newsfirstkannada.com

×

ಚೀನಾದ Beautiful ಗವರ್ನರ್​ಗೆ 13 ವರ್ಷ ಜೈಲು ಶಿಕ್ಷೆ,ಕೋಟಿ ರೂಪಾಯಿ ದಂಡ! ಕಾರಣವೇನು?

Share :

Published September 20, 2024 at 7:56pm

Update September 21, 2024 at 8:22am

    ಚೀನಾದ ಸೌಂದರ್ಯವತಿ ಗವರ್ನರ್​ಗೆ 13 ವರ್ಷಗಳ ಕಾಲ ಜೈಲು ಶಿಕ್ಷೆ

    ಬ್ಯೂಟಿಫುಲ್ ಗವರ್ನರ್ ಎಂದೇ ಖ್ಯಾತಿ ಪಡೆದಿದ್ದ ಯಾಂಗ್​ ಚಾಂಗ್

    ಕೋಟಿ ಕೋಟಿ ಲಂಚ ಪಡೆದ ಆರೋಪದ ಮೇಲೆ ಜೈಲು ಸೇರಿದ ಸುಂದರಿ

ಬೀಜಿಂಗ್​: ಚೀನಾದ ಜಗದೇಕ ಸುಂದರಿ ಗವರ್ನರ್ ಎಂದೇ ಹೆಸರು ಮಾಡಿದ್ದ ಚಾಂಗ್ ಯಾಂಗ್​ಗೆ 13 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ. ಚಾಂಗ್ ಯಾಂಗ್​ ತಮ್ಮ ಸೌಂದರ್ಯದಿಂದಲೇ ಹೆಸರು ಮಾಡಿದ್ದವರು. ಚೀನಾದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿಯೇ ‘ಬ್ಯೂಟಿಫುಲ್ ಗವರ್ನರ್ ಎಂಬ ಖ್ಯಾತಿಯನ್ನೆ ಪಡೆದಿದ್ದರು.ಈ ನೈರುತ್ಯ ಚೀನಾದ ರಾಜ್ಯಪಾಲೆಯಾಗಿ ಮತ್ತು ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಚಾಂಗ್​ ಯಾಂಗ್ ಈಗ ಕಂಬಿ ಹಿಂದೆ ಹೋಗಿದ್ದಾರೆ.
ತಮಗಿಂತ ಕೆಳದರ್ಜೆಯ ಅಧಿಕಾರಿಯೊಂದಿಗೆ ದೈಹಿಕ ಸಂಬಂಧ ಬೆಳಸಿದ ಆರೋಪ ಹಾಗೂ 6 ಕೋಟಿ ಯುವನ್ ಲಂಚ ಪಡೆದ ಆರೋಪದ ಮೇಲೆ ಈಗ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ.

ಸಾಧಾರಣ ಕುಟುಂಬದಲ್ಲಿ ಬೆಳೆದು ಬಂದಿದ್ದ ಯಾಂಗ್ ಚಾಂಗ್ ಇತಿಹಾಸದಲ್ಲಿ ಪದವಿ ಪಡೆದಿದ್ದರು.22 ವಯಸ್ಸಿನಲ್ಲಿ ಸಿಪಿಸಿ ಪಕ್ಷವನ್ನು ಸೇರಿಕೊಂಡ ಅವರು ಮುಂದೆ ನ್ಯಾಷನಲ್ ಪೀಪಲ್ ಕಾಂಗ್ರೆ್​ನಲ್ಲಿ ಡೆಪ್ಯೂಟಿಯಾಗಿ ನೇಮಕಗೊಂಡರು.
ಹಣ್ಣು ಹಾಗೂ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಮೂಲಕ ಯಾಂಗ್ ಚಾಂಗ್ ಹೆಚ್ಚು ಪ್ರಚಲಿತಕ್ಕೆ ಬಂದರು. ರೈತರ ಬೆನ್ನಿಗೆ ನಿಂತ ಮಹಿಳೆ ಎಂಬ ದೊಡ್ಡ ಹೆಸರು ಮಾಡಿದ್ದರು ಯಾಂಗ್​ ಚಾಂಗ್

ಇದನ್ನೂ ಓದಿ: ಲಾಸ್ ಎಂಜಲೀಸ್​ನಲ್ಲಿ ಭಾರೀ ಆತಂಕದ ವಾತಾವರಣ; ಆಗ್ತಿರುವ ಅನಾಹುತಕ್ಕೆ ಬೆಚ್ಚಿಬಿದ್ದ ಜನ

ಹೀಗಿದ್ದ ಚಾಂಗ್​ನ ಸುತ್ತ ಜನವರಿ ವೇಳೆ ಹಲವು ವಿವಾದಗಳು ಬೆನ್ನು ಬಿದ್ದವು. ಹಲವು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ತಮ್ಮ ಅಧಿಕಾರ ಬಳಸಿಕೊಂಡು ಲಂಚವನ್ನು ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು 1 ಲಕ್ಷ 70 ಸಾವಿರ ಸ್ಕೇರ್ ಮೀಟರ್ ಜಾಗವನ್ನು ತಮಗೆ ಅತ್ಯಂತ ಆತ್ಮೀಯರಾಗಿದ್ದ ಉದ್ಯಮಿಯೊಬ್ಬರಿಗೆ ನೀಡಲು ಒಪ್ಪಿಗೆ ನೀಡಿದ್ದು ಹಾಗೂ ಆ ಡೀಲಿಂಗ್​ನಲ್ಲಿ ಚಾಂಗ್ ಲಂಚ ಪಡೆದಿದ್ದರು ಅನ್ನೋ ಆರೋಪ ಸದ್ಯ ಅವರ ಮೇಲಿದೆ.

ಇದನ್ನೂ ಓದಿ: ಗರ್ಭಿಣಿ ಮೈ ಮೇಲೆ ಎಗರಿದ ಶ್ವಾನ; ನಾಯಿ ಮಾಲೀಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇದೇ ಆರೋಪದ. ಉದ್ಯಮ ಸ್ಥಾಪನೆಗೆ ಮಂಜೂರಾದ ಜಾಗದಲ್ಲಿ ಬಳಿಕ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಶುರುವಾಗಿದ್ದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ವೈಯಕ್ತಿಕವಾಗಿ ಒಪ್ಪಂದ ಮಾಡಿಕೊಂಡು ಉದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಡೀಲ್ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು ಇಷ್ಟು ಮಾತ್ರವಲ್ಲ ತಮ್ಮದೇ ಕಚೇರಿಯಲ್ಲಿ ಕೆಳ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ ಆರೋಪವು ಕೂಡ ಚಾಂಗ್ ಮೇಲೆ ಬಂದಿದ್ದು ಸದ್ಯ ಅವರಿಗೆ 13 ವರ್ಷ ಕಾರಾಗೃಹ ಶಿಕ್ಷೆಯ ಜೊತೆಗೆ 1 ಕೋಟಿ 63 ಲಕ್ಷ ಭಾರತೀಯ ರೂಪಾಯಿಯಷ್ಟು ದಂಡ ವಿಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾದ Beautiful ಗವರ್ನರ್​ಗೆ 13 ವರ್ಷ ಜೈಲು ಶಿಕ್ಷೆ,ಕೋಟಿ ರೂಪಾಯಿ ದಂಡ! ಕಾರಣವೇನು?

https://newsfirstlive.com/wp-content/uploads/2024/09/CHINA-BEAUTIFUL-GOVERNOR.jpg

Load More