newsfirstkannada.com

×

2 ತಿಂಗಳ ಸ್ಕೆಚ್​.. ಪೇಜರ್‌ನಲ್ಲಿ 3 ಗ್ರಾಂ ಸ್ಫೋಟಕ; ಇಸ್ರೇಲ್‌ನ ಮೊಸಾದ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ!

Share :

Published September 18, 2024 at 9:48pm

Update September 18, 2024 at 9:49pm

    ಸಾಮಾನ್ಯ ವಸ್ತುವನ್ನೂ ಬ್ರಹ್ಮಾಸ್ತ್ರ ಮಾಡಿಕೊಂಡಿರುವ ಇಸ್ರೇಲಿಗರು

    ಈ ಭೀಕರ ದಾಳಿಯನ್ನ ಮೊಸಾದ್ ಪ್ಲಾನ್​ ಮಾಡಿದ್ದಾದ್ರೂ ಹೇಗೆ?

    ತಂತ್ರಜ್ಞಾನ ಎಷ್ಟು ಮುಂದಿದೆ ಎನ್ನುವುದಕ್ಕೆ ಈ ಡೆಡ್ಲಿ​ ಪ್ಲಾನ್ ಸಾಕ್ಷಿ

ಮೊಸಾದ್ ಅನ್ನೋ ಭಯಾನಕ ಬೇಹುಗಾರಿಕಾ ಸಂಸ್ಥೆ ಒಮ್ಮೆ ಕಣ್ಣಿಟ್ರೆ ಮುಗೀತು. ಅಕ್ಷರಶಃ ಪ್ರಳಯರುದ್ರನ ಅನುಯಾಯಿಯಂತೆ ಶತ್ರುಗಳ ಸಂಹಾರ ಮಾಡದೆ ಬಿಡೋದಿಲ್ಲ. ಅಂತಹ ರಣವಿಕ್ರಮ ಗುಪ್ತಚರ ಪಡೆ ಈಗ ಲೆಬನಾನ್​ನಲ್ಲಿ ಪೇಜರ್ ಪ್ರಳಯ ನಡೆಸಿಬಿಟ್ಟಿದ್ಯಾ?. ಅಷ್ಟಕ್ಕೂ ಪೇಜರ್​​​ಗಳು ಸೃಷ್ಟಿಸಿದ ಈ ಭೀಕರ ದಾಳಿಯನ್ನ ಮೊಸಾದ್ ಪ್ಲಾನ್​ ಮಾಡಿದ್ದಾದ್ರೂ ಹೇಗೆ?.

ಬೀಪ್ ಅಂತ ಬಂದ ಒಂದೇ ಸೌಂಡ್​​ಗೆ ಅನಾಹುತವೇ ಸೃಷ್ಟಿಯಾಗಿದೆ. ಪೇಜರ್​ಗೆ ಬಂದ ಕಟ್ಟಕಡೆಯ ಮೆಸೇಜ್​ ಬಳಿಕ ಸಾಲು ಸಾಲು ಸ್ಫೋಟಗಳಾಗಿವೆ. ಲೆಬನಾನ್ ಹಾಗೂ ಸಿರಿಯಾ ಭಾಗದಲ್ಲಿ ಪೇಜರ್​ ಸೃಷ್ಟಿಸಿದ ಪ್ರಳಯ ಯಾವ ಬಾಂಬ್, ಕ್ಷಿಪಣಿ ದಾಳಿಗೂ ಕಮ್ಮಿ ಇಲ್ಲದಷ್ಟು ಭೀಕರವಾಗಿದೆ. ಇಂಥದ್ದೊಂದು ದಾಳಿಯ ಹಿಂದೆ ಇಸ್ರೇಲ್, ಅದ್ರಲ್ಲೂ ಇಸ್ರೇಲ್​ನ ಮೊಸಾದ್ ಕೈವಾಡವಿದೆ ಅನ್ನೋದಕ್ಕೆ ಬಹುಮುಖ್ಯ ಸಾಕ್ಷಿಗಳೇ ದೊರಕುತ್ತಿದೆ.

ಇದನ್ನೂ ಓದಿ: ಲೆಬನಾನ್‌ ದೇಶದಲ್ಲಿ ಪೇಜರ್ ಬ್ಲಾಸ್ಟ್‌ ಬೆನ್ನಲ್ಲೇ ಮತ್ತೆ ನಿಗೂಢ ಸ್ಫೋಟಗಳು; ಡೆಡ್ಲಿ ಪ್ಲಾನ್‌ನ ರಹಸ್ಯ ಇಲ್ಲಿದೆ!

