newsfirstkannada.com

ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್​ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?

Share :

Published May 16, 2024 at 12:27pm

    ಟಾಟಾ ಪರಿಚಯಿಸಿದೆ ಹೊಸ ಎಲೆಕ್ಟ್ರಿಕ್​ ನ್ಯಾನೋ ಕಾರು

    ಸಾಮಾನ್ಯ ಜನರಿಗೂ ಈ ಕಾರು ಖರೀದಿಸಬಹುದಾಗಿದೆ

    ಎಲೆಕ್ಟ್ರಿಕ್​ ನ್ಯಾನೋ ಕಾರಿನ ಬೆಲೆ ಎಷ್ಟು? ಫೀಚರ್ಸ್​ ಹೇಗಿದೆ?

ಪ್ರಸ್ತುತ ಭಾರತದಲ್ಲಿ ಎಲೆಕ್ಟ್ರಿಕ್​ ವಾಹನಗಳಿಗೆ ಡಿಮ್ಯಾಂಡ್​ ಹೆಚ್ಚಿದೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಅದರಂತೆಯೇ ರತನ್​ ಟಾಟಾ ಒಡೆತನದ ಟಾಟಾ ಕಂಪನಿ ಭಾರತೀಯ ಗ್ರಾಹಕರನ್ನು ಮನದಲ್ಲಿಟ್ಟುಕೊಂಡು ಹೊಸ ನ್ಯಾನೋ ಎಲೆಕ್ಟ್ರಿಕ್​ ಕಾರನ್ನು ಸಿದ್ಧಪಡಿಸಿದೆ. ಸದ್ಯ ಈ ಕಾರು ಮಾರುಕಟ್ಟೆಗೆ ಬಿಡುಗೊಂಡಿದೆ.

ಹೊಸ ನ್ಯಾನೋ ಕಾರು ಹೇಗಿದೆ?

ಶಕ್ತಿಯುತವಾದ ಮೋಟಾರ್​ ಅಳವಡಿಸಿಕೊಳ್ಳುವುದರ ಮೂಲಕ ಹೊಸ ಎಲೆಕ್ಟ್ರಿಕ್​ ನ್ಯಾನೋ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಶಕ್ತಿಯುತವಾದ ಬ್ಯಾಟರಿಯನ್ನು ಹೊಂದಿರುವ ನ್ಯಾನೋ ಒಂದು ಬಾರಿ ಚಾರ್ಜ್​ ಮಾಡಿದ್ರೆ 300 ಕಿ.ಮೀ ಕ್ರಮಿಸುತ್ತದೆ. ಲಾಂಗ್​ ಡ್ರೈವ್​ಗೆ ಈ ಕಾರು ಹೇಳಿಮಾಡಿಸಿದಂತಿದೆ.

ನ್ಯಾನೋ ಕಾರಿನ ವಿಶೇಷತೆಗಳು

ಹೊಸ ಕಾರು ಆ್ಯಂಡ್ರಾಯ್ಡ್​ ಆಟೋ ಮತ್ತು ಆ್ಯಪಲ್​ ಸಂಪರ್ಕ ಸೌಲಭ್ಯ ಹೊಂದಿದೆ. 7 ಇಂಚಿನ ಟಚ್​ ಸ್ಕ್ರೀನ್​ ಅನ್ನು ನೀಡಲಾಗಿದೆ. ಜೊತೆಗೆ ಈ ಕಾರಿನಲ್ಲಿ 6 ಸ್ಪೀಕರ್​ ಸೌಂಡ್​ ಸಿಸ್ಟಂ ಜೊತೆಗೆ ಇಂಟರ್​ನೆಟ್​​ ಸಂಪರ್ಕ ಸೌಲಭ್ಯ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ

ಇದಲ್ಲದೆ ಕಾರಿನಲ್ಲಿ ಪವರ್​ ಸ್ಟೀರಿಂಗ್​​, ಪವರ್​ ವಿಂಡೋಸ್​​, ಆ್ಯಂಟಿ ಬ್ರೇಕಿಂಗ್​ ಲಾಕಿಂಗ್​ ಸಿಸ್ಟಂ, ಸ್ವಯಂ ಚಾಲಿತ ಎಸಿ ಸೌಲಭ್ಯ ನೀಡಲಾಗಿದೆ. ರಿಮೋಟ್​ ಲಾಕಿಂಗ್​ ಸಿಸ್ಟಂ ಕೂಡ ಇದರಲ್ಲಿದೆ.

ಇದನ್ನೂ ಓದಿ: 90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

ಎಲೆಕ್ಟ್ರಿಕ್​ ನ್ಯಾನೋ ಕಾರಿನ ಬೆಲೆ

ಸಾಮಾನ್ಯ ಜನರನ್ನು ತಲುಪಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಹೊಸ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಹಕರಿಗಾಗಿ ಈ ಕಾರು 3ರಿಂದ 5 ಲಕ್ಷ ರೂಪಾಯಿಯ ಒಳಗೆ ಖರೀದಿಸಲು ಸಿಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್​ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?

https://newsfirstlive.com/wp-content/uploads/2024/05/tata-Nano-EV.jpg

Load More