ಕೋಚ್ ಆಗಿರುವುದರ ಹಿಂದೆ ಇಂಟ್ರೆಸ್ಟಿಂಗ್ ಕಹಾನಿ
9 ವರ್ಷದ ಬಳಿಕ ಮತ್ತೆ ಕೋಚ್ ಆಗಿ IPLಗೆ ಎಂಟ್ರಿ
ನಿಮ್ಗೆ ಎಷ್ಟು ಬೇಕೋ ಅಷ್ಟು ಚೆಕ್ನಲ್ಲಿ ಬರೆದುಕೊಳ್ಳಿ
ಕೊನೆಗೂ ‘ನಿರುದ್ಯೋಗಿ’ ರಾಹುಲ್ ದ್ರಾವಿಡ್ ಉದ್ಯೋಗಿ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಹೆಡ್ಕೋಚ್ ಹುದ್ದೆ ಅರಸಿ ಬಂದಿದೆ. ಆದ್ರೆ ದಿ ವಾಲ್ ರಾಜಸ್ಥಾನ ಕೋಚ್ ಆಗೋದು ಅಷ್ಟೊಂದು ಸುಲಭವಿರಲಿಲ್ಲ. ಅದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ.
ಟೀಮ್ ಇಂಡಿಯಾಗೆ ಹಿಸ್ಟಾರಿಕಲ್ ಟಿ20 ವಿಶ್ವಕಪ್ ಗೆಲ್ಲಿಸಿ, ಹೆಡ್ಕೋಚ್ ಹುದ್ದೆಗೆ ಗುಡ್ಬೈ ಹೇಳಿದ ರಾಹುಲ್ ದ್ರಾವಿಡ್ ಮುಂದೇನ್ ಮಾಡ್ತಾರೆ ಅನ್ನೋ ಪ್ರಶ್ನೆಗೆ ಕೊನೆಗೂ ಆನ್ಸರ್ ಸಿಕ್ಕಿದೆ. 140 ಕೋಟಿ ಭಾರತೀಯರ ಮನಗೆದ್ದ ಮಹಾರಾಜ ಮತ್ತೆ ಐಪಿಎಲ್ಗೆ ರಿಟರ್ನ್ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಹೆಡ್ಕೋಚ್ ಆಗಿ ದಿ ವಾಲ್ ನೇಮಕಗೊಂಡಿದ್ದಾರೆ. ಆ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಮತ್ತೆ ರಾಹುಲ್ ದ್ರಾವಿಡ್ ದರ್ಬಾರ್ ಶುರುವಾಗಿದೆ.
ಇದನ್ನೂ ಓದಿ: 7 ವರ್ಷ ಪ್ರೀತಿಸಿ ಮದುವೆ, ವಿರಾಟ್ ಕೊಹ್ಲಿ -ಅನುಷ್ಕಾ ಪವರ್ಫುಲ್ ಕಪಲ್.. ಇವರ ಬ್ಯುಸಿನೆಸ್ ಗುಟ್ಟು ಏನು?
ದ್ರಾವಿಡ್ಗೆ ಹೈ ಪ್ರೊಫೈಲ್ ತಂಡಗಳಿಂದ ಬ್ಲ್ಯಾಂಕ್ ಚೆಕ್ ಆಫರ್..!
ದಿ ವಾಲ್ ಖ್ಯಾತಿಯ ದ್ರಾವಿಡ್ 9 ವರ್ಷಗಳ ಬಳಿಕ ಮತ್ತೆ ಕೋಚ್ ಆಗಿ ಐಪಿಎಲ್ಗೆ ಎಂಟ್ರಿಕೊಟ್ಟಿದ್ದಾರೆ. ಅದು ತಮ್ಮ ನೆಚ್ಚಿನ ರಾಜಸ್ಥಾನ ರಾಯಲ್ಸ್ ತಂಡಕ್ಕೆ. ಇದು ಸದ್ಯಕ್ಕೆ ಎಲ್ಲರಿಗೂ ಗೊತ್ತಿರೋ ಸಂಗತಿ. ಆದ್ರೆ ಇದೀಗ ನಿಮಗೆ ಗೊತ್ತಿರದ ಬಿಗ್ಅಪ್ಡೇಟ್ ನ್ಯೂಸ್ವೊಂದು ಹೊರಬಿದ್ದಿದೆ. ಅದೇನಂದ್ರೆ ರಾಯಲ್ಸ್ ತಂಡದ ಹೆಡ್ಕೋಚ್ ಆಗಿ 2025ನೇ ಐಪಿಎಲ್ ಸೀಸನ್ನಲ್ಲಿ ಕಮಾಲ್ ಮಾಡಲು ಸಜ್ಜಾಗಿರೋ ರಾಹುಲ್ ದ್ರಾವಿಡ್ ಸೆಳೆಯಲು ಹೈ ಪ್ರೊಫೈಲ್ ಫ್ರಾಂಚೈಸಿಗಳು ಬ್ಲ್ಯಾಂಕ್ ಚೆಕ್ ಆಫರ್ ನೀಡಿದ್ವಂತೆ. ಆದ್ರೆ ಅದನ್ನ ತಿರಸ್ಕರಿಸಿ ಮತ್ತೆ ರಾಜಸ್ಥಾನದ ಗೂಡಿಗೆ ಮರಳಿದ್ದಾರೆ.
