/newsfirstlive-kannada/media/post_attachments/wp-content/uploads/2025/02/CHINA-WTARE.jpg)
ಚೀನಾ.. ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಯೋಚಿಸೋ ದೇಶ. ತಮ್ಮ ದೇಶಕ್ಕೆ ಸ್ವಂತ ಌಪ್ಗಳು, ಸ್ವಂತ ಸೂರ್ಯ, ಸ್ವಂತ ಸ್ಪೇಸ್ ಸ್ಟೇಷನ್ ಇರಬೇಕು ಅಂದ್ಕೊಂಡ ಚೀನಾ ಅದಕ್ಕೋಸ್ಕರ ಸಕಲವನ್ನೂ ಪಣಕ್ಕಿಟ್ಟು ಮಾಡಿ ತೋರಿಸ್ತಿದೆ. ಇದೀಗ ಸಮುದ್ರದಾಳಕ್ಕೆ ಕೈ ಹಾಕಿರೋ ಡ್ರ್ಯಾಗನ್ ರಾಷ್ಟ್ರ ಅಲ್ಲೂ ಪ್ರಾಬಲ್ಯ ಸಾಧಿಸೋದಕ್ಕೆ ಮುಂದಾಗಿದೆ.
ಮತ್ತೊಂದು ವಿಚಿತ್ರ ಸಾಹಸಕ್ಕೆ ಕೈ ಹಾಕಿದ ಡ್ರ್ಯಾಗನ್ ರಾಷ್ಟ್ರ
ವರ್ಷಗಳಿಂದ ಚರ್ಚೆ ನಡೆಸಿ ನಡೆಸಿ ಡ್ರ್ಯಾಗನ್ ರಾಷ್ಟ್ರ ಚೀನಾ ಅಂತಿಮವಾಗಿ ಸಮುದ್ರ ಪರಿಶೋಧನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 2,000 ಮಿಟರ್ ಅಂದ್ರೆ 6 ಸಾವಿರದ 560 ಅಡಿ ಆಳದಲ್ಲಿ ಸ್ಪೇಸ್ ಸ್ಟೇಷನ್ ನಿರ್ಮಾಣ ಮಾಡಿ, ಅಲ್ಲಿ ತಿಂಗಳು ಗಟ್ಟಲೆ ಆರು ವಿಜ್ಞಾನಿಗಳನ್ನ ಇರಿಸಿ, ಸೂಕ್ತ ಸೌಲಭ್ಯ ಕೊಟ್ಟು ಸಂಶೋಧನೆ ನಡೆಸಲಿದೆ. ಈ ಸಾಹಸದ ಸಂಶೋಧನೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ಲೇಸ್ ಫಿಕ್ಸ್ ಆಗಿದೆ.
ಇದನ್ನೂ ಓದಿ: ಒನ್ ಪ್ಲಸ್ ಕಂಪನಿಯಿಂದ ಭರ್ಜರಿ ಫ್ರೀ ಆಫರ್; ಸ್ಮಾರ್ಟ್ಫೋನ್ ಬಳಕೆದಾರರು ಓದಲೇಬೇಕಾದ ಸ್ಟೋರಿ!
ಸಮುದ್ರ ಆಳದಲ್ಲಿ
2 ಸಾವಿರ ಮೀಟರ್ ಆಳದಲ್ಲಿ ನಿರ್ಮಿಸ್ತಿರೋ ಈ ಸ್ಪೇಸ್ ಸ್ಟೇಷನ್ನ ಉದ್ದೇಶ ನೀರಿನಾಳದಲ್ಲಿ ಸಂಶೋಧನೆ ನಡೆಸೋದು. ಆದ್ರೆ ಡ್ರ್ಯಾಗನ್ ರಾಷ್ಟ್ರದ ಅಸಲಿ ಕರಾಮತ್ತು, ಕನಸು ಬೇರೆಯೇ ಇದೆ. 35 ಟನ್ ತೂಕದ ಸ್ಪೇಸ್ ಸ್ಟೇಷನ್ ನಿರ್ಮಾಣವಾಗ್ತಿರೋದು ಕೋಲ್ಡ್ ಸೀಪ್ ಪ್ರದೇಶದಲ್ಲಿ. ಕೋಲ್ಡ್ ಸೀಪ್ ಪ್ರದೇಶ ಅಂದ್ರೆ, ಹೈಡ್ರೋಜನ್ ಸಲ್ಫೈಡ್, ಮೀಥೇನ್ ಮತ್ತು ಇತರ ಹೈಡ್ರೋಕಾರ್ಬನ್-ಭರಿತ ದ್ರವಗಳು ಸಿಗುವ ಜಾಗ. ಪೆಟ್ರೋಲ್ ಕೂಡ ಒಂದು ಹೈಡ್ರೋಕಾರ್ಬನ್ ಉತ್ಪನ್ನ.. ಡ್ರ್ಯಾಗನ್ ದೇಶ ಇಲ್ಲಿ ಬೆಳೆ ಬಾಳುವ ವಸ್ತು, ಅಂದ್ರೆ ಪೆಟ್ರೋಲ್ಗೆ ಪ್ರರ್ಯಾಯ ಪ್ರಾಡಕ್ಟ್ ಹುಡುಕೋ ಕಾರ್ಯಕ್ಕೆ ಕೈ ಹಾಕಿದೆ. ಇಲ್ಲಿ ಸರಾಸರಿ ಟೆಂಪರೇಚರ್ ಕೇವಲ 2.5 ಸೆಲ್ಸಿಯಸ್ ಇರುತ್ತೆ.. ಇಲ್ಲಿ ಕೆಲಸ ಮಾಡೋದು ಕಷ್ಟ ಸಾಧ್ಯ ಅಂತ ಗೊತ್ತಿದ್ರೂ ಚೀನಾ ಈ ಕಾರ್ಯಕ್ಕೆ ಕೈ ಹಾಕಿದೆ. ಆದ್ರೂ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸ್ಪೇಸ್ ಸ್ಟೇಷನ್ ನಿರ್ಮಿಸ್ತಿರೋದಕ್ಕೆ ಅಸಲಿ ಕಾರಣ ಮೀಥೇನ್ ಹೈಡ್ರೈಟ್.
