ಹಣ ಕೊಟ್ಟರು ಮೈಸೂರು ಸಿಲ್ಕ್ ಸೀರೆ ಮಹಿಳೆಯರಿಗೆ ಸಿಗುತ್ತಿಲ್ಲ
ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಆಗುತ್ತಿಲ್ವಾ?
ಮದುವೆ, ಹಬ್ಬ ಸೇರಿದಂತೆ ವಿಶೇಷ ದಿನಗಳಿಗೂ ಸೀರೆ ಸಿಗುತ್ತಿಲ್ಲ
ಬೆಂಗಳೂರು: ಮೈಸೂರು ಸಿಲ್ಕ್ ಸೀರೆ ಎಂದರೆ ಮಹಿಳೆಯರು ಯಾರು ಇಷ್ಟ ಪಡಲ್ಲ ಹೇಳಿ. ಹಬ್ಬ-ಹರಿದಿನಗಳು ಸೇರಿದಂತೆ ಇತರೆ ವಿಶೇಷ ದಿನಗಳಲ್ಲಿ ಮಹಿಳೆಯರು ಈ ಸೀರೆಯನ್ನು ಧರಿಸಿದರೆ ಏನೋ ಒಂಥಾರ ಹೆಮ್ಮೆ ಪಡುತ್ತಾರೆ. ಆದರೆ ಈಗೀಗ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತ (ಕೆಎಸ್ಐಸಿ) ಮಳಿಗೆಗಳಲ್ಲಿ ಈ ಸೀರೆಗಳು ಸಿಗುತ್ತಿಲ್ಲದ ಕಾರಣ ಕೆಎಸ್ಐಸಿ ಅಂಗಡಿಗಳಿಗೆ ಮಹಿಳೆಯರು ನುಗ್ಗುತ್ತಿದ್ದಾರೆ.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತ ಅಂಗಡಿಗಳು ಮಹಿಳೆಯರಿಗೆ ಸರಿಯಾಗಿ ಸೀರೆಗಳನ್ನು ಪೂರೈಸಲು ಆಗದೇ ಹೈರಾಣಾಗಿವೆ. ಬೇಡಿಕೆಗೆ ತಕ್ಕಂತೆ ಭಿನ್ನ ವಿಭಿನ್ನವಾದ ಬಣ್ಣ ಬಣ್ಣದ ಸೀರೆಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಹಣ ಕೊಟ್ಟರು ಪರಂಪರೆಯ ಮೈಸೂರು ಸಿಲ್ಕ್ ಸೀರೆ ಸಿಗದೆ ಮಹಿಳೆಯರು ಪರದಾಡುತ್ತಿದ್ದಾರೆ. ಮಳಿಗೆಗಳಿಗೆ ನುಗ್ಗಿರುವ ಮಹಿಳೆಯರು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ: ಹೊಸ ಲುಕ್ನಲ್ಲಿ ಕಣ್ಮನ ಸೆಳೆದ BIGG BOSS ಸಂಗೀತಾ ಶೃಂಗೇರಿ; ಮೇಕಪ್ ಜಾಸ್ತಿ ಆಯ್ತು ಅನ್ನೋದಾ ಫ್ಯಾನ್ಸ್
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೀರೆ ಖರೀದಿಗೆ ಬರುತ್ತಿರುವ ಕಾರಣ ಬೇಡಿಕೆ ಈಡೇರಿಸಲಾಗದೆ ಕೆಎಸ್ಐಸಿ ನಿತ್ಯ ಹೆಣಗಾಡುತ್ತಿದೆ. ಮೈಸೂರು ಸೀರೆಗೆ ಕರ್ನಾಟಕ ಅಥವಾ ಭಾರತ ಮಾತ್ರವಲ್ಲ, ಜಾಗತಿಕವಾಗಿ ಮನ್ನಣೆ ಪಡೆದಿದೆ. ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಿಂದಲೂ ಆನ್ಲೈನ್ನಲ್ಲಿ ಭಾರೀ ಬೇಡಿಕೆ ಇದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ 17 ಕೆಎಸ್ಐಸಿ ಮಳಿಗೆಗಳಿವೆ. ಆದರೆ ಸೀರೆಗಳು ಸರಿಯಾಗಿ ಪೂರೈಕೆ ಆಗುತ್ತಿಲ್ಲ ಎನ್ನುವುದೇ ಮಹಿಳೆಯರ ಬೇಸರಕ್ಕೆ ಕಾರಣವಾಗಿದೆ.
