newsfirstkannada.com

ಹಿರಿಯ ನಟಿ ವೈಜಯಂತಿಮಾಲಾ, ಚಿರಂಜೀವಿ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

Share :

Published May 10, 2024 at 6:13am

Update May 10, 2024 at 6:14am

  ಐದು ಪದ್ಮ ವಿಭೂಷಣ, 17 ಪದ್ಮ ಭೂಷಣ ಹಾಗೂ 110 ಪದ್ಮಶ್ರೀ ಪ್ರಶಸ್ತಿ ಪ್ರದಾನ

  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ

  ಉಪರಾಷ್ಟ್ರಪತಿ, ಪ್ರಧಾನಿ ಮಂತ್ರಿ, ಕೇಂದ್ರ ಗೃಹ ಸಚಿವ ಸೇರಿ ಹಲವಾರು ಗಣ್ಯರು ಭಾಗಿ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ 2024ರ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ತೆಲಗು ಮೆಗಾಸ್ಟಾರ್ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ ಬೀವಿ, ಬಾಂಬೇ ಸಮಾಚಾರ್ ಪತ್ರಿಕೆಯ ಮಾಲೀಕ ಹರ್ಮುಸ್‌ಜಿ ಎನ್. ಕಾಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ`ಬಾಂಬೆ ಸಮಾಚಾರ್ ಪತ್ರಿಕೆ ಮಾಲೀಕ ಹಾರ್ಮುಸ್ಜಿ ಎನ್ ಕಾಮಾ, ಬಿಜೆಪಿ ನಾಯಕ ಓ.ರಾಜಗೋಪಾಲ್, ಲಡಾಖ್‍ನ ಆಧ್ಯಾತ್ಮಿಕ ನಾಯಕ ತೊಗ್ಡಾನ್ ರಿಂಪೋಚೆ, ತಮಿಳು ನಟ ದಿವಂಗತ ಕ್ಯಾಪ್ಟನ್ ವಿಜಯಕಾಂತ್, ಗುಜರಾತಿ ಪತ್ರಿಕೆ`ಜನ್ಮಭೂಮಿ’ ಸಿಇಒ ಕುಂದನ್ ವ್ಯಾಸ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

ವೈಜಯಂತಿ ಮಾಲಾ ಮತ್ತು ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದರೆ, ಫಾತಿಮಾ ಬೀವಿ, ಹಾರ್ಮುಸ್ಜಿ ಎನ್ ಕಾಮಾ, ರಾಜಗೋಪಾಲ್, ವಿಜಯಕಾಂತ್, ರಿಂಪೋಚೆ ಮತ್ತು ವ್ಯಾಸ್ ಅವರಿಗೆ ಪದ್ಮಭೂಷಣ ನೀಡಲಾಯಿತು. ಬೀವಿ, ವಿಜಯಕಾಂತ್ ಮತ್ತು ರಿಂಪೋಚೆ ಅವರ ಕುಟುಂಬದ ಸದಸ್ಯರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಈ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 2024ರಲ್ಲಿ ಒಟ್ಟು 132 ಪದ್ಮ ಪ್ರಶಸ್ತಿಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಐದು ಪದ್ಮ ವಿಭೂಷಣ, 17 ಪದ್ಮ ಭೂಷಣ ಹಾಗೂ 110 ಪದ್ಮಶ್ರೀ ಪ್ರಶಸ್ತಿಗಳು ಒಳಗೊಂಡಿವೆ. ಇದರಲ್ಲಿ 30 ಮಹಿಳೆಯರೂ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿರಿಯ ನಟಿ ವೈಜಯಂತಿಮಾಲಾ, ಚಿರಂಜೀವಿ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

https://newsfirstlive.com/wp-content/uploads/2024/05/Padma-awardees2.jpg

Load More