newsfirstkannada.com

90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

Share :

Published May 16, 2024 at 9:30am

    ಬರೀ 4 ಸಾವಿರಕ್ಕೆ ಸಿಗುತ್ತಿದೆ ನೋಕಿಯಾ ಮರು ಪರಿಚಯಿಸಿದ ಫೋನ್​

    ಬಿಡುಗಡೆ ಮಾಡಿದ ಎರಡೇ ದಿನಕ್ಕೆ ಸ್ಟಾಕ್​ ಖಾಲಿ ಆಯ್ತು

    ಯಾಕೆ ಈ ಫೋನ್​ಗೆ ಅಷ್ಟೊಂದು ಡಿಮ್ಯಾಂಡ್​​! ಏನಿದೆ ವಿಶೇಷ?

ವಾರೆ ವ್ಹಾ.. ಓಲ್ಡ್​ ಈಸ್​ ಗೋಲ್ಡ್​ ಎಂಬ ಮಾತಿದೆ. ಹಳೆಯದು ಈಗ ಹೊಸತಾಗಿ ಜನ್ಮ ತಾಳಿದರೆ ಹೇಗಿರುತ್ತೆ?. ಅದರಂತೆಯೇ ನೋಕಿಯಾ ತನ್ನ 3210 ಫೋನನ್ನು ಮತ್ತೆ ಮರು ಪರಿಚಯಿಸಿದೆ. 90ರ ದಶಕದಲ್ಲಿ ಐಕಾನಿಕ್​ ಫೋನ್​ ಆಗಿ ಮಾರುಕಟ್ಟೆಗೆ ಬಂದ ನೋಕಿಯಾ 3210 ಇದೀಗ ಗ್ರಾಹಕರ ಗಮನ ಸೆಳೆಯಲು ಮುಂದಾಗಿದೆ.

25 ವರ್ಷಗಳ ನಂತರ

ಅಚ್ಚರಿ ಸಂಗತಿ ಎಂದರೆ 25 ವರ್ಷಗಳ ನಂತರ ನೋಕಿಯಾ 3210 ಫೋನನ್ನು ಮಾರುಕಟ್ಟೆಗೆ ಮರು ಪರಿಚಯಿಸಿದೆ. 4ಜಿ ಸಂಪರ್ಕದೊಂದಿಗೆ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಯೂಟ್ಯೂಬ್​ ಶಾರ್ಟ್​ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಔಟ್​ ಆಫ್​ ಸ್ಟಾಕ್

ನೋಕಿಯಾ 3210 ಫೋನನ್ನು ಪರಿಚಯಿಸಿದ್ದೇ ತಡ ಸದ್ಯ ಕಂಪನಿ ‘ಔಟ್​ ಆಫ್​ ಸ್ಟಾಕ್​’ ಎಂದು ವರದಿ ಮಾಡಿದೆ. ನೋಕಿಯಾ ಅಧಿಕೃತ ವೆಬ್​ಸೈಟ್​ನಲ್ಲಿ ಮಾರಾಟ ಮಾಡುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿರುವ ಕಾರಣ ಸ್ಟಾಕ್​ ಖಾಲಿಯಾಗಿದೆ ಎಂದಿದೆ.

ಮೂರು ಬಣ್ಣದಲ್ಲಿ ಬಂದ ನೋಕಿಯಾ 3210

ನೋಕಿಯಾ 3210 ಫೋನ್​ ಅನ್ನು ಮೇ8ರಂದು ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆಗೊಂಡ 2 ದಿನಗಳ ಬಳಿಕ ಸ್ಟಾಕ್​ ಖಾಲಿಯಾಗಿದೆ. ಅಂದಹಾಗೆಯೇ ಇದನ್ನು ಮೂರು ಬಣ್ಣದಲ್ಲಿ (ಕಪ್ಪು, ನೀಲಿ, ಚಿನ್ನದ ಬಣ್ಣ) ಕಂಪನಿ ಪರಿಚಯಿಸಿತ್ತು.

ಇದನ್ನೂ ಓದಿ: RCBvsCSK: ಮೇ18 ಆರ್​ಸಿಬಿಗೆ ಅದೃಷ್ಟದ ದಿನ.. ಯಾಕಂದ್ರೆ ಇತಿಹಾಸ ನೋಡಿದ್ರೆ ನಿಮಗೆ ಗೊತ್ತಾಗುತ್ತೆ

ನೋಕಿಯಾ 3210 ಫೋನನ್ನು ಚೀನಾ ಮತ್ತು ಯುರೋಪ್​ನಲ್ಲಿ ಮಾರಾಟಕ್ಕೆ ಸಿಗುವಂತೆ ಕಂಪನಿ ಯೋಚಿಸಿ ಬಿಡುಗಡೆ ಮಾಡಿತು.

ನೋಕಿಯಾ 3210 ವಿಶೇಷತೆ

25 ವರ್ಷಗಳ ಬಳಿಕ ರಿಲೀಸ್​ ಆದ ನೋಕಿಯಾ 3210 ಫೋನ್​ 4ಜಿ ಸಾಮರ್ಥ್ಯದೊಂದಿಗೆ ಬಂದಿದೆ. ಇದು 2.4 ಇಂಚಿನ QVGA ಡಿಸ್​ಪ್ಲೇಯನ್ನು ಹೊಂದಿದೆ. Unisoc T107 ಪ್ರೊಸೆಸರ್​ನಿಂದ ಚಾಲಿತವಾಗಿದೆ. 64MB RAM ಮತ್ತು 128MB ಸ್ಟೊರೇಜ್​​ನೊಂದಿಗೆ ಬಂದಿದೆ. ಮೈಕ್ರೋ ಎಸ್​ಡಿ ಕಾರ್ಡ್ ಅನ್ನು 32ಜಿಬಿ ತನಕ​ ಕೂಡ ಬಳಸಬಹುದಾಗಿದೆ.

ಇದನ್ನೂ ಓದಿ: ಹೆರಿಗೆ ವೇಳೆ ಸರ್ಕಾರಿ ವೈದ್ಯೆಯ ಎಡವಟ್ಟು.. ಹೊಟ್ಟೆಯಲ್ಲಿ ಸಿಕ್ತು 3 ಅಡಿ ಉದ್ದದ ಬಟ್ಟೆ! ಮುಂದೇನಾಯ್ತು?

ಬೆಲೆ ಎಷ್ಟು?

ಅಂದಹಾಗೆಯೇ ನೋಕಿಯಾ 3210 ಫೊನ್​ ಎಸ್​30+ ಆಪರೇಟಿಂಗ್​ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯುಎಸ್​ಬಿ ಟೈಪ್​ ಸಿ ಚಾರ್ಜಿಂಗ್​ ಪೋರ್ಟ್​​ ಹೊಂದಿದ್ದು, 1,450mAh ಬ್ಯಾಟರಿ ಬೆಂಬಲಿತವಾಗಿದೆ. ಇನ್ನು ಗ್ರಾಹಕರಿಗಾಗಿ ಈ ಫೋನ್​ 4 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದೆ.

ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

https://newsfirstlive.com/wp-content/uploads/2024/05/Nokia-3201.jpg

Load More