ಮೊಸಾದ್​ ಮಹಾ ಪ್ಲಾನ್​ಗೆ ಪೇಜರ್​ಗಳು ಛಿದ್ರಛಿದ್ರವಾಗಿವೆಯೇ?

ಮೊಸಾದ್ ಅನ್ನೋ ಭಯಾನಕ ಹಾಗೂ ಅತಿ ಚಾಣಕ್ಯ ಗುಪ್ತಚರ ಸಂಸ್ಥೆ ಏನು ಬೇಕಾದ್ರೂ ಮಾಡಬಹುದು ಅನ್ನೋ ಖ್ಯಾತಿ ಹಾಗೂ ಕುಖ್ಯಾತಿಯನ್ನೂ ಹೊಂದಿದೆ. ಯಾಕಂದ್ರೆ, ಶತ್ರುಪಾಳಯಕ್ಕೇ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡೋ ಧಮ್ಮು, ಧೈರ್ಯ, ತಂತ್ರಜ್ಞಾನ, ಚಾಣಾಕ್ಷತನ ಮೊಸಾದ್​​ಗಿದೆ. ಎದೆಗೆ ನಾಟುವ ಬುಲೆಟ್​ ಎಲ್ಲಿಂದ ಬಂತು ಅನ್ನೋದೇ ಗೊತ್ತಾಗೋದಿಲ್ಲ. ಕೊಂದವರು ಮನುಷ್ಯರಾ? ಅಥವಾ ರೊಬೋಟ್​ಗಳಾ ಅನ್ನೋದೂ ತಿಳಿಯಲ್ಲ. ಅಷ್ಟೊಂದು ಭೀಭತ್ಸ ಹಾಗೂ ಸಖತ್​ ಬುದ್ಧಿವಂತಿಕೆಯಿಂದ ಶತ್ರುಗಳ ಕೋಟೆಗೇ ನುಗ್ಗಿ ಮೊಸಾದ್ ಅವರ ಹುಟ್ಟಗಿಸಿದ ಅದೆಷ್ಟೋ ನಿದರ್ಶನಗಳಿವೆ. ಮೊಸಾದ್​ ಮಾಡಿರೋ ಆಪರೇಷನ್​ಗಳ ಪಟ್ಟಿ ನೋಡಿದ್ರೇನೇ ಸಾಕು ಎಂಥಾ ಯಮದೂತ ಅನ್ನೋದು ಅರ್ಥವಾಗುತ್ತದೆ. ಹಮಾಸ್ ವಿರುದ್ಧದ ಇಸ್ರೇಲ್ ಸಮರದ ವೇಳೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ವಿರುದ್ಧ ಹಲವು ರಾಷ್ಟ್ರಗಳ ಉಗ್ರರು ಸಮರ ಸಾರಿದ್ರು. ಅಲ್ಲದೇ, ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ ಭೀಕರ ದಾಳಿ ನಡೆಸಿದ್ದರು. ನೆಲ, ವಾಯು ಹಾಗೂ ಜಲ ಮಾರ್ಗದಲ್ಲಿ ಇಸ್ರೇಲ್‌ಗೆ ನುಗ್ಗಿದ್ದ ಸಾವಿರಾರು ಹಮಾಸ್ ಉಗ್ರರು ಇಸ್ರೇಲ್‌ನಲ್ಲಿ ನೂರಾರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿ ತಮ್ಮ ಜೊತೆಗೆ ನೂರಾರು ಮಂದಿಯನ್ನು ಒತ್ತೆಯಾಳಾಗಿ ಕರೆದೊಯ್ದಿದ್ದರು. ಬಳಿಕ ಗಾಜಾ ಪಟ್ಟಿ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿದ್ದ ಇಸ್ರೇಲ್, ಹಮಾಸ್ ಸಂಘಟನೆಯನ್ನು ನಿರ್ನಾಮ ಮಾಡುವ ಪಣ ತೊಟ್ಟಿತು. ಇದರ ಭಾಗವಾಗಿ ಲೆಬನಾನ್​​ನ ಹಿಜ್ಬುಲ್ಲಾ ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಪೇಜರ್​ ಬಾಂಬ್ ಅಸ್ತ್ರ ಪ್ರಯೋಗ ಮಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?

