Advertisment

‘ಬಂದಿತೋ ಬಂದಿತೋ ಕಾಸು ಬಂದಿತೋ’.. ವರ್ಲ್ಡ್ ವೈಡ್​ನಲ್ಲಿ ಸು ಫ್ರಮ್ ಸೋಗೆ ಕೋಟಿ ಕೋಟಿ ಕಲೆಕ್ಷನ್..

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ವರ್ಲ್ಡ್ ವೈಡ್​ನಲ್ಲಿ ಭರ್ಜರಿ ರೆಸ್ಪಾನ್ಸ್ ಗಳಿಸಿದ್ದು, ಇದೀಗ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಗಳಿಕೆಯ ಇತಿಹಾಸ ಬರೆದಿದೆ.‌

author-image
NewsFirst Digital
Updated On
Su From So
Advertisment

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ವರ್ಲ್ಡ್ ವೈಡ್​ನಲ್ಲಿ ಭರ್ಜರಿ ರೆಸ್ಪಾನ್ಸ್ ಗಳಿಸಿದ್ದು, ಇದೀಗ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಗಳಿಕೆಯ ಇತಿಹಾಸ ಬರೆದಿದೆ.‌

Advertisment

ಇದನ್ನೂ ಓದಿ:ಡಿವೋರ್ಸ್​ ಬಗ್ಗೆ ಪತ್ರ ಬರೆದು ಅಜಯ್ ರಾವ್ ಮನವಿ.. ಏನು ಹೇಳಿದರು?

Su From So(2)

ಹೌದು, ಹಾರರ್ ಕಾಮಿಡಿ ಕಥಾಹಂದರ ಹೊಂದಿರೋ ‘ಸು ಫ್ರಮ್ ಸೋ’ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಹೀಗೆ ಕೋಟಿ ಕೋಟಿ ಕಲೆಕ್ಷನ್​ ಬಾಚಿಕೊಳ್ಳುತ್ತಿರೋ ಸಿನಿಮಾ ತಂಡದವರೇ ಫುಲ್​ ಶಾಕ್ ಆಗುತ್ತಿದ್ದಾರೆ. ಡಿಫರೆಂಟ್​ ಹೆಸರನ್ನು ಹೊಂದಿರೊ ಸು ಫ್ರಮ್​ ಸೋ ವರ್ಲ್ಡ್ ವೈಡ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಸಿನಿಮಾ ನೋಡಿದ ಎಲ್ಲರ ಬಾಯಲ್ಲೂ ಒಂದೇ ಒಂದೇ ಹಾಡು ‘ಬಂದರು ಬಂದರೋ ಭಾವ ಬಂದರೋ’, ಆದರೆ ಸಿನಿಮಾ ತಂಡದವರ ಸದ್ಯದ ಪರಿಸ್ಥಿತಿ ಬಂದಿತೋ ಬಂದಿತೋ ಕಾಸು ಬಂದಿತೋ ಎಂಬಂತಿದೆ.

Su From So(4)

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಅದ್ಭುತ ಕಲೆಕ್ಷನ್ ಮಾಡಿದೆ. ಇದೀಗ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಗಳಿಕೆಯ ಇತಿಹಾಸ ಬರೆದಿದೆ.‌ ವಿಶ್ವದಾದ್ಯಂತ ಬರೋಬ್ಬರಿ 100 ಕೋಟಿ ಗಳಿಸಿದ್ದು, ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ 100 ಕೋಟಿ ಕ್ಲಬ್ ಸೇರಿದ ಕನ್ನಡದ ಸಿನಿಮಾ ಅನ್ನೋ ಹೆಗ್ಗಳಿಕೆ ಸು ಫ್ರಮ್ ಸೋ ಸಿನಿಮಾಗೆ ಧಕ್ಕಿದೆ.

ಇದನ್ನೂ ಓದಿ: ಈ ಬಾರಿಯ ಬಿಗ್​ಬಾಸ್​​ಗೆ ಅನಯಾ ಬಂಗಾರ್ ಎಂಟ್ರಿ..?

Su From So(1)

ಅಷ್ಟೇ ಅಲ್ಲದೇ ‘ಸು ಫ್ರಮ್ ಸೋ’ ಸಿನಿಮಾ ಪ್ರತಿ ವೀಕೆಂಡ್​​ನಲ್ಲೂ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಹೀಗಾಗಿ ನಿರ್ಮಾಪಕ ರಾಜ್ ಬಿ. ಶೆಟ್ಟಿ, ನಿರ್ದೇಶಕನಾಗಿ ಜೆ.ಪಿ. ತುಮಿನಾಡು ಅವರಿಗೆ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ. ‘ವಾರ್ 2’, ‘ಕೂಲಿ 2’ ಸಿನಿಮಾಗಳ ಪೈಪೋಟಿ ನಡುವೆಯೂ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ಗಡಿ ದಾಟಿದ್ದು ಹೆಮ್ಮೆಯ ವಿಚಾರವೇ ಸರಿ.

Advertisment

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Su From So movie, Raj B Shetty
Advertisment
Advertisment
Advertisment