Advertisment

ಮಕ್ಕಳು ಬೆಳ್ಳಗೆ ಹುಟ್ಟಲು ಬಿಳಿ ನಾಯಿಯ ತಲೆ ಬರುಡೆ ತಿನ್ನುತ್ತಾರೆ ಇವರು! ಏನ್​ ವಿಚಿತ್ರ ಗುರೂ

author-image
AS Harshith
Updated On
ಮಕ್ಕಳು ಬೆಳ್ಳಗೆ ಹುಟ್ಟಲು ಬಿಳಿ ನಾಯಿಯ ತಲೆ ಬರುಡೆ ತಿನ್ನುತ್ತಾರೆ ಇವರು! ಏನ್​ ವಿಚಿತ್ರ ಗುರೂ
Advertisment
  • ವಿಚಿತ್ರ ನಂಬಿಕೆ.. ಬಿಳಿ ನಾಯಿಯ ತಲೆ ಮಾಂಸ ಸೇವನೆ
  • ಬೌಬೌ ಮಾಂಸ ಸೇವಿಸಿದ್ರೆ ಮಕ್ಕಳು ಚೆನ್ನಾಗಿರುತ್ತಾರಂತೆ!
  • ಮಕ್ಕಳು ಬೆಳ್ಳಗೆ ಹುಟ್ಟಲು ಹೀಗೂ ಮಾಡ್ತಾರಾ ಇವರು

ಮಕ್ಕಳು ಆರೋಗ್ಯವಾಗಿ ಹುಟ್ಟುಬೇಕು ಎಂಬುದು ಪೋಷಕರ ಬಯಕೆ. ಅದಕ್ಕಾಗಿ ತಾಯಂದಿರು ಪೌಷ್ಟಿಕ ಆಹಾರವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಕೆಲವರು ಮಕ್ಕಳು ದಷ್ಟಪುಷ್ಟವಾಗಿ ಬೆಳೆಯಲು ಮಾಂಸಾಹಾರ ಸೇವನೆ ಮಾಡುತ್ತಾರೆ. ಮೀನು, ಕುರಿ, ಹಾಲು, ಮೊಟ್ಟೆ ಸೇವಿಸುತ್ತಾ ಮಕ್ಕಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಾರೆ. ಆದರೀಗ ಕಾಲ ಬದಲಾಗಿದೆ ಮಕ್ಕಳು ಬೆಳ್ಳಗ್ಗೆ ಹುಟ್ಟಬೇಕು ಎಂದು ಬಯಸುವ ಪೋಷಕರೇ ಹೆಚ್ಚು. ಅದಕ್ಕಾಗಿ ಸಿಕ್ಕ ಸಿಕ್ಕ ಔಷಧವನ್ನು ಸೇವಿಸುವವರೂ ಇದ್ದಾರೆ. ಆದರೆ ಇಲ್ಲೊಂದು ಸಂಗತಿ ಕೇಳಿದ್ರೆ ಅಚ್ಚರಿಯಾಗಬಹುದು. ಮಕ್ಕಳು ಬೆಳ್ಳಗ್ಗೆ ಹುಟ್ಟಲು ನಾಯಿಯ ತಲೆ ಮಾಂಸ ತಿನ್ನುತ್ತಾರಂತೆ ಇಲ್ಲಿನ ತಾಯಂದಿರು.

Advertisment

ಮಕ್ಕಳು ಉತ್ತಮ ತ್ವಚೆಯನ್ನು ಹೊಂದಿರಲು ತಾಯಂದಿರು ಬಾದಾಮಿ, ಕಿತ್ತಳೆ ಸೇವಿಸುತ್ತಾರೆ. ಮಿಟಮಿನ್​ ಇ ಮತ್ತು ಸಿ ಸಮೃದ್ಧವಾಗಿರುವ ಆಹಾರವನ್ನು ತಿನ್ನುತ್ತಾರೆ. ಆದರೆ ನೆರೆದ ದೇಶ ಚೀನಾದಲ್ಲೊಂದು ನಂಬಿಕೆಯಿದೆ. ಮಕ್ಕಳು ಬೆಳ್ಳಗಾಗಿ ಹುಟ್ಟಲು ತಾಯಂದಿರು ನಾಯಿಯ ತಲೆಬುರುಡೆಯನ್ನು ಸೇವಿಸುತ್ತಾರಂತೆ.