ಇದನ್ನೂ ಓದಿ: ಇನ್ಮುಂದೆ ಹಳೆ ಚಾಟ್ ಸುಲಭವಾಗಿ ಹುಡುಕಬಹುದು; ವಾಟ್ಸ್ಆ್ಯಪ್ ಬಳಕೆದಾರರಿಗೆ ಭರ್ಜರಿ ಗುಡ್ನ್ಯೂಸ್
ಸಮುದ್ರದಾಳದಲ್ಲಿ ನಿಕ್ಷೇಪ
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಸುಮಾರು 117 ಟನ್ ಮೀಥೇನ್ ಹೈಡ್ರೈಟ್ ನಿಕ್ಷೇಪ ಇದೆ ಅಂತಾ ಅಂದಾಜಿಸಲಾಗಿದೆ. ಮೀಥೇನ್ ಹೈಡ್ರೈಟ್ ತೆಗೆದು ಅದರಿಂದ ಗ್ಯಾಸ್ ಉತ್ಪಾದಿಸಿ, ವಿವಿಧ ರಾಷ್ಟ್ರಗಳ ಮೇಲಿನ ಅವಲಂಭನೆ ಕಡಿಮೆ ಮಾಡೋದು ಚೀನಾದ ಗುರಿ. ಎಲ್ಲವನ್ನೂ ಸ್ವಂತದ್ದೇ ಬಳಸೋ ಚೀನಾ ತೈಲಕ್ಕೆ ಅಂದ್ರೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇರೆ ಬೇರೆ ದೇಶಗಳನ್ನ ಅವಲಂಬಿಸಿದೆ. ಭವಿಷ್ಯದಲ್ಲಿ ಸ್ವಾವಲಂಬಿ ಆಗೋಕೆ ಬಯಸಿರೋ ಚೀನಾಗೆ ಕಾಣಿಸ್ತಿರೋದು ಇದೇ ಮೀಥೇನ್ ಹೈಡ್ರೈಟ್. ಈ ಮೂಲಕ ಜಗತ್ತಿಗೆ ಹೊಸ ಇಂಧನವನ್ನ ಪರಿಚಯಿಸಿ ಅದರಲ್ಲಿ ಪ್ರಾಬಲ್ಯ ಸಾಧಿಸೋದು ಚೀನಾದ ಕನಸು. ಆದ್ರೆ ಇದನ್ನ ನೇರವಾಗಿ ಹೇಳದ ಜಿನ್ಪಿಂಗ್ ಆಡಳಿತ ಸಂಶೋಧನೆ, ಅನ್ವೇಷಣೆಯ ಕಥೆಗಳನ್ನ ಹೇಳ್ತಿದೆ.
ಕಾಲಿಡೋ ಜಾಗ ಎಲ್ಲಾ ನನಗೆ ಬೇಕು ಅಂತಾ ಹಂಬಲಿಸೋ ಚೀನಾ ಇದೀಗ ಸಮುದ್ರದಾಳಕ್ಕೂ ಕೈ ಹಾಕಿದೆ. ಈ ವಾಟರ್ ಸ್ಪೇಸ್ ಸ್ಟೇಷನ್ ಕಾರ್ಯ ಶೀಘ್ರ ಆರಂಭವಾಗಲಿದ್ದು, 2030ರ ವೇಳೆಗೆ ಅಂತ್ಯವಾಗಲಿದೆ. ಚೀನಾದ ಈ ಕನಸು ಅಪಾಯಕ್ಕೂ ಕಾರಣವಾಗಬಹುದು. ಯಾಕಂದ್ರೆ ಮೀಥೇನ್ ಹೈಡ್ರೈಟ್ ಹೊರತೆಗೆಯುವಾಗ ಸ್ವಲ್ಪ ಯಾಮಾರಿದ್ರೂ ಮಹಾ ದುರಂತ ನಡೆಯೋ ಸಾಧ್ಯತೆ ಇದೆ. ಹೀಗಾಗಿ ಡ್ರ್ಯಾಗನ್ ಕಡಲ ಬೇಟೆ ಭಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: VIDEO- ಚಂದ್ರ, ಸೂರ್ಯನ ಬಳಿಕ ಮಾನವ ಸಹಿತ ಸಮುದ್ರಯಾನ.. ಏನಿದು ಗೊತ್ತಾ ಸಬ್‌ಮರ್ಸಿಬಲ್ ಮತ್ಸ್ಯ- 6000
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