newsfirstkannada.com

×

ಗೌತಮ್ ಅದಾನಿಗೆ ಬಿಗ್ ಶಾಕ್​.. 26,000 ಕೋಟಿ ಹಣ ಫ್ರೀಜ್! ಏನಿದು ಅಸಲಿ ಕತೆ?

Share :

Published September 13, 2024 at 8:23am

Update September 13, 2024 at 8:35am

    ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಎಷ್ಟು ಸಾವಿರ ಕೋಟಿ ಹಣವಿದೆ?

    ಫೋರ್ಜರಿ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೀತ್ತಿದೆ

    ಭಾರತದ ಪ್ರತಿಷ್ಠಿತ ಉದ್ಯಮಿಯ ಬ್ಯಾಂಕ್ ಅಕೌಂಟ್ ಸೀಜ್

ನವದೆಹಲಿ: ಭಾರತದ ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ ಅವರಿಗೆ ಸೇರಿದ ಅದಾನಿ ಗ್ರೂಪ್​ಗೆ ಸಂಬಂಧಿಸಿದ 6 ಸ್ವಿಸ್ ಬ್ಯಾಂಕ್​ ಅಕೌಂಟ್​ಗಳನ್ನು ಸೀಜ್ ಮಾಡಲಾಗಿದೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಈ ಆರೋಪಕ್ಕೆ ಸೆಡ್ಡು ಹೊಡೆದಿರುವ ಅದಾನಿ ಗ್ರೂಪ್, ಇದೆಲ್ಲ ಸುಳ್ಳು ಎಂದಿದೆ.

ಇದನ್ನೂ ಓದಿ: 3 ಲಕ್ಸುರಿ ಕಾರು.. 2 ಕೋಟಿ ಪ್ಲಾಟ್; ವಿನೇಶ್ ಫೋಗಟ್‌ ಬಳಿ ಇರೋ ಚಿನ್ನ ಎಷ್ಟು? ಸಾಲ ಎಷ್ಟಿದೆ ಗೊತ್ತಾ? 

ಅದಾನಿ ಗ್ರೂಪ್​ಗೆ ಸಂಬಂಧಿಸಿದ ಸ್ವಿಸ್ ಬ್ಯಾಂಕ್​ನಲ್ಲಿನ 6 ಅಕೌಂಟ್​ಗಳಲ್ಲಿ 310 ಮಿಲಿಯನ್ ಡಾಲರ್ ಅಂದರೆ 26,017,353,260 ರೂಪಾಯಿ ಹಣವನ್ನು ಸದ್ಯಕ್ಕೆ ಸೀಜ್ ಮಾಡಲಾಗಿದೆ. 2021ರ ಮನಿ ಲಾಂಡರಿಂಗ್ ಹಾಗೂ ಸೆಕ್ಯುರಿಟೀಸ್ ಫೋರ್ಜರಿ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಅಕೌಂಟ್​ಗಳನ್ನು ಸ್ವಿಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಇದರಿಂದ ಅದಾನಿ ಗ್ರೂಪ್​ಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಹುಲ್​ ದ್ರಾವಿಡ್​ ಬೆನ್ನಿಗೆ ಬಿದ್ದ ಟಾಪ್​ IPL ಫ್ರಾಂಚೈಸಿಗಳು.. ಬ್ಲ್ಯಾಂಕ್ ಚೆಕ್ ಆಫರ್ ತಿರಸ್ಕರಿಸಿದ ಕನ್ನಡಿಗ

ಅದಾನಿ ಅವರ ಕೇಸ್​ ಅನ್ನು ಜಿನೀವಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇದರ ಆಧಾರದ ಮೇಲೆ ಹಾಗೂ ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳನ್ನ ಉಲ್ಲೇಖಿಸಿ ಹಿಂಡೆನ್‌ಬರ್ಗ್ ಸಂಸ್ಥೆ ಆರೋಪಿಸಿದೆ. ಇನ್ನು ಆರು ಸ್ವಿಸ್ ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸುತ್ತಿದ್ದಂತೆ ಸ್ವಿಟ್ಜರ್ಲೆಂಡ್‌ನ ಅಟಾರ್ನಿ ಜನರಲ್ ಕಚೇರಿ ಕೂಡ ತನಿಖೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಅದಾನಿ ಗ್ರೂಪ್. ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ. ನಾವು ಸ್ವಿಸ್ ಬ್ಯಾಂಕ್​ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ. ಇದೊಂದು ಷಡ್ಯಂತ್ರ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌತಮ್ ಅದಾನಿಗೆ ಬಿಗ್ ಶಾಕ್​.. 26,000 ಕೋಟಿ ಹಣ ಫ್ರೀಜ್! ಏನಿದು ಅಸಲಿ ಕತೆ?

https://newsfirstlive.com/wp-content/uploads/2024/09/Adani-1.jpg

Load More