/newsfirstlive-kannada/media/post_attachments/wp-content/uploads/2024/07/CHINA_PLAYER_.jpg)
ಬ್ಯಾಡ್ಮಿಂಟನ್ ಪಂದ್ಯವಾಡುವಾಗ ಚೀನಾದ ಆಟಗಾರ ಕಾರ್ಡಿಕ್ ಅರೆಸ್ಟ್​ (ಹೃದಯ ಸ್ತಂಭನ) ನಿಂದ ಮೈದಾನದಲ್ಲೇ ಜೀವ ಬಿಟ್ಟಿದ್ದಾನೆ. ಇಂಡೋನೇಷ್ಯಾದಲ್ಲಿ ನಡೆದ ಇಂಟರ್​​ನ್ಯಾಷನಲ್​ ಟೂರ್ನ್​ಮೆಂಟ್​ನಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಚೀನಾದ ಬ್ಯಾಡ್ಮಿಂಟನ್ ಆಟಗಾರ ಜಾಂಗ್ ಝಿಜಿ (17) ಮೃತಪಟ್ಟ ಯುವಕ. ಇವರು ಜಪಾನ್​ನ ಕುಸುಮ ಕವಾನೊ ವಿರುದ್ಧ ಬ್ಯಾಡ್ಮಿಂಟನ್ ಪಂದ್ಯವಾಡುತ್ತಿದ್ದರು. ಇಬ್ಬರು 1-1 ಅಂಕಗಳಿಂದ ಸರಿಸಮನವಾಗಿ ಆಡುತ್ತಿದ್ದರು. ಆಗ ಕಾರ್ಡಿಕ್ ಅರೆಸ್ಟ್​ನಿಂದ ಚೀನಾದ ಪ್ಲೇಯರ್ ನೆಲಕ್ಕೆ ಬಿದ್ದಿದ್ದಾರೆ. ಮೈದಾನದಲ್ಲಿ ಬಿದ್ದು ಒದ್ದಾಡುತ್ತಿದ್ದರು ತಕ್ಷಣಕ್ಕೆ ಆತನ ಬಳಿಗೆ ಯಾರು ಬರಲಿಲ್ಲ ಎನ್ನುವುದು ದೃಶ್ಯದಲ್ಲಿ ಸೆರೆಯಾಗಿದೆ.
17-year-old Chinese badminton player Zhang Zhijie dies of cardiac arrest after collapsing on the court during a tournament in Indonesia. pic.twitter.com/nCROIJiFDH
— Sneha Mordani (@snehamordani) July 2, 2024
ನೆಲಕ್ಕೆ ಬಿದ್ದರೂ ಯಾರೊಬ್ಬರು ಮೇಲೆತ್ತಲು ಮೈದಾನದ ಒಳಗೆ ಬಂದಿಲ್ಲ. ಒಬ್ಬರು ಒಳಗೆ ಬರಲು ಯತ್ನಿಸಿದಾದ್ರು ಅಂಪೈರ್ ನಿರ್ಣಯದ ಮೇರೆಗೆ ವಾಪಸ್ ಹೋದರು. ಬಳಿಕ ವೈದ್ಯಕೀಯ ತಂಡ ಆಗಮಿಸಿ ಆಟಗಾರನನ್ನ ಹೊತ್ತುಕೊಂಡು ಹೋದರು. ಆದರೆ ಅಷ್ಟೊತ್ತಿಗೆ ಜೀವ ಹೋಗಿತ್ತು ಎಂದು ಹೇಳಲಾಗಿದೆ. ಸದ್ಯ ಪದಕ ಪ್ರದಾನ ಸಮಾರಂಭ ವೇಳೆ ಕಣ್ಣೀರು ಇಡುತ್ತಲೇ ಚೀನಾದ ಆಟಗಾರರು ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೇ ವೇದಿಕೆ ಮೇಲೆ ಗೌರವಾರ್ಥವಾಗಿ ಮೃತ ಜಾಂಗ್ ಝಿಜಿ ಜೆರ್ಸಿ ಪ್ರದರ್ಶನ ಮಾಡಿದರು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us