2 ತಿಂಗಳ ಮೊಸಾದ್ ಮಹಾ ಪ್ಲಾನ್.. ಪೇಜರ್​ಗೆ ಸೇರಿತ್ತು ಆ 3 ಗ್ರಾಂ!

ಪೇಜರ್​ಗಳಲ್ಲಿರುವ ಲೀಥಿಯಂ ಬ್ಯಾಟರಿಗಳೇ ಮೊಸಾದ್​​ ಪಾಲಿಗೆ ಗೆಳೆಯನಾಗಿದ್ದಾನೆ ಯಾಕಂದ್ರೆ, ಪೇಜರ್​ ಸೃಷ್ಟಿಸಿದ್ದೇ ಓರ್ವ ಯಹೂದಿ. ಜಾಣತನಕ್ಕೆ ಹೆಸರಾದ ಇಸ್ರೇಲಿಗರು ತಮ್ಮದೇ ಮೂಲದ ಸಾಮಾನ್ಯ ವಸ್ತುವನ್ನೂ ಸಹ ಬ್ರಹ್ಮಾಸ್ತ್ರವಾಗಿ ಮಾಡಿಕೊಳ್ಳಬಲ್ಲರು ಅನ್ನೋದು ಈ ದಾಳಿಯಿಂದ ಗೊತ್ತಾಗಿದೆ. ಬ್ಯಾಟರಿ ಒಳಗೋ ಅಥವಾ ಬ್ಯಾಟರಿ ಪಕ್ಕವೋ ಅನ್ನೋದು ಕನ್ಫರ್ಮ್​ ಇಲ್ಲ. ಬಟ್, ಪೇಜರ್​ಗಳ ಹಿಂಬದಿ ಒಂದು ತೆಳುವಾದ ಲೈನಿಂಗ್​​ ಇತ್ತು ಎನ್ನಲಾಗ್ತಿದೆ. ಇದೇ ಲೈನಿಂಗ್​​ನಲ್ಲೇ ಹೆಜ್ಬುಲ್ಲಾ ಉಗ್ರರಿಗೆ ತಿಳಿಯದಂತೆ ಮೊಸಾದ್​ 3ರಿಂದ 5 ಗ್ರಾಂ ಸ್ಫೋಟಕ ಇರಿಸಿತ್ತು ಎನ್ನಲಾಗಿದೆ. ಪೆಂಟಾರಿಥ್ರಿಟಾಲ್ ಟೆಟ್ರಾನೈಟ್ರೇಟ್ ಅನ್ನೂ ಸ್ಫೋಟಕ ಅದಾಗಿತ್ತಂತೆ. 1996ರಲ್ಲಿ ಅಮೆರಿಕ ಸೇನೆ ಸೌದಿ ಅರೇಬಿಯಾದ ಕೋಬರ್​ ಟವರ್​​ ಉರುಳಿಸೋದಕ್ಕೆ ಇದೇ ಸ್ಫೋಟಕ ಬಳಸಿತ್ತು. ಇದೀಗ ಮೊಸಾದ್ ತನ್ನ ವಿರುದ್ಧ ಯುದ್ಧ ಸಾರಿದ ಉಗ್ರ ಪಡೆಯನ್ನು ಮಟ್ಟ ಹಾಕೋದಕ್ಕೆ ಇದೇ ಸ್ಫೋಟಕ ಬಳಸಿಕೊಂಡಿದೆ. ಇದಕ್ಕಾಗಿಯೇ 2 ತಿಂಗಳ ಕಾಲ ಮಾಡಿಕೊಂಡ ಪ್ಲಾನ್ ಅತಿರೋಚಕವಾಗಿದೆ.

3 ಬೀಪ್​​ ಸೌಂಡ್​.. ಒಂದೇ ಮೆಸೇಜ್.. ಸ್ಫೋಟಕ್ಕೆ ಪಕ್ಕಾ ಪ್ಲಾನ್ ಮಾಡಿತ್ತು!

ಪೇಜರ್​​ಗಳ ಮೂಲಕ ಮಾಡಿರೋ ಈ ದಾಳಿ ಬಗ್ಗೆ ಅತ್ಯಂತ ಅಪಾಯಕಾರಿ ಮುನ್ಸೂಚನೆ ಕೊಟ್ಟಿದೆ. ಮನುಕುಲವನ್ನೇ ತಲ್ಲಣಕ್ಕೆ ದೂಡಿದೆ. ಯಾವಾಗ ಹಿಜ್ಬುಲ್ಲಾ, ತೈವಾನ್ ಮೂಲದ ಗೋಲ್ಡ್ ಅಪೋಲೋ ಕಂಪನಿಗೆ 5,000 ಪೇಜರ್​ ಆರ್ಡರ್​ ಮಾಡಿದೆ ಅನ್ನೋದು ಗೊತ್ತಾಯ್ತೋ? ಅ ಕ್ಷಣವೇ ಮೊಸಾದ್ ಕಾರ್ಯಪ್ರವೃತ್ತಗೊಂಡಿತ್ತು. ಪೇಜರ್​ಗಳು ತಯಾರಾಗ್ತಿರೋ ಜಾಗಕ್ಕೇ ನುಗ್ಗಿ ಆಪರೇಷನ್​ ಮಾಡಿತ್ತು. ಸಣ್ಣದೊಂದು ಜಿಪಿಎಸ್​ ವ್ಯವಸ್ಥೆ ಇಲ್ಲದ ಪೇಜರ್​​ನೊಳಕ್ಕೆ 3 ಗ್ರಾಂ ಸ್ಫೋಟಕ ಇರಿಸಿತ್ತು. ಅಲ್ಲದೇ, ಇದರೊಳಗೆ ಕೋಡ್​ಗಳನ್ನು ಸ್ವೀಕರಿಸುವ ಬೋರ್ಡ್​ನಂತಹ ಸಣ್ಣ ಸಾಧನವನ್ನೂ ಅಳವಡಿಸಿತ್ತಂತೆ ಅನ್ನೋದು ಹಲವರ ವಾದ. ವಿಶೇಷ ಅಂದ್ರೆ ಎಂಥದ್ದೇ ಸ್ಕ್ಯಾನರ್​​ನಿಂದ ಪೇಜರ್​​ನ ಪರೀಕ್ಷೆ ಮಾಡಿದ್ರೂ ಒಳಗೆ ಸ್ಫೋಟಕ ಇರೋದು ಗೊತ್ತಾಗದಂತೆ ಈ ಪ್ಲಾನ್​ ಮಾಡಲಾಗಿತ್ತಂತೆ. ಮೊಸಾದ್ ಒಂದೇ ಒಂದು ಕೋಡ್ ಇರುವ ಮೆಸೇಜ್​ ಕಳಿಸಿದ್ರೆ ಪೇಜರ್​ನೊಳಗಿನ ಸಣ್ಣ ಮಿಲಿ ಗ್ರಾಮ್​​ನ ಬೋರ್ಡ್​​ ಸಂದೇಶ ಸ್ವೀಕರಿಸಿ ಆ್ಯಕ್ಟಿವೇಟ್​ ಆಗುವಂತಹ ವ್ಯವಸ್ಥೆ ಇತ್ತು. ಹಾಗಾಗಿ ಮೊಸಾದ್​ ಒಂದೇ ಸಲ ಸಾವಿರಾರು ಪೇಜರ್​ಗಳಿಗೆ ಮೆಸೇಜ್​ ಕಳಿಸಿದೆ. ಮೂರೇ ಮೂರು ಬೀಪ್​​ ಸೌಂಡ್​ ಬರುವುದರೊಳಗೆ ಸ್ಫೋಟಕ ಹಿಂದಿದ್ದ ಚಿಕ್ಕ ಬೋರ್ಡ್​​ ಆ್ಯಕ್ಟಿವೇಟ್​ ಆಗಿ ಪೇಜರ್​ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?

ರೇಡಿಯೋ ವೇವ್ಸ್​ನೇ ಹ್ಯಾಕ್ ಮಾಡಿದ್ದಾರಾ ಮೊಸಾದ್ ಪ್ರಳಯಾಂತಕರು!

