ಬ್ಯಾನ್​ ಆದ್ರೂ ಭಾರತಕ್ಕೆ ಕಳ್ಳದಾರಿಯಲ್ಲಿ ಬರುತ್ತಿದೆ ಚೀನಾ ಬೆಳ್ಳುಳ್ಳಿ.. ಇದನ್ನು ತಿಂದ್ರೆ ಕ್ಯಾನ್ಸರ್​ ಬರುತ್ತೆ ಹುಷಾರ್!

author-image
AS Harshith
Updated On
ಬ್ಯಾನ್​ ಆದ್ರೂ ಭಾರತಕ್ಕೆ ಕಳ್ಳದಾರಿಯಲ್ಲಿ ಬರುತ್ತಿದೆ ಚೀನಾ ಬೆಳ್ಳುಳ್ಳಿ.. ಇದನ್ನು ತಿಂದ್ರೆ ಕ್ಯಾನ್ಸರ್​ ಬರುತ್ತೆ ಹುಷಾರ್!
Advertisment
  • ಚೀನಾವು ವಿಶ್ವದ ಬೆಳ್ಳುಳ್ಳಿಯ ಅತಿದೊಡ್ಡ ಉತ್ಪಾದಕ
  • ಭಾರತದಲ್ಲಿ 2014ರಿಂದ ಚೀನಾ ಬೆಳ್ಳುಳ್ಳಿ ನಿಷೇಧ
  • ಕಡಿಮೆ ಬೆಲೆಗೆ ಸಿಗುವ ಚೀನಾ ಬೆಳ್ಳುಳ್ಳಿ ಆರೋಗ್ಯಕ್ಕೆ ಅಪಾಯ

ಕೆಲವು ದಿನಗಳ ಹಿಂದೆ ಸಿಮೆಂಟ್ ಬೆಳ್ಳುಳ್ಳಿ ಸುದ್ದಿ ನೋಡಿರಬಹುದು. ಈಗ ಚೀನಾ ಬೆಳ್ಳುಳ್ಳಿ ಪರಿಮಳ ಸೂಸುತ್ತಿದೆ. ಆದರೆ ಆರೋಗ್ಯಕ್ಕೆ ಮಾತ್ರ ಎಚ್ಚರಿಕೆ ಗಂಟೆ ಬಾರಿಸುತ್ತಿದೆ.

ಬೆಳ್ಳುಳ್ಳಿಯನ್ನು ಮಾಂತ್ರಿಕ ಮಸಾಲೆ ಎಂದು ಅಂತಲೇ ಕರೆಯುತ್ತಾರೆ. ಆಹಾರದ ಪರಿಮಳ ಹೆಚ್ಚಿಸುತ್ತದೆ. ಅಲ್ಲದೇ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅಂತಾರೆ ವೈದ್ಯರು.

ಚೀನಾವು ವಿಶ್ವದ ಬೆಳ್ಳುಳ್ಳಿಯ ಅತಿದೊಡ್ಡ ಉತ್ಪಾದಕ. ಜಾಗತಿಕ ಪೂರೈಕೆಯ 80% ಅನ್ನು ಉತ್ಪಾದಿಸುತ್ತದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್‌ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್‌ನಲ್ಲಿ ಉತ್ಪಾದಿಸಲಾಗುತ್ತದೆ. ನಿರ್ದಿಷ್ಟವಾಗಿ, ಜಿಂಕ್ಯಾಂಗ್ ಅನ್ನು "ವಿಶ್ವದ ಬೆಳ್ಳುಳ್ಳಿ ರಾಜಧಾನಿ" ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: VIDEO: ಬೆಂಗಳೂರಲ್ಲಿ ದೇವರಿಗೂ ಇಲ್ಲ ರಕ್ಷಣೆ.. ಗಣೇಶನ ಮೂರ್ತಿ ಕದ್ದು ಕಳ್ಳರು ಪರಾರಿ