ಇದನ್ನೂ ಓದಿ: ಜ್ಯೂಸ್​ ಬಾಟಲಿ ಮುಚ್ಚಳ ನುಂಗಿದ ಒಂದೂವರೆ ವರ್ಷದ ಮಗು.. ಉಸಿರಾಟ ಸಮಸ್ಯೆಯಿಂದ ಸಾವು

ಸಾಮಾನ್ಯವಾಗಿ ಭ್ರೂಣ 2ನೇ ತಿಂಗಳಿನಿಂದ ಬೆಳೆಯಲು ಪ್ರಾರಂಭವಾಗುತ್ತದೆ. ಮಹಿಳೆಯರು ಈ ಸಮಯದಲ್ಲಿ ಗೋಧಿ, ಅಕ್ಕಿ, ಪೌಷ್ಟಿಕ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ರಕ್ತ ರಚನೆಗೆ ಸಹಾಯವಾಗುವ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಇದರಿಂದ ಮಕ್ಕಳ ಆರೋಗ್ಯವೂ ಚೆನ್ನಾಗಿ ವೃದ್ಧಿಸುತ್ತದೆ. ಮಕ್ಕಳು ಆರೋಗ್ಯಪೂರ್ಣ ತ್ವಚೆಯೊಂದಿಗೆ ಜನಿಸಲು ಸಹಾಯ ಮಾಡುತ್ತೆ.

Advertisment

publive-image

ನೆರೆಯ ಡ್ರ್ಯಾಗನ್​ ದೇಶದಲ್ಲೊಂದು ಅನಾದಿ ಕಾಲದಿಂದ ಬಂದ ನಂಬಿಕೆಯಿದೆ. ಮಹಿಳೆಯರು ಸಂಜೆ ಊಟ ಮಾಡುವಾಗ ಒಂದು ಸಣ್ಣ ಬಟ್ಟಲಿನಲ್ಲಿ ಅನ್ನದ ಜೊತೆಗೆ ನಾಯಿಯ ತಲೆಬುರುಡೆಯನ್ನು ಸೇವಿಸಬೇಕಂತೆ. ಹುಟ್ಟುವ ಮಕ್ಕಳ ತ್ವಜೆ ಬೆಳ್ಳಗೆ ಇದ್ದು, ತಲೆ ಬರುಡೆಯು ಚಿಕ್ಕದಾಗಿ ಸುಂದರವಾಗಿರುತ್ತದೆ ಎಂಬ ನಂಬಿಕೆ ಅವರದ್ದು.

ಇದನ್ನೂ ಓದಿ: ಎಚ್ಚರ! ನಿಮ್ಮ ಕರೆಯನ್ನು ಕದ್ದಾಲಿಸುತ್ತಿದ್ದಾರೆ.. ಕೊನೆಗೂ ತಪ್ಪೊಪ್ಪಿಕೊಂಡಿದೆ ಈ ಮಾರ್ಕೆಟಿಂಗ್​ ಸಂಸ್ಥೆ!

ನಾಯಿಯ ತಲೆಬುರುಡೆಯನ್ನು ಚೆನ್ನಾಗಿ ಅಡುಗೆ ಮಾಡಿ ಗರ್ಭಿಣಿಯರು ಸೇವಿಸುವುದರಿಂದ ಬೆಳವಣಿಗೆಯ ಜೊತೆಗೆ ಮಗುವಿನ ಆರೋಗ್ಯವು ಚೆನ್ನಾಗಿರುತ್ತದೆ. ಮಾತ್ರವಲ್ಲದೆ, ಇದು ಮಗುವಿನ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತಂತೆ.

Advertisment

ಕ್ಯಾಂಡರ್​​ ಲೀ ಎಂಬ ಸಂಶೋಧಕರ ಪ್ರಕಾರ, ಅಲ್ಲಿನ ಗರ್ಭಿಣಿಯರು ಬಿಳಿ ಬಣ್ಣದ ನಾಯಿಯ ತಲೆ ಮಾಂಸವನ್ನು ತಿನ್ನುತ್ತಾರೆ. ಈ ಕುರಿತಾಗಿ ಚೀನಾದ ಪುರಾತನ ಸಾಹಿತ್ಯಗಳಲ್ಲಿ ಒಂದಾದ ತೈಚಾಂಶುವಿನಲ್ಲಿ ಉಲ್ಲೇಖವಿದೆಯಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment