Advertisment

ಚಿತ್ರದುರ್ಗ ಕಲುಷಿತ ನೀರು ಪ್ರಕರಣಕ್ಕೆ ಟ್ವಿಸ್ಟ್​; ಅಂತರ್ಜಾತಿ Love storyಗೆ ಲಿಂಕ್ ಪಡೆದುಕೊಂಡ ಕೇಸ್..!

author-image
Ganesh
Updated On
ಐದು ಜೀವ ಹೋದ ಮೇಲೆ ಎಚ್ಚೆತ್ತ ಸರ್ಕಾರ; ಚಿತ್ರದುರ್ಗ ಕವಾಡಿಗರಹಟ್ಟಿ ಮೂಲ ಸೌಕರ್ಯಕ್ಕೆ 4 ಕೋಟಿ ರೂ. ಅನುದಾನ
Advertisment
  • ಸಾವಿನ ಸಂಖ್ಯೆ 3ಕ್ಕೆ ಏರಿಕೆ, 130 ಮಂದಿ ಅಸ್ವಸ್ಥ
  • ಮತ್ತಷ್ಟು ಸಾವು-ನೋವು ಸಂಭವಿಸುವ ಆತಂಕ
  • ನೀರಿನ ಸ್ಯಾಂಪಲ್​ ಪ್ರಯೋಗಾಲಯಕ್ಕೆ ರವಾನೆ

ಚಿತ್ರದುರ್ಗ ಜಿಲ್ಲೆ ಕವಾಡಿಗರಹಟ್ಟಿಯ ಕಲುಷಿತ ನೀರು ದುರಂತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನೀರಿಗೆ ಬೇಕಂತಲೇ ಯಾರೋ ವಿಷ ಬೆರೆಸಿದ್ದಾರೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಜೊತೆಗೆ ವಿಷಕಾರಿ ನೀರಿನ ಪ್ರಕರಣಕ್ಕೆ ಲವ್ ಸ್ಟೋರಿಯ ಲಿಂಕ್ ಒಂದು ಸಿಕ್ಕಿದೆ.

Advertisment

ಏನಿದು ಹೊಸ ಆರೋಪ..?

‘‘ಇಷ್ಟಕ್ಕೆಲ್ಲ ಅನುಮಾನ ಏನೆಂದರೆ, ಕವಾಡಿಗರಹಟ್ಟಿಯಲ್ಲಿ ಮಾದಿಗ ಸಮಾಜ ಮತ್ತು ಲಿಂಗಾಯತ ಸಮಾಜ ಎರಡೂ ಒಟ್ಟಿಗೆ ಇದೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದ ಯುವಕ-ಯುವತಿ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಯುವತಿಗೆ 18 ವರ್ಷ ತುಂಬಿರಲಿಲ್ಲ. ಪೋಷಕರ ದೂರಿನಂತೆ ಆಕೆಯನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದರು. ಇಷ್ಟೆಲ್ಲ ನಡೆದಿದ್ದು ಒಂದು ವರ್ಷದಲ್ಲಿ’’.

‘‘ಕಳೆದ ಒಂದು ವಾರದ ಇತ್ತೀಚೆಗೆ ಸರ್ಕಾರದ ರಕ್ಷಣೆಯಲ್ಲಿ ಹುಡುಗಿ ಗ್ರಾಮಕ್ಕೆ ಬಂದಿದ್ದಳು. ಆಕೆ ಗ್ರಾಮದಲ್ಲಿರುವ ಅಂಗಡಿ ಮುಂದೆ ನಿಂತು ಅಳುತ್ತಿದ್ದಳು. ಆಗ ಅಲ್ಲಿದ್ದ ಗ್ರಾಮಸ್ಥರೊಬ್ಬರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದರು. ಅಷ್ಟೊತ್ತಿಗಾಗಲೇ, ಆಕೆಯ ಪೋಷಕರು ನನ್ನ ಮಗಳನ್ನು ಮತ್ತೆ ಕರೆದುಕೊಂಡು ಬಂದಿದ್ದಾರೆ ಎಂದು ದೂರು ನೀಡಲು ಠಾಣೆಗೆ ಬಂದಿದ್ದರು’’.

‘‘ಈ ವೇಳೆ ಪೊಲೀಸರ ಸಮಕ್ಷಮದಲ್ಲಿ ಹಾಗೆಲ್ಲ ಏನೂ ಆಗಿಲ್ಲ. ಆಕೆಯೇ ಬಂದು ಗ್ರಾಮದಲ್ಲಿ ಅಳುತ್ತ ನಿಂತಿದ್ದಳು ಎಂದು ಮನವರಿಕೆ ಮಾಡಿಕೊಡಲಾಗಿತ್ತು. ಈ ಘಟನೆಯಾದ ಒಂದು ವಾರ ಕಳೆಯೋದರೊಳಗೆ ಎರಡು ದಲಿತರ ಕೇರಿಗೆ ಹೋಗುವ ನೀರಿಗೆ ವಿಷ ಬೆರೆಸಿದ್ದಾರೆ ಎಂಬ ಅನುಮಾನ ಕಾಡಿದೆ. ಟ್ಯಾಂಕ್​ಗೆ ಯಾವುದೋ ಕೆಮಿಕಲ್ ಸುರಿದಿರುವ ಅನುಮಾನ ಇದೆ. ಈ ಬಗ್ಗೆ ನಾವು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಅಧಿಕಾರಿಗಳು ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ’’ -ಸಂತ್ರಸ್ತ ಗ್ರಾಮಸ್ಥರು

ಇಲ್ಲಿಯವರಗೆ ಒಟ್ಟು ಮೂವರು ಕಲುಷಿತ ನೀರಿಗೆ ಸಾವನ್ನಪ್ಪಿದ್ದಾರೆ. ಮಂಜುಳಾ(23), ರಘು(25), ಪ್ರವೀಣ(25) ಮೃತ ದುರ್ದೈವಿಗಳು. ಈ ಮೂರು ಕುಟುಂಬದಲ್ಲೂ ಶೋಕ ಮಡುಗಟ್ಟಿದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ವಿಷದ ನೀರನ್ನು 130ಕ್ಕೂ ಹೆಚ್ಚು ಮಂದಿ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಪ್ರಕರಣ ಸಂಬಂಧ ಆರೋಪಿಗಳು ಮತ್ತು ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

publive-image

ನೀರಿನ ಸ್ಯಾಂಪಲ್ ಕಳುಹಿಸಿದ ಅಧಿಕಾರಿಗಳು

ಮೃತ ಮಂಜುಳಾ ಕುಟುಂಬಸ್ಥ ಈ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಟ್ಯಾಂಕಿನ ನೀರಿನ ನಮೂನೆಗಳನ್ನು (ಸ್ಯಾಂಪಲ್) ಸಂಗ್ರಹಿಸಿ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿದ್ದಾರೆ. ಅಲ್ಲದೆ, ಟ್ಯಾಂಕ್ ಅನ್ನು ಸೀಜ್ ಮಾಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment