/newsfirstlive-kannada/media/media_files/2025/09/19/ropbo-shankar-2025-09-19-09-24-20.jpg)
ರೊಬೋ ಶಂಕರ್ Photograph: (ಹಾಸ್ಯ ನಟ ರೊಬೋ ಶಂಕರ್)
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ರೋಬೋ ಶಂಕರ್ (Robo Shankar) ನಿಧನರಾಗಿದ್ದಾರೆ.ನಿನ್ನೆ ಶೂಟಿಂಗ್ ಸೆಟ್‌ನಲ್ಲಿದ್ದ ರೋಬೋ ಶಂಕರ್ ದಿಢೀರನೇ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದ್ರೆ ಐಸಿಯುನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಿಢೀರ್ ಕುಸಿದು ಬಿದ್ದ ರೋಬೋ ಶಂಕರ್
ತಮಿಳು ಚಿತ್ರರಂಗದಲ್ಲಿ ರೋಬೋ ಶಂಕರ್ (Robo shankar) ಎಂದೇ ಹೆಸರುಗಳಿಸಿರುವ ಹಾಸ್ಯ (Comedy Actor) ನಟ ಶಂಕರ್ ನಿನ್ನೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. (Death) ಕಲಕ್ಕಪ್ ಪೋವತು ಯಾರು ಎಂಬ ಕಾರ್ಯಕ್ರಮದಿಂದ ರೋಬೋ ಶಂಕರ್ ಪ್ರಸಿದ್ಧರಾಗಿದ್ದರು. ರೋಬೋ ಶಂಕರ್ ಅವರಿಗೆ 46 ವರ್ಷಗಳಾಗಿತ್ತು. ರೋಬೋ ಶಂಕರ್ ಸ್ಟ್ಯಾಂಡ್-ಅಪ್ ಕಾಮಿಡಿ ಹಾಗೂ ತಮ್ಮ ಅದ್ಭುತ ಮಿಮಿಕ್ರಿ ಕೌಶಲ್ಯದಿಂದ ಜನಪ್ರಿಯತೆಗಳಿಸಿದ್ದರು. ವಿಜಯ್ ಸೇತುಪತಿ ಅಭಿನಯದ ಇದರ್‌ಕುಟ್ಟನ್ ಆಸೆಪಟ್ಟೈಬಾಲಕುಮಾರ ಚಿತ್ರದಲ್ಲಿ ಅಭಿನಯಿದ್ದಾರೆ.
ಏನಾಗಿತ್ತು..?
ಖ್ಯಾತ ಹಾಸ್ಯ ನಟ ರೋಬೋ ಶಂಕರ್ ಜಾಂಡೀಸ್‌ನಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಸಿನಿಮಾ ಚಿತ್ರೀಕರಣದಲ್ಲಿದ್ದಾಗ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿತ್ತು. ಶಂಕರ್ ದಿಢೀರನೇ ಕುಸಿದು ಬಿದ್ದಿದ್ದಾರೆ. ತಕ್ಷಣ ಚಿತ್ರತಂಡ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಅವರ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುಗೆ ಶಿಫ್ಟ್ ಮಾಡಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಅವರು ಜಾಂಡೀಸ್‌ನಿಂದ ಬಳಲಿದ್ದರು. ರೋಬೋ ಶಂಕರ್ ನಿಧನಕ್ಕೆ ಅಭಿಮಾನಿಗಳು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.
ಇದನ್ನೂ ಓದಿ :ಸಂಗಾತಿ ಹುಡುಕುತ್ತ ಅಮೆರಿಕದಿಂದ ಭಾರತಕ್ಕೆ ಬಂದ 71 ವರ್ಷದ ವೃದ್ಧೆ.. ಜೀವ ತೆಗೆದು ಸ್ಟೋರ್ ರೂಮ್ನಲ್ಲಿ ಸುಟ್ಟ ಪ್ರೇಮಿ