newsfirstkannada.com

ಅಮ್ಮಾ, ಬಾಯಾರಿಕೆ ಆಗ್ತಿದೆ.. ನೀರು ಎಂದುಕೊಂಡು ಆ್ಯಸಿಡ್​ ಕುಡಿದು ಮಗು ಸಾವು

Share :

Published May 16, 2024 at 1:04pm

Update May 16, 2024 at 1:06pm

  ಆಕಸ್ಮಿಕವಾಗಿ ನೀರು ಎಂದು ಆ್ಯಸಿಡ್​ ಕುಡಿದ ಮಗು

  ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ.. ಬದುಕಲಿಲ್ಲ ಜೀವ

  ಒಬ್ಬನೇ ಮಗ, ಇನ್ನಿಲ್ಲ.. ಇದು ಬಾಯಾರಿದ ಮಗನ ಕತೆ-ವ್ಯಥೆ

ನೀರು ಎಂದುಕೊಂಡು ಆ್ಯಸಿಡ್​ ಕುಡಿದು ಮಗು ಸಾವನ್ನಪ್ಪಿದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ನರಳಾಡಿ ಚಿಕಿತ್ಸೆ ಫಲಿಸದೆ ಕೊನೆಗೆ ಮಗು ಸಾವನ್ನಪ್ಪಿದೆ.

ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಬಂಗಾಂಗದಲ್ಲಿ ವಾಸವಾಗಿರುವ ಕೈಲಾಶ್​ ಅಹಿರ್ವಾರ್​ ಅವರ ಮಗು ನೀರು ಎಂದು ಆಕಸ್ಮಿಕವಾಗಿ ಆ್ಯಸಿಡ್​ ಸೇವಿಸಿದೆ. ಪರಿಣಾಮ 6 ವರ್ಷದ ಮಖಾನ್​ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.

ಅಮ್ಮಾ.. ಬಾಯಾರಿಕೆ ಆಗ್ತಿದೆ

ಮನೆ ಸ್ವಚ್ಛಗೊಳಿಸಲು ಎಂದು ಕೈಲಾಶ್​​ ಆ್ಯಸಿಡ್​ ತಂದಿಟ್ಟಿದ್ದರು. ಮೇ5ರಂದು ರಾತ್ರಿ 12 ಗಂಟೆಗೆ ಸುಮಾರಿಗೆ ಮಖಾನ್ ತನ್ನ ತಂದೆ ಬಳಿ ಮಲಗಿದ್ದನು. ಮಧ್ಯರಾತ್ರಿ ಬಾಯಾರಿಕೆಯಾಗಿದ್ದಾಗ ತಂದೆ ಕೈಲಾಶ್​ ಆತನಿಗೆ ನೀರು ಕೊಟ್ಟಿದ್ದಾರೆ. ಬಳಿಕ ಆತ ತಾಯಿ ಬಳಿ ಮಲಗಿದ್ದಾನೆ. ಸುಮಾರು 1.30 ಹೊತ್ತಿಗೆ ಮತ್ತೆ ನೀರು ಕೇಳಿದ್ದಾನೆ. ಆವಾಗ ತಾಯಿ ನೀರು ಕೊಟ್ಟು ಮಲಗಿಸಿದ್ದಾರೆ. ನಂತರ 3 ಗಂಟೆಗೆ ಮತ್ತೆ ಎದ್ದಿದ್ದಾನೆ. ಈ ವೇಳೆ ಕೂಲರ್​ ಬಳಿ ಇಟ್ಟಿದ್ದ ಆ್ಯಸಿಡ್​​ ಬಾಟಲಿಯನ್ನು ನೀರು ಎಂದು ಭಾವಿಸಿ ಕುಡಿದಿದ್ದಾನೆ.

ಇದನ್ನೂ ಓದಿ: ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್​ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?

ಆಸ್ಪತ್ರೆಯಲ್ಲಿ ಹೋರಾಟ.. ಬದುಕಲಿಲ್ಲ ಜೀವ

ಮಖಾನ್​ ಆ್ಯಸಿಡ್​ ಕುಡಿದು ಮಲಗಿದ ಸ್ವಲ್ಪ ಹೊತ್ತಿನ ಬಳಿಕ ಗಂಟಲಲ್ಲಿ ಉರಿ ಕಾಣಿಸಿದೆ. ತಕ್ಷಣ ತಾಯಿ ರಚನಾ ಅವರನ್ನು ಎಬ್ಬಿಸಿದ್ದಾನೆ. ವಾಂತಿ ಮಾಡಿದ್ದಾನೆ. ವಾಂತಿ ವೇಲೆ ಆ್ಯಸಿಡ್​ ವಾಸನೆಯನ್ನ ಗ್ರಹಿಸಿ ತಾಯಿ ಗಾಬರಿಯಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡಿ ಮಖಾನ್​ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ

ಮನೆ ಸ್ವಚ್ಛಗೊಳಿಸುವ ಆ್ಯಸಿಡ್​

ಮೇ5ರಂದು ಈ ಘಟನೆ ಸಂಭವಿಸಿದೆ. ಕೈಲಾಶ್​​ ವ್ಯಾಪಾರಿಯೊಬ್ಬರಿಂದ ಮನೆ ಸ್ವಚ್ಛಗೊಳಿಸುವ ಆ್ಯಸಿಡ್​ ತೆಗೆದುಕೊಂಡು ಹೋಗಿದ್ದರು. ಬಳಿಕ ಅದನ್ನು ಕೂಲರ್​ ಬಳಿ ಇಟ್ಟಿದ್ದರು. ಮಗು ರಾತ್ರಿ ಬಾಯಾರಿಕೆ ಎಂದು ಆ್ಯಸಿಡ್​ ಕುಡಿದಿದ್ದಾನೆ.

ಒಬ್ಬನೇ ಮಗ.. ಇನ್ನಿಲ್ಲ

ಸದ್ಯ ಕೈಲಾಶ್​ ತನಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದಾರೆ. ಅನ್ಯಾಯವಾಗಿ ನೀರು ಎಂದು ಭಾವಿಸಿ ಆ್ಯಸಿಡ್​ ಕುಡಿದ ಮಗ ಇಹಲೋಕ ತ್ಯಜಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮಾ, ಬಾಯಾರಿಕೆ ಆಗ್ತಿದೆ.. ನೀರು ಎಂದುಕೊಂಡು ಆ್ಯಸಿಡ್​ ಕುಡಿದು ಮಗು ಸಾವು

https://newsfirstlive.com/wp-content/uploads/2024/05/baby-Drunk-Acid.jpg

Load More