newsfirstkannada.com

×

ಒಂದು ಬಾರಿ ಚಾರ್ಜ್​ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿಕ್​ ವಾಹನ

Share :

Published September 13, 2024 at 9:44am

Update September 22, 2024 at 2:37pm

    60 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ, 500km ಮೈಲೇಜ್​

    ಮೊದಲ ಬಾರಿಗೆ ಎಲೆಕ್ಟ್ರಿಕ್​ ವಾಹನ ಪರಿಚಯಿಸುತ್ತಿರುವ ಕಂಪನಿ

    ನೂತನ ಎಲೆಕ್ಟ್ರಿಕ್​ ವಾಹನದ ಬೆಲೆ? ವಿಶೇಷತೆ ಏನು? ಇಲ್ಲಿದೆ ಮಾಹಿತಿ

ಪ್ರಸ್ತುತ ಎಲೆಕ್ಟ್ರಿಕ್​ ವಾಹನಗಳ ಬಳಕೆ ಮತ್ತು ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ನಾನಾ ಕಂಪನಿಗಳು ಹೊಸ ಎಲೆಕ್ಟ್ರಿಕ್​ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಂತೆಯೇ ಇದೀಗ ಜನಪ್ರಿಯ ಮಾರುತಿ ಸುಜುಕಿ ಕಂಪನಿಯು ಮುಂದಿನ ವರ್ಷ ಹೊಸ ಎಲೆಕ್ಟ್ರಿಕ್​ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಕುರಿತಾಗಿ ಕಂಪನಿ ವರದಿ ಮಾಡಿದೆ.

ಮಾರುತಿ ಸುಜುಕಿ ಇಂಡಿಯಾದ ಮ್ಯಾನೇಜಿಂಗ್​​ ಡೈರೆಕ್ಟರ್​ ಮತ್ತು ಸಿಇಒ ಹಿಸಾಶಿ ಟಕೆಯುಚಿ ಈ ಕುರಿತಾಗಿ ಮಾತನಾಡಿದ್ದು, ‘ಕಂಪನಿಯು ಪರಿಚಯಿಸುತ್ತಿರುವ ಎಲೆಕ್ಟ್ರಿಕ್​ ವಾಹನವು 500 ಕಿಲೋ ಮೀಟರ್​​ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 60 ಕಿಲೋವ್ಯಾಟ್​​ ಗಂಟೆಗಳ ಬ್ಯಾಟರಿಯಿಂದ ಚಾಲಿತವಾಗುವ ಸಾಮರ್ಥ್ಯ ಇದಕ್ಕಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Flipkart​ ಬಿಗ್​ ಬಿಲಿಯನ್​​​ ಡೇಸ್​​ ಸೇಲ್.. ಬರೀ 19 ಸಾವಿರಕ್ಕೆ ಸಿಗುತ್ತಿದೆ iPad​​​​​ 9th ಜನರೇಶನ್?

ಮಾರುತಿ ಸುಜುಕಿಯು ಮುಂದಿನ ವರ್ಷ ಮಧ್ಯಮ ಗಾತ್ರದ ಎಸ್​​ಯುವಿ ಮತ್ತು ಇವಿಎಕ್ಸ್​​ ಎಲೆಕ್ಟ್ರಿಕ್ ವಾಹನ ಪರಿಚಯಿಸುವ ನಿರೀಕ್ಷೆ ಇದೆ. ಸದ್ಯ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಎಲೆಕ್ಟ್ರಿಕ್​ ವಾಹನಗಳ ಬೆಲೆ 15 ಲಕ್ಷ ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಗೌತಮ್ ಅದಾನಿಗೆ ಬಿಗ್ ಶಾಕ್​.. 26,000 ಕೋಟಿ ಹಣ ಫ್ರೀಜ್! ಏನಿದು ಅಸಲಿ ಕತೆ?

ಕಳೆದ ತಿಂಗಳು ಮಾರುತಿ ಸುಜುಕಿ ಇಂಡಿಯಾ ಕಂಪನಿ 2047ರಲ್ಲಿ ಭಾರತವು ‘‘ವೀಕ್ಷತ್​ ಭಾರತ್​​’’ ಆಗಲು ಆಕಾಂಕ್ಷೆಯನ್ನು ಹೊಂದಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಸುಸ್ಥಿರ ಚಲನಶೀಲ ಭವಿಷ್ಯದ ಕಡೆಗೆ ಎಲೆಕ್ಟ್ರಿಕ್​ ಕಾರು ಪರಿಚಯಿಸುವುದಾಗಿ ಹೇಳಿತ್ತು. ಅದರಂತೆಯೇ ಇದೀಗ ಮುಂದಿನ ವರ್ಷ ಪರಿಚಯಿಸಲು ಸಿದ್ಧತೆ ಮಾಡುತ್ತಿದೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಬಾರಿ ಚಾರ್ಜ್​ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿಕ್​ ವಾಹನ

https://newsfirstlive.com/wp-content/uploads/2024/09/Maruti-Suzuki.jpg

Load More