ಮಕ್ಕಳ ಆರೋಗ್ಯ ದೃಷ್ಟಿಯಿಂದ ಹೊರಡಿಸಿರೋ ಹೊಸ ಮಾರ್ಗಸೂಚಿ
ಮಕ್ಕಳಲ್ಲಿ ಶುರುವಾಗಿದೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆ
ಭವಿಷ್ಯದಲ್ಲಿ ಎದುರಾಗುವ ಮಾರಕಕ್ಕೆ ಎಚ್ಚೆತ್ತುಕೊಂಡ ಸರ್ಕಾರ
ಸ್ಮಾರ್ಟ್ಟಿವಿ, ಸ್ಮಾರ್ಟ್ಫೋನ್ ಬಂದ ಬಳಿಕ ಮಕ್ಕಳ ಏಕಾಗ್ರತೆ ಅದರತ್ತ ತಿರುಗಿದೆ. ಪುಟಾಣಿ ಮಕ್ಕಳು ಸ್ಮಾರ್ಟ್ಫೋನ್ ಕೈಗಿಡದಿದ್ದರೆ ಊಟ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕೆಲವು ಸಮಸ್ಯೆಗಳು ಉಲ್ಬಣಗೊಂಡಿವೆ. ಸದ್ಯ ಇವೆಲ್ಲವನ್ನು ಗಮನಿಸಿದ ಸರ್ಕಾರ ಭವಿಷ್ಯದಲ್ಲಿ ಮಾರಕ ಖಂಡಿತ ಎಂಬುದನ್ನು ಅರಿತು ನಿರ್ಧಾರವೊಂದನ್ನು ಮಾಡಿದೆ. 2 ವರ್ಷದೊಳಗಿನ ಮಕ್ಕಳಿಗೆ ಟಿವಿ ಮತ್ತು ಸ್ಮಾರ್ಟ್ಫೋನ್ ವೀಕ್ಷಿಸುವುದನ್ನು ನಿಷೇಧಿಸಿದೆ.
ಸ್ವೀಡನ್ ದೇಶವು ಇಂತಹದೊಂದು ನಿರ್ಧಾರಕ್ಕೆ ಬಂದಿದೆ. 2 ವರ್ಷಕ್ಕಿಂತ ಕೆಳಗಿನ ಮಕ್ಕಳು ಸ್ಮಾರ್ಟ್ಫೋನ್, ಸ್ಮಾರ್ಟ್ಟಿವಿ ಬಳಸದಂತೆ ಪೋಷಕರನ್ನು ಒತ್ತಾಯಿಸಿದೆ. ಡಿಜಿಟಲ್ ಮಾಧ್ಯಮ ಮತ್ತು ದೂರದರ್ಶನದಿಂದ ಸಂಪೂರ್ಣ ದೂರವಿಡಬೇಕು ಎಂದು ಕೇಳಿಕೊಂಡಿದೆ.
ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ಟಿವಿ ಪರದೆ ವೀಕ್ಷಣೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ವೀಡನ್ ಸರ್ಕಾರ ಹೇಳಿಕೆ. 2 ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ಸ್ಕ್ರೀನ್ ಸಮಯವನ್ನು ನಿಯಂತ್ರಣದಲ್ಲಿಡಿ ಎಂದು ಹೇಳಿದೆ.
ಇದನ್ನೂ ಓದಿ: ಡ್ಯುಯೆಲ್ ಸ್ಕ್ರೀನ್ ಆಯ್ತು.. ಈಗ ಟ್ರಿಪಲ್ ಸ್ಕ್ರೀನ್ ಪರ್ವ! ಮಾರುಕಟ್ಟೆಯಲ್ಲಿ ಮ್ಯಾಜಿಕ್ ಮಾಡೋಕೆ ಹುವೈ ರೆಡಿ
ಸರ್ಕಾರವು ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎರಡರಿಂದ ಐದು ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಒಂದು ಗಂಟೆಯವರೆಗೆ ಸ್ಕ್ರೀನ್ ಸಮಯ ಸೀಮಿತವಾಗಿರಬೇಕು ಎಂದು ಹೇಳಿದೆ.
ಆರರಿಂದ ಹನ್ನೆರಡು ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮಿಂಗ್ ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ನಿರ್ಬಂಧಿಸಬೇಕು. 13ರಿಂದ 18 ವರ್ಷ ವಯಸ್ಸಿನ ಮಕ್ಕಳು ಪ್ರತಿದಿನ ಎರಡರಿಂದ ಮೂರು ಗಂಟೆಗಳ ಪರದೆಯ ಬಳಕೆಯನ್ನು ಮೀರಬಾರದು ಎಂದು ತಿಳಿಸಿದೆ.
ಇದನ್ನೂ ಓದಿ: iPhone 15 ಪ್ರೊ ಮ್ಯಾಕ್ಸ್ ಸ್ಥಗಿತಗೊಳ್ಳುತ್ತಿದೆಯೇ? ಆ್ಯಪಲ್ ಪ್ರಾಡೆಕ್ಟ್ ಕುರಿತಂತೆ ಹರಿದಾಡುತ್ತಿದೆ ಶಾಕಿಂಗ್ ಸುದ್ದಿ
ಮಲಗುವಾಗ ಸ್ಮಾರ್ಟ್ಫೋನ್ ಅಥವಾ ಟಿವಿ ಪರದೆ ವೀಕ್ಷಿಸುವುದನ್ನು ನಿಯಂತ್ರಿಸಿ ಎಂದು ಹೇಳಿದೆ. ಮಕ್ಕಳು ಮಲಗುವ ಕೋಣೆಯಲ್ಲಿ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಇಡದಂತೆ ಕೇಳಿಕೊಂಡಿದೆ.
ಸದ್ಯ ಮಕ್ಕಳಲ್ಲಿ ನಿದ್ರಾ ಬಿಕ್ಕಟ್ಟು ಎದುರಾಗುತ್ತಿದೆ. 15 ವರ್ಷದ ಮಕ್ಕಳು ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂಬ ವರದಿ ಹೊರಬಿದ್ದಿದೆ. ಇದರಿಂದಾಗಿ ಖಿನ್ನತೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿದೆ. ಹೀಗಾಗಿ ಸ್ವೀಡನ್ ದೇಶ ಈ ನಿರ್ಣಯಕ್ಕೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