ಬ್ಲ್ಯಾಂಕ್ ಚೆಕ್ ಆಫರ್ ಬಿಟ್ಟು,’ರಾಯಲ್’ ಸಂಬಂಧಕ್ಕೆ ಜೈ..!
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್ಗೆ ಫುಲ್ ಡಿಮ್ಯಾಂಡ್ ಬಂತು. ಕೆಲ ಬಲಿಷ್ಠ ಐಪಿಎಲ್ ಫ್ರಾಂಚೈಸಿಗಳು ಚಾಂಪಿಯನ್ ಕೋಚ್ನನ್ನ ಸೆಳೆಯಲು ಬ್ಲ್ಯಾಂಕ್ ಚೆಕ್ ಆಫರ್ ನೀಡಿದ್ವು. ನಿಮಗೆ ಎಷ್ಟು ಬೇಕೋ ಅಷ್ಟು ಬರೆದುಕೊಳ್ಳಿ. ನಮ್ಮ ತಂಡಕ್ಕೆ ಬನ್ನಿ ಅನ್ನೋ ಬಿಗ್ ಆಫರ್ ಮುಂದಿಟ್ಟಿದ್ವು. ಆದ್ರೆ ಬ್ಲ್ಯಾಂಕ್ ಆಫರ್ ಸಾರಸಗಟವಾಗಿ ತಿರಸ್ಕರಿಸಿದ ದ್ರಾವಿಡ್ ರಾಜಸ್ಥಾನ ಜತೆಗಿನ ರಾಯಲ್ ಸಂಬಂಧಕ್ಕೆ ಜೈ ಅಂದಿದ್ದಾರೆ.
ದ್ರಾವಿಡ್ ರಾಜಸ್ಥಾನ ತಂಡದ ಹೆಡ್ಕೋಚ್ ಆಫರ್ ಒಪ್ಪಿದ್ದೇಕೆ..?
ಒಂದು ವೇಳೆ ದ್ರಾವಿಡ್ ಹೈ ಫ್ರೊಫೈಲ್ ಫ್ರಾಂಚೈಸಿಗಳ ಬ್ಲ್ಯಾಂಕ್ ಚೆಕ್ ಆಫರ್ ಒಪ್ಪಿದ್ರೆ ಅವರು ಬಯಸಿದಷ್ಟು ಹಣ ಸಿಗ್ತಿತ್ತು. ಬಹುಶಃ ಐಪಿಎಲ್ ಕೋಚ್ಗಳ ಪೈಕಿ ಹೆಚ್ಚಿನ ವೇತನ ಪಡೆಯಬಹುದಿತ್ತು. ಆದ್ರೆ ದ್ರಾವಿಡ್ ಹಾಗೆ ಮಾಡಲಿಲ್ಲ. ಹಣಕ್ಕಿಂತ, ಬಾಂಧವ್ಯಕ್ಕೆ ಹೆಚ್ಚು ಒತ್ತು ನೀಡಿ ರಾಜಸ್ಥಾನ ರಾಯಲ್ಸ್ ತಂಡದ ಕೋಚಿಂಗ್ ಹುದ್ದೆಯನ್ನ ಒಪ್ಪಿಕೊಂಡಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ.
ಇದನ್ನೂ ಓದಿ: ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್ ಸ್ಟೇಟ್ಮೆಂಟ್!
ದ್ರಾವಿಡ್ ರಾಜಸ್ಥಾನ ಹೆಡ್ ಕೋಚ್ ಆಗಿದ್ದೇಕೆ..?
ಟೀಮ್ ಇಂಡಿಯಾಗೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿದ ದಿ ವಾಲ್ ಕೋಚ್ ಆದ ಬೆನ್ನಲ್ಲೆ ಅಪಾರ ನಿರೀಕ್ಷೆಗಳು ಗರಿಗೆದರಿವೆ. ಗುರು ದ್ರಾವಿಡ್, ಶಿಷ್ಯ ಸ್ಯಾಮ್ಸನ್ ಕೆಮಿಸ್ಟ್ರಿಯಲ್ಲಿ ಹೊಸ ಯುಗಾರಂಭಗೊಳ್ಳಲಿದೆ ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಚಾಂಪಿಯನ್ ಕ್ಯಾಪ್ಟನ್ ದ್ರಾವಿಡ್ ಬ್ಲೂ ಜರ್ಸಿಯಲ್ಲಿ ಸಕ್ಸಸ್ ಕಂಡಂತೆ ಐಪಿಎಲ್ ಕೋಚ್ ಸಕ್ಸಸ್ ಕಾಣಲಿ ಅನ್ನೋದು ಎಲ್ಲ ಕನ್ನಡಿಗರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