ಪೇಜರ್​ಗಳು ರೇಡಿಯೋ ವೇವ್ಸ್​ ಮೇಲೇನೇ ವರ್ಕ್​ ಆಗೋದು. ಇಂತಹ ರೇಡಿಯೋ ವೇವ್ಸನ್ನೇ ಇದೀಗ ಮೊಸಾದ್​ ಗುಪ್ತಚರ ಸಂಸ್ಥೆಯ ಜಾಣ ತಂತ್ರಜ್ಞರು ಹ್ಯಾಕ್ ಮಾಡಿದ್ದಾರಾ?. ಇಂಥದ್ದೇ ಆರೋಪವನ್ನ ಹಿಜ್ಬುಲ್ಲಾ ಸಂಘಟನೆ ಮಾಡುತ್ತಿದೆ. ಹ್ಯಾಕ್ ಮಾಡಿದ ನಂತರ, ಅವುಗಳಲ್ಲಿ ಬಳಕೆಯಾಗುವ ಟೆಕ್ಸ್ಟ್ ಮಾದರಿಯ ಡೇಟಾಗಳನ್ನ ಸಂಗ್ರಹಿಸಿದ್ದಾರೆ. ಯಾರ ಸಂದೇಶಗಳಲ್ಲಿ ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಮೆಸೇಜ್​ಗಳಿವೆ ಅನ್ನೋದರ ಬಗ್ಗೆ ಮಾಹಿತಿ ತಿಳೀದುಕೊಳ್ತಿದ್ದಾರೆ ಅಂತಲೂ ಹೇಳಲಾಗ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಪೇಜರ್​ಗಳನ್ನೇ ಬಳಸುತ್ತಿದ್ದ ಬಹುಪಾಲು ಹಿಜ್ಬುಲ್ಲಾ ಉಗ್ರರೇ ಈ ದಾಳಿಗೆ ಬಲಿಯಾಗಿದ್ದಾರೆ. ಪೇಜರ್​ ಬಳಸುತ್ತಿದ್ದ ಉಗ್ರರ ನಂಬರ್​ಗಳನ್ನೇ ಪಟ್ಟಿ ಮಾಡಿ ಪ್ರತ್ಯೇಕ ಸಾಫ್ಟ್​ವೇರ್ ಕೋಡಿಂಗ್​ ಪ್ರೋಗ್ರಾಂ ಮೂಲಕ ಸ್ಫೋಟಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾಫ್ಟ್​ವೇರ್​ ಕೋಡಿಂಗ್​ಗಳನ್ನೇ ವೈರಸ್​ಗಳ ರೀತಿ ಬಳಸಿರುವ ಸಾಧ್ಯತೆಯೂ ಇದೆ. ತಂತ್ರಜ್ಞಾನ ಎಷ್ಟರ ಮಟ್ಟಿಗೆ ಮುಂದೆ ಸಾಗ್ತಿದೆ ಅನ್ನೋದಕ್ಕೆ ಮೊಸಾದ್​ನ ಈ ಡೆಡ್ಲಿ​ ಪ್ಲಾನ್ ಅಕ್ಷರಶಃ ಸಾಕ್ಷಿಯಾಗಿದೆ. ಇಂಥಾ ಹೊತ್ತಿನಲ್ಲೂ ಔಟ್​ಡೇಟೆಡ್​​ ಪೇಜರ್​ ಬಳಸಿ ಹಿಜ್ಬುಲ್ಲಾ ಸಂಘಟನೆ ಸದಸ್ಯರನ್ನು ಬಲಿಗೆ ದೂಡಿದೆ.

ಮೊಸಾದ್​​ ಮಾಡಿದ್ದು ಎನ್ನಲಾಗುತ್ತಿರೋ ಈ ಸಂಚು ಕ್ರೂರ ಸೈಬರ್​ ದಾಳಿಯಾಗಿದೆ. ತಂತ್ರಜ್ಞಾನದ ಮೂಲಕ ಪೇಜರ್​ ದಾಳಿ ಮಾಡಬಹುದು ಅಂತ ತೋರಿಸಿಕೊಟ್ಟಿದೆ. ಇಂಥದ್ದೊಂದು ಪೇಜರ್​ ದಾಳಿ ಭವಿಷ್ಯದಲ್ಲಿ ಮನುಕುಲವನ್ನು ಏನು ಮಾಡಬಹುದು ಅನ್ನೋ ಅಪಾಯಕಾರಿ ಸಂದೇಶವನ್ನೂ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ತಿಂಗಳ ಸ್ಕೆಚ್​.. ಪೇಜರ್‌ನಲ್ಲಿ 3 ಗ್ರಾಂ ಸ್ಫೋಟಕ; ಇಸ್ರೇಲ್‌ನ ಮೊಸಾದ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/09/Israel_war.jpg

Load More