ಭಾರತದಲ್ಲಿ ಚೀನಾ ಬೆಳ್ಳುಳ್ಳಿಯನ್ನು 2014ರಲ್ಲಿಯೇ ನಿಷೇಧಿಸಲಾಗಿದೆ. ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ. ಚೈನೀಸ್ ಬೆಳ್ಳುಳ್ಳಿ ತಿಳಿ ಬಿಳಿ ಮತ್ತು ಗುಲಾಬಿ ಮತ್ತು ಗಾತ್ರದಲ್ಲಿ ಚಿಕ್ಕದಾಗಿದೆ. ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿಯೂ ದೊಡ್ಡದಾಗಿದ್ದಲ್ಲದೇ ವಾಸನೆಯನ್ನು ಹೊಂದಿದೆ. ಆದರೆ ಚೈನೀಸ್ ಬೆಳ್ಳುಳ್ಳಿ ಕಡಿಮೆ ವಾಸನೆ ಹೊಂದಿದೆ.

ಇತ್ತೀಚೆಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗೊಂಡಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ (ಎಪಿಎಂಸಿ) ನಲ್ಲಿ ಚೀನಾದ ಬೆಳ್ಳುಳ್ಳಿಯ ಚೀಲಗಳು ಕಂಡುಬಂದ ನಂತರ ವ್ಯಾಪಾರಿಗಳು ಪ್ರತಿಭಟನೆಯನ್ನು ನಡೆಸಿದರು. ಅಕ್ರಮದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಿಷೇಧದ ಹೊರತಾಗಿಯೂ ಚೀನಾದ ಬೆಳ್ಳುಳ್ಳಿ ಭಾರತಕ್ಕೆ ಹೇಗೆ ಪ್ರವೇಶಿಸುತ್ತಿದೆ ಎಂದು ಗೊಂಡಲ್ ಎಪಿಎಂಸಿಯ ವರ್ತಕರ ಸಂಘ ಕಿಡಿಕಾರಿದೆ.

ಇದನ್ನೂ ಓದಿ: ಒಂದು ಬಾರಿ ಚಾರ್ಜ್​ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿ ವಾಹನ

ಚೀನಾ ಬೆಳ್ಳುಳ್ಳಿಗೆ ಹೋಲಿಸಿದ್ರೆ ಭಾರತದ ಬೆಳ್ಳುಳ್ಳಿ ಬಳಕೆಗೂ ಯೋಗ್ಯ, ಆರೋಗ್ಯಕ್ಕೂ ಸುರಕ್ಷಿತ. ಚೀನಾ ಬೆಳ್ಳುಳ್ಳಿ ಆಧುನಿಕ ಕೃಷಿ ತಂತ್ರಜ್ಞಾನ, ಅತಿ ಹೆಚ್ಚು ರಾಸಾಯನಿಕಗಳು, ಕೀಟನಾಶಕಗಳ ಬಳಕೆಯೊಂದಿಗೆ ಬೆಳೆಯುತ್ತಾರೆ. ಚೀನಿ ಬೆಳ್ಳುಳ್ಳಿ ದೀರ್ಘಾವಧಿ ಸೇವನೆಯಿಂದ ಕ್ಯಾನ್ಸರ್​ಗೆ ಕಾರಣವಾಗಬಹುದು ಅಂತಾರೆ ಆಹಾರ ತಜ್ಞರು.

ಕಳ್ಳಸಾಗಣೆ ಮೂಲಕ ಮಾರುಕಟ್ಟೆಗೆ ಬರುತ್ತಿರುವ ಚೀನಾ ಬೆಳ್ಳುಳ್ಳಿ ಕಡಿಮೆ ಬೆಲೆಗೂ ಲಭ್ಯ. ಹೀಗಾಗಿ ಇದು ಕಳ್ಳಸಾಗಣೆದಾರರು ಮತ್ತು ಅವರ ಸ್ಥಳೀಯ ಏಜೆಂಟ್‌ಗಳು ಕಳ್ಳಸಾಗಣೆ ಸರಕುಗಳ ಮೇಲೆ ಲಾಭ ಗಳಿಸಲು ಸಹಾಯವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment