newsfirstkannada.com

ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುತ್ತಾ? ಸೆಕ್ಷನ್ 302 ಬಗ್ಗೆ ರಮ್ಯಾ ಧ್ವನಿ ಎತ್ತಿದ್ದೇಕೆ?

Share :

Published June 11, 2024 at 4:32pm

Update June 11, 2024 at 4:33pm

    ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನದ ಸುದ್ದಿ ಕೇಳಿ ಶಾಕ್ ಆದ ಚಿತ್ರರಂಗ

    ಸ್ಯಾಂಡಲ್​ವುಡ್ ನಟ ದರ್ಶನ್, ಪವಿತ್ರ ಗೌಡ ಸೇರಿ 13 ಮಂದಿ ಬಂಧನ

    ಬರ್ಬರ ಕೊಲೆ ಕೇಸ್​ ಬಗ್ಗೆ ನಟಿ ಮೋಹಕ ತಾರೆ ರಮ್ಯಾ ಪ್ರತಿಕ್ರಿಯೆ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಈಗಾಗಲೇ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಅವರ ಕ್ರೂರ ಕೊಲೆ ಕೇಸ್‌ಗೆ ದರ್ಶನ್ ಅಭಿಮಾನಿಗಳು ಹಾಗೂ​​ ಇಡೀ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ.

ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ! 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಬೆನ್ನಲ್ಲೇ ಮೋಹಕ ತಾರೆ ನಟಿ ರಮ್ಯಾ ಅವರು ರಿಯಾಕ್ಟ್ ಮಾಡಿದ್ದಾರೆ. ರಮ್ಯಾ ಅವರು ಕರ್ನಾಟಕ ಬಾಕ್ಸ್ಆಫೀಸ್ ಖಾತೆಯಿಂದ ಮಾಡಿದ್ದ ಟ್ವೀಟ್​​ವೊಂದಕ್ಕೆ ರೀ ಟ್ವೀಟ್ ಮಾಡಿದ್ದಾರೆ. ದರ್ಶನ್​​ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಆಗಬಹುದು ಎನ್ನುವ ಟ್ವೀಟ್​ ಅನ್ನು ರಮ್ಯಾ ಅವರು ರೀ ಪೋಸ್ಟ್ ಮಾಡಿಕೊಂಡಿದ್ದಾರೆ.

ಸೆಕ್ಷನ್ 302 ಹೇಳೋದೇನು?
IPC ಸೆಕ್ಷನ್ 302 ಕೊಲೆಯ ಅಪರಾಧಿ ನೀಡುವ ಶಿಕ್ಷೆಯ ಬಗ್ಗೆ ಹೇಳಲಾಗಿದೆ. ಈ ಸೆಕ್ಷನ್ ಅನ್ವಯ ಕೊಲೆಗಾರನಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಹಾಗೂ ದಂಡನೆಯ ಶಿಕ್ಷೆಗೆ ಗುರಿಯಾಗುತ್ತಾರೆ.

ನಟಿ ರಮ್ಯಾ ಅವರು ಈ ಹಿಂದೆ ನಟ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆಯನ್ನು ಖಂಡಿಸಿದ್ದಾರೆ. ಆ ವೇಳೆ ತಾವು ದರ್ಶನ್ ಪರವಾಗಿ ನಿಂತಿರುವುದಾಗಿ ಹೇಳಿದ್ದರು. ಜೊತೆಗೆ ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕು ಅಂತ ಕೂಡ ಗುಡುಗಿದ್ದರು. ಇದೀಗ ಅಭಿಮಾನಿ ಕೊಲೆ ಕೇಸ್​ ಬಗ್ಗೆಯೂ ನಟಿ ಮೋಹಕ ತಾರೆ ರಮ್ಯಾ ಬೆಂಬಲ ನೀಡಿದ್ದಾರೆ.

ಏನಿದು ಘಟನೆ..?
ನಟ ದರ್ಶನ್ ಅವರ ಮೇಲೆ ಹಲ್ಲೆ ಹಾಗೂ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ​ನಟ ದರ್ಶನ್​​, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವನಾಗಿದ್ದು, ನಟ ದರ್ಶನ್​ನ ಅಭಿಮಾನಿಯಾಗಿದ್ದರು ಎಂದು ಹೇಳಲಾಗುತ್ತಿದೆ. ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀ ನಡುವೆ ಪವಿತ್ರಾ ಗೌಡ ಬಂದ ಸಂಬಂಧ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್​ ಮಾಡಿದ್ದನಂತೆ. ಈ ವಿಚಾರವನ್ನು ಪವಿತ್ರಾ ಗೌಡ ದರ್ಶನ್​ ಬಳಿ ಹೇಳಿಕೊಂಡಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಂಡು ಬಳಿಕ ಆತನಿಗೆ ದರ್ಶನ್​ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಮಾನುಷವಾಗಿ ಥಳಿಸಿದ್ದಾರೆ. ಥಳಿಸಿದ ಏಟಿಗೆ ಯುವಕ ಸಾವನ್ನಪ್ಪಿದ್ದಾನೆ. ನಂತರ ಮೃತದೇಹವನ್ನು ಸುಮನಹಳ್ಳಿ ಮೋರಿ ಬಳಿ ತಂದು ಎಸೆದಿದ್ದಾರೆ.

ಕೊಲೆಯಾದ ಅಭಿಮಾನಿ ರೇಣುಕಾಸ್ವಾಮಿ ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭಾ ಅವರ ಪುತ್ರ ರೇಣುಕಾಸ್ವಾಮಿ. 2023 ಜೂನ್ 28ರಂದು ರೇಣುಕಾಸ್ವಾಮಿ ವಿವಾಹ ಆಗಿದ್ದ. ಮದುವೆಯಾಗಿ ವರ್ಷ ತುಂಬುವ ಮುನ್ನವೇ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ಇನ್ನು, ಕೊಲೆಯಾದ ರೇಣುಕಾಸ್ವಾಮಿ ಮೃತದೇಹವು ಸತ್ವ ಅನುಗ್ರಹ ಅಪಾರ್ಟ್​ಮೆಂಟ್​ನ ಮುಂಭಾಗದಲ್ಲಿರುವ ಮೋರಿಯಲ್ಲಿ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುತ್ತಾ? ಸೆಕ್ಷನ್ 302 ಬಗ್ಗೆ ರಮ್ಯಾ ಧ್ವನಿ ಎತ್ತಿದ್ದೇಕೆ?

https://newsfirstlive.com/wp-content/uploads/2024/06/ramya1.jpg

Load More