರೂಸ್​ ಕಂಟ್ರೋಲ್​, ಪಾರ್ಕಿಂಗ್​ ವೈಶಿಷ್ಟ್ಯ, 25-ಸ್ಪೀಕರ್​ ಸಿಸ್ಟಂ ವಿಶೇಷತೆಯನ್ನು ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us