ಸಮಸ್ಯೆಗೆ ಏನು ಕಾರಣ..?
ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಆಗುತ್ತಿಲ್ಲ. ಕೆಎಸ್ಐಸಿ ಕೇವಲ ವಾರಕ್ಕೊಮ್ಮೆ ಅಂದರೆ ಶನಿವಾರ ಮಾತ್ರ ಅಂಗಡಿ ತೆರೆಯುತ್ತಾರೆ. ಹೀಗಾಗಿ ಮಹಿಳೆಯರು ತಿಂಗಳುಗಟ್ಟಲೇ ಕಾದರು ಸೀರೆ ಸಿಗುತ್ತಿಲ್ಲ. ಮದುವೆ, ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಧರಿಸಬೇಕು ಎಂದರೆ ಮೈಸೂರು ಸೀರೆ ಇನ್ನಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ. ಹೀಗಾಗಿ ಕೆಎಸ್ಐಸಿ ಹೆಚ್ಚಿನ ಪಾಳಿಯಲ್ಲಿ ಕೆಲಸ ಮಾಡಲು ಪ್ಲಾನ್ ಮಾಡಿದೆ.
ಇದನ್ನೂ ಓದಿ: KL ರಾಹುಲ್ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?
ಇನ್ನು ಮೈಸೂರು ಸಿಲ್ಕ್ ಸೀರೆಗಾಗಿ ನಾರಿಯರ ಕ್ಯೂ ವಿಚಾರಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತ (ಕೆಎಸ್ಐಸಿ)ದ ಮಾರ್ಕೆಟಿಂಗ್ ಮ್ಯಾನೇಜರ್ ನವೀನ್ ಡಿ.ಕೆ ಮತನಾಡಿದ್ದಾರೆ. ಒಂದು ವಾರಕ್ಕಾಗುವಷ್ಟು ಶನಿವಾರ ಸ್ಟಾಕ್ ಬರುತ್ತದೆ. ಆದರೆ ಸ್ಟಾಕ್ ಬಂದ ಒಂದೆರಡು ಗಂಟೆಯಲ್ಲೇ ಸೀರೆಗಳೆಲ್ಲ ಖಾಲಿಯಾಗುತ್ತಿವೆ. ಇದರಿಂದಾಗಿ ಮಹಿಳೆಯರು ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಕೆಲವು ಮಹಿಳೆಯರು ಸೀರೆ ಸಿಗದೇ ವಾಪಸ್ ಹೋಗುತ್ತಿದ್ದಾರೆ. ಇನ್ನಷ್ಟು ಮಂದಿ ಅವರಿಗೆ ಇಷ್ಟವಾದ ಬಣ್ಣದ, ಇಷ್ಟವಾದ ರೀತಿಯ ಸೀರೆ ಸಿಗದೇ ವಾಪಸ್ ಹೋಗುತ್ತಿದ್ದಾರೆ. ಉತ್ಪಾದನೆ ಮೊದಲಿನಷ್ಟೇ ಮಾಡಲಾಗುತ್ತಿದೆ. ಇದರಲ್ಲಿ ಏನು ಕಡಿಮೆಯಾಗಿಲ್ಲ. ಆದರೆ ಬೇಡಿಕೆ ಜಾಸ್ತಿಯಾಗಿದ್ದರಿಂದ ಶನಿವಾರದಂದು ಅಂಗಡಿ ಮುಂದೆ ದೊಡ್ಡ ಮಟ್ಟದ ಕ್ಯೂ ಇರುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