Advertisment

ದರ್ಶನ್​ ಅಭಿಮಾನಿ ಆಗಿದ್ದ ರೇಣುಕಾಸ್ವಾಮಿ -ವಿಜಯಲಕ್ಷ್ಮೀ ಸಂಸಾರ ಚೆನ್ನಾಗಿರಲಿ ಅಂತಾ ಬಯಸಿದ್ನಂತೆ..!

author-image
Ganesh
Updated On
ದರ್ಶನ್​ ಅಭಿಮಾನಿ ಆಗಿದ್ದ ರೇಣುಕಾಸ್ವಾಮಿ -ವಿಜಯಲಕ್ಷ್ಮೀ ಸಂಸಾರ ಚೆನ್ನಾಗಿರಲಿ ಅಂತಾ ಬಯಸಿದ್ನಂತೆ..!
Advertisment
  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧಿಸಿದ ಪೊಲೀಸರು
  • ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್
  • ಕೊಲೆಯಾದ ವ್ಯಕ್ತಿ ದರ್ಶನ್​​ ಅವರ ಅಪ್ಪಟ ಅಭಿಮಾನಿ ಆಗಿದ್ನಂತೆ

ಕೊಲೆ ಆರೋಪ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧನಕ್ಕೆ ಒಳಗಾಗಿರುವ ದರ್ಶನ್​ ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಕೊಲೆಯಾದ ರೇಣುಕಾಸ್ವಾಮಿ ಅವರು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಕೆಲವು ಮಾಹಿತಿಗಳ ಪ್ರಕಾರ.. ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿಯಾಗಿದ್ದ. ರೇಣುಕಾಸ್ವಾಮಿಗೆ ದರ್ಶನ್ ಮತ್ತು ವಿಜಯಲಕ್ಷ್ಮೀ ಸಂಸಾರದಲ್ಲಿ ಪವಿತ್ರಗೌಡ ಎಂಟ್ರಿ ಇಷ್ಟ ಇರಲಿಲ್ಲವಂತೆ. ಇದೇ ಕಾರಣಕ್ಕೆ ಪವಿತ್ರಗೌಡ ಅವರ ಪೋಸ್ಟ್​ಗೆ ರೇಣುಕಾಸ್ವಾಮಿ ಕಮೆಂಟ್ ಮಾಡುತ್ತಿದ್ದ. ನೀವು ದರ್ಶನ್ ಅವರ ಬಾಳಲ್ಲಿ ಬರಬೇಡಿ. ವಿಜಯಲಕ್ಷ್ಮಿ ಜೊತೆ ನಮ್ಮ ಬಾಸ್ ಚೆನ್ನಾಗಿರಬೇಕು ಎಂಬ ಆಸೆ ರೇಣುಕಾಸ್ವಾಮಿಯದ್ದಾಗಿತ್ತಂತೆ.

ಇದನ್ನೂ ಓದಿ:ಶೆಡ್​ನಲ್ಲಿ ಕೂಡಿ ಹಾಕಿ ಥಳಿತ.. ಅಲ್ಲೇ ಸ್ಪಾಟ್.. ಕೇಸ್​ ಮುಚ್ಚಿಹಾಕಲು ನಡೆದಿತ್ತಾ ಪ್ಲಾನ್..?

ದುರಾದೃಷ್ಟವಶಾತ್ ಇವತ್ತು ದರ್ಶನ್​ ಅವರ ಸಂಸಾರ ಚೆನ್ನಾಗಿರಲಿ ಎಂದು ಬಯಸಿದ್ದ ಅಭಿಮಾನಿ ಕೊಲೆಯಾಗಿ ಹೋಗಿದ್ದಾನೆ ಎಂದು ರೇಣುಕಾಸ್ವಾಮಿ ಸ್ನೇಹಿತರು ಕಣ್ಣೀರು ಇಡ್ತಿದ್ದಾರೆ. ಸದ್ಯ ದರ್ಶನ್​​ನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮಾತ್ರವಲ್ಲ, ಚಿತ್ರದಿರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಎನ್ನಲಾದ ರಘು ದರ್ಶನ್​ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisment

ಇದನ್ನೂ ಓದಿ:ಒಂದು ವರ್ಷದ ಹಿಂದೆ ಮದುವೆ.. ಕೊಲೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ..

ರಘು ದರ್ಶನ್ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಜಿಲ್ಲಾಧ್ಯಕ್ಷರಾಗಿದ್ದಾರೆ. ಈಗಾಗಲೇ ಪೊಲೀಸರ ವಶದಲ್ಲಿರುವ ರಘು ದರ್ಶನ್, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:10ಕ್ಕೂ ಹೆಚ್ಚು ಜನರ ವಶಕ್ಕೆ ಪಡೆಯಲಾಗಿದೆ -ದರ್ಶನ್ ಅರೆಸ್ಟ್ ಬಗ್ಗೆ ಪೊಲೀಸ್ ಕಮಿಷನರ್ ಸ್ಫೋಟಕ ಮಾಹಿತಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment