/newsfirstlive-kannada/media/media_files/2025/08/09/dhruva_sarja_style-2025-08-09-13-06-13.jpg)
ಬೆಂಗಳೂರು: ಧ್ರುವ ಸರ್ಜಾ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ರಾಘವೇಂದ್ರ ಹೆಗಡೆ ಮುಂಬೈನ ಅಂಬೋಲಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಈ ಸಂಬಂಧ ಧ್ರುವ ಸರ್ಜಾ ಅವರ ಆಪ್ತ ಬಳಗ ಸ್ಪಷ್ಟನೆ ನೀಡಿದೆ.
ಧ್ರುವ ಸರ್ಜಾ ಅವರ ಆಪ್ತ ಬಳಗ ಈ ಪ್ರಕರಣ ಕುರಿತಂತೆ ಸ್ಪಷ್ಟನೆ ನೀಡಿದ್ದು ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಸಿನಿಮಾ ಮಾಡಲೆಂದು ಅಡ್ವಾನ್ಸ್ ಕೊಟ್ಟಿದ್ದಾರೆ. ಇದು ಈಗಿನದ್ದು ಅಲ್ಲ, 8 ವರ್ಷಗಳ ಹಿಂದೆ ರಾಘವೇಂದ್ರ ಹೆಗಡೆ ಬಂದು ಅಡ್ವಾನ್ಸ್ ಕೊಟ್ಟು ಹೋಗಿದ್ದರು. ಇದಾದ ಮೇಲೆ ಸೈನಿಕರಿಗೆ ಸಂಬಂಧಪಟ್ಟ ಸ್ಟೋರಿ ಮಾಡೋಣ ಎಂದು ಆಗಾಗ ಮೀಟಿಂಗ್ ಚರ್ಚೆ ನಡೆಯುತ್ತಲೇ ಇತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಧ್ರುವ ಸರ್ಜಾ ವಿರುದ್ಧ ಕೋಟಿ ಕೋಟಿ ಹಣ ವಂಚನೆ ಆರೋಪ.. FIR ದಾಖಲು
ಜೂನ್ 8 ರಂದು ರಾಘವೇಂದ್ರ ಹೆಗಡೆ ಅವರು ಬಂದು ನಮ್ಮನ್ನೆಲ್ಲ ಮೀಟ್ ಮಾಡಿ, ಮಾತಾಡಿ ಹೋಗಿದ್ದಾರೆ. ಆಗ ಕನ್ನಡದಲ್ಲಿ ಸರಿಯಾಗಿ ಬ್ಯುಸಿನೆಸ್ ಆಗುತ್ತಿಲ್ಲ. ನೇರವಾಗಿ ತಮಿಳು ಅಥವಾ ತೆಲುಗಿನಲ್ಲಿ ಸಿನಿಮಾ ಮಾಡೋಣ ಎಂದು ರಾಘವೇಂದ್ರ ಹೆಗಡೆ ಹೇಳುತ್ತಿದ್ದರು. ಅದಕ್ಕೆ ನಾವು, ಇಲ್ಲ ಕನ್ನಡದಲ್ಲೇ ಮೊದಲು ಸಿನಿಮಾ ಮಾಡೋಣ. ಮೊದಲು ಕನ್ನಡಕ್ಕೆ ಆದ್ಯತೆ ಕೊಡಿ ಅಂತ ಧ್ರುವ ಸರ್ಜಾ ಅವರಿಗೆ ಹೇಳಿದ್ದರು ಎಂದಿದ್ದಾರೆ.
ಧ್ರವ ಸರ್ಜಾ ಅವರ ಮಾತಿಗೆ ಒಪ್ಪದ ರಾಘವೇಂದ್ರ ಹೆಗಡೆ ಜೂನ್ 10ರಂದು ಮುಂಬೈ ಕೋರ್ಟ್ನಿಂದ ನೋಟಿಸ್ ಕೂಡ ಕಳಿಸಿದ್ದರು. ಈ ಸಂಬಂಧ ನೋಟಿಸ್ಗೆ ಜೂನ್ 15 ರಂದೇ ಉತ್ತರ ಕೊಟ್ಟಿದ್ದೇವೆ. ನಮ್ಮ ಕಡೆಯು ವಕೀಲರು ಇದ್ದು ಈ ಪ್ರಕರಣದ ಕುರಿತು ಮಾತುಕತೆಯಲ್ಲಿ ಇದ್ದಾರೆ ಎಂದು ಧ್ರುವ ಸರ್ಜಾ ಅವರ ಆಪ್ತ ಬಳಗ ಸ್ಪಷ್ಟನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