newsfirstkannada.com

×

ಗರ್ಭಿಣಿ ಮೈ ಮೇಲೆ ಎಗರಿದ ಶ್ವಾನ; ನಾಯಿ ಮಾಲೀಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

Share :

Published September 20, 2024 at 6:11am

    ಶ್ವಾನದ ಚೆಲ್ಲಾಟದಿಂದಾಗಿ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡ ತಾಯಿ

    ಗರ್ಭಿಣಿ ಮೇಲೆ ನೆಗೆದ ನಾಯಿ. ಹೊಟ್ಟೆಗೆ ಪೆಟ್ಟು ಬಿದ್ದು ಗರ್ಭಪಾತದಂತ ದುರಂತ

    ಶ್ವಾನ ಮಾಲೀಕನಿಂದ ಚೀನಾದ ಆ ಕೋರ್ಟ್​ ಪರಿಹಾರ ಕೊಡಿಸಿದ್ದು ಎಷ್ಟು ಲಕ್ಷ?

ಬೀಜಿಂಗ್​: 41 ವರ್ಷದ ಹೆಣ್ಣು ಮಗಳು. ಕಳೆದ ನಾಲ್ಕೈದು ವರ್ಷಗಳಿಂದ ಮಕ್ಕಳಾಗಲಿ ಎಂದು ಹಲವು ಚಿಕಿತ್ಸೆಯನ್ನು ಪಡೆದುಕೊಂಡು ಕೊನೆಗೂ ಗರ್ಭಿಣಿಯಾಗಿದ್ದರು. ಬೆಳಗ್ಗೆ ವಾಕಿಂಗ್​​ಗೆ ಅಂತ ಬಂದಾಗ ಆಕೆಯ ಮೇಲೆ ಗೋಲ್ಡರ್​ ರಿಟ್ರೀವರ್​ ಶ್ವಾನವೊಂದು ಗರ್ಭಿಣಿಯ ಮೈಮೇಲೆ ಜಿಗದ ಕಾರಣ ಅವರು ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದಾಗ ಹೊಟ್ಟೆಯಲ್ಲಿರುವ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ಆಹಾ ನನ್ನ ಮದುವೆಯಂತೆ.. ಅಬ್ದು ರೋಝಿಕ್‌ಗೆ ಕೈ ಕೊಟ್ಟಳಾ ಆ ಹುಡುಗಿ; ಕಾರಣವೇನು? VIDEO

ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ವಿಟ್ರೋ ಫರ್ಟಿಲೈಸೇಷನ್ ಅನ್ನುವ ಶಸ್ತ್ರಚಿಕತ್ಸೆಯನ್ನು ಅನೇಕ ಬಾರಿ ಮಾಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಹೀಗೆ ಆಪರೇಷನ್ ಮಾಡಿಸಿಕೊಂಡ ಹಲವು ವರ್ಷಗಳ ಬಳಿ ಅವರು ಗರ್ಭಿಣಿಯಾಗಿದ್ದರು. ಈ ವೇಳೆ ಶ್ವಾನವೊಂದು ಮಾಡದಿ ಯಡವಟ್ಟಿನಿಂದಾಗಿ ಆಕೆ ಮತ್ತೆ ತಾಯ್ತನವನ್ನ ಕಳೆದುಕೊಂಡಿದ್ದಾರೆ. ಕೂಡಲೇ ಶ್ವಾನದ ಮಾಲೀಕನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ ಆ ಮಹಿಳೆ. ವಿಚಾರಣೆಯನ್ನು ಮಾಡಿದ ನ್ಯಾಯಾಲಯ ಶ್ವಾನದ ಮಾಲೀಕನಿಗೆ 90 ಸಾವಿರ ಯುವನ್ ಅಂದ್ರೆ ಭಾರತದ 10 ಲಕ್ಷ 63 ಸಾವಿರ ರೂಪಾಯಿಯಷ್ಟು ದಂಡ ವಿಧಿಸಿದೆ.

ಇದನ್ನೂ ಓದಿ: 2 ತಿಂಗಳ ಸ್ಕೆಚ್​.. ಪೇಜರ್‌ನಲ್ಲಿ 3 ಗ್ರಾಂ ಸ್ಫೋಟಕ; ಇಸ್ರೇಲ್‌ನ ಮೊಸಾದ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ!

ಚೀನಾದಲ್ಲಿರುವ ಸಾಕು ಪ್ರಾಣಿಗಳ ಕಾನೂನಿನ ಪ್ರಕಾರ, ಶ್ವಾನಗಳನ್ನು ಬೆಲ್ಟ್​ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಸ್ವತಂತ್ರವಾಗಿ ಬಿಡುವಂತಿಲ್ಲ. ಕಾನೂನು ಉಲ್ಲಂಘನೆಯ ಜೊತೆ ಜೊತೆಗೆ ಮಹಿಳೆಯ ಗರ್ಭಪಾತಕ್ಕೂ ಕಾರಣವಾಗಿರುವ ಶ್ವಾನದ ಮಾಲೀಕನ ವಿರುದ್ಧ 90 ಲಕ್ಷ ಯುವನ್​ ಮೊತ್ತವನ್ನು ಪರಿಹಾರವಾಗಿ ಮಹಿಳೆಗೆ ನೀಡಬೇಕು ಎಂದು ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗರ್ಭಿಣಿ ಮೈ ಮೇಲೆ ಎಗರಿದ ಶ್ವಾನ; ನಾಯಿ ಮಾಲೀಕನಿಗೆ ಬಿದ್ದ ದಂಡ ಎಷ್ಟು ಗೊತ್ತಾ?

https://newsfirstlive.com/wp-content/uploads/2024/09/CHINA-DOG-ATTACK.jpg

Load More