Advertisment

ಮೆಗಾಸ್ಟಾರ್​​​ ಚಿರಂಜೀವಿಗೆ ಗಿನ್ನೆಸ್​​​ ವಿಶ್ವ ದಾಖಲೆ ಗರಿ.. 24 ಸಾವಿರ ನೃತ್ಯ ಪ್ರದರ್ಶನ ನೀಡಿದ ನಟ!

author-image
AS Harshith
Updated On
ಮೆಗಾಸ್ಟಾರ್​​​ ಚಿರಂಜೀವಿಗೆ ಗಿನ್ನೆಸ್​​​ ವಿಶ್ವ ದಾಖಲೆ ಗರಿ.. 24 ಸಾವಿರ ನೃತ್ಯ ಪ್ರದರ್ಶನ ನೀಡಿದ ನಟ!
Advertisment
  • ಗಿನ್ನೆಸ್​​​ ವಿಶ್ವ ದಾಖಲೆ ಬರೆದ ನಟ ಚಿರಂಜೀವಿ
  • 69 ವರ್ಷ ವಯಸ್ಸಿನ ಮೆಗಾಸ್ಟಾರ್​ಗೆ ವಿಶೇಷ ಗೌರವ
  • ಅಮೀರ್​​ ಖಾನ್​​ ಅವರಿಂದ ಪ್ರಶಸ್ತಿ ಪಡೆದ ಚಿರಂಜೀವಿ

ಮೆಗಾಸ್ಟಾರ್​​​ ಚಿರಂಜೀವಿಯವರು ಗಿನ್ನೆಸ್​​​ ವಿಶ್ವ ದಾಖಲೆ ಪುಟ ಸೇರಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಸಮೃದ್ಧ ಚಲನಚಿತ್ರ ನಟ, ನರ್ತಕನೆಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇದೇ ವಿಚಾರವಾಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisment

69 ವರ್ಷ ವಯಸ್ಸಿನ ಚಿರಂಜೀವಿಯವರು ತನ್ನ 45 ವರ್ಷಗಳ ಅವಧಿಯಲ್ಲಿ 156 ಸಿನಿಮಾಗಳಲ್ಲಿ 537 ಹಾಡುಗಳಲ್ಲಿ 24000 ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ವಿಚಾರವಾಗಿ ವಿಶೇಷ ಗೌರವವನ್ನು ಪಡೆದಿದ್ದಾರೆ.

ಇದನ್ನೂ ಓದಿ: ಅಭಿಷೇಕ್​​ ಬಚ್ಚನ್​ಗಿಂತಲೂ ಐಶ್ವರ್ಯ ರೈ ಶ್ರೀಮಂತೆ; ಇವರ ಬಳಿ ಇರೋ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

ಅಮೀರ್​​ ಖಾನ್​​ ಅವರಿಂದ ಚಿರಂಜೀವಿಯವರು ವಿಶ್ವ ಗಿನ್ನೆಸ್​ ದಾಖಲೆಯ ಪ್ರಶಸ್ತಿ ಪಡೆದರು. ಬಳಿಕ ಮಾತನಾಡಿದ ಅಮೀರ್​ ಖಾನ್​​ ‘ನಾನು ಇಲ್ಲಿಗೆ ಬಂದಿರೋದು ಸಂತೋಷ. ಚಿರಂಜೀವಿಯವರ ಅಭಿಮಾನಿಗಳನ್ನು ನೋಡಲು ಸಂತೋಷವಾಗುತ್ತಿದೆ. ನಿಮ್ಮೊಂದಿಗೆ ನನ್ನನ್ನು ಸೇರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಅವರ ದೊಡ್ಡ ಅಭಿಮಾನಿ ನಾನು’ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ನಟ ದರ್ಶನ್​ಗೆ ಸಿಗುತ್ತಾ ಬೇಲ್​​? ಇಂದು ಕೋರ್ಟ್​ನಲ್ಲಿ ದಾಸನ ಭವಿಷ್ಯ ನಿರ್ಧಾರ!

ಚಿರಂಜೀವಿಯವರು 1978ರಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟರು. ಖೈದಿ ನಂ 150, ಸೈರಾ ನರಸಿಂಹ ರೆಡ್ಡಿ, ಆಚಾರ್ಯ, ಗಾಡ್​ಫಾದರ್​​ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರೀಗಾಗಿ ಸಾಕಷ್ಟು ದುಡಿದ ನಟರಾಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment