/newsfirstlive-kannada/media/media_files/2025/09/19/us-nri-lady-2025-09-19-08-19-48.jpg)
ಅಮೆರಿಕಾದ ಪ್ರಜೆ ರೂಪಿಂದರ್ ಕೌರ್ ಪಾಂಡೆರ್, ಮದುವೆಯಾಗಲು ಭಾರತದಲ್ಲಿದ್ದ ತನ್ನ ಸಂಗಾತಿ ಹುಡುಕಿ ಬಂದಿದ್ದರು. ಆದರೆ, ಶುಭ ಸಮಾರಂಭಕ್ಕೂ ಮುನ್ನವೇ ಲೂಧಿಯಾನದಲ್ಲಿ ಕೊ*ಲೆಯಾಗಿದ್ದಾರೆ.
ಪ್ರೀತಿಗೆ ವಯಸ್ಸಿಲ್ಲ. ಓನ್ಲಿ ಮನಸ್ಸು ಮಾತ್ರ.. ಮೇಡಂಗೆ (69) ವರ್ಷ. ಹೆಸರು ರೂಪಿಂದರ್ ಕೌರ್. ಭಾರತೀಯ ಮೂಲದ ಅಮೆರಿಕ ಪ್ರಜೆ.. ಮೇಡಂ ಮದುವೆ ಆಗ್ಬೇಕು ಅಂತ ತನ್ನ ಸಂಗಾತಿಯನ್ನು ಹುಡುಕಿ ಪಂಜಾಬ್‌ನ ಲೂಧಿಯಾನಕ್ಕೆ ಬಂದಿದ್ರು. ಆದರೆ, ಮದುವೆಗೂ ಮುನ್ನವೇ ಅವರು ಕೊ*ಲೆಯಾಗಿದ್ದಾರೆ.
ಇದನ್ನೂ ಓದಿ:ಕನ್ನಡ ಪರ ನಿಂತ 11 ಮಂದಿ ಜೈಲು ಪಾಲು.. ಕಲಬುರಗಿಯಲ್ಲಿ ಅಧಿಕಾರಿಗಳು ಮಾಡಿದ್ದೇ ಆಟ..!
ಅನಿವಾಸಿ ಭಾರತೀಯನಾದ ಚರಣ್‌ಜಿತ್ ಸಿಂಗ್ ಗ್ರೆವಾಲ್ (67) ನನ್ನು ಮದುವೆ ಆಗ್ಬೇಕು ಅಂತಾನೇ ರೂಪಿಂದರ್ ಕೌರ್ ಪಂಜಾಬ್ಗೆ ಬಂದಿದ್ರಂತೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಕೌರ್ ನಿಗೂಢವಾಗಿ ಕಣ್ಮರೆಯಾಗಿದ್ದರು. ರೂಪಿಂದರ್ರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಇತ್ತೀಚೆಗೆ ಭಯಾನಕ ಸತ್ಯವೊಂದರ ಸುಳಿವು ಸಿಕ್ಕಿ, ಆಕೆ ಕೊ*ಲೆಯಾಗಿರೋದು ಗೊತ್ತಾಗಿತ್ತು.
ಪ್ರಕರಣ ಹೊರಬಂದಿದ್ದೇಗೆ?
- ಚರಣ್‌ಜಿತ್ ಜೊತೆ ಮದುವೆಯಾಗಲು ಭಾರತಕ್ಕೆ ಬಂದಿದ್ದರು
- ರೂಪಿಂದರ್ ಸಹೋದರಿಗೆ ಯಾವುದೇ ಮಾಹಿತಿ ಕೊಟ್ಟಿಲ್ಲ
- ಕಮಲ್ ಕೌರ್ ಕರೆ ಮಾಡಿದರು ಫೋನ್ ಸ್ವಿಚ್‌ಆಫ್ ಬಂದಿದೆ
- ಜು.24, ದೆಹಲಿಯ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ
- ರಾಯಭಾರ ಕಚೇರಿ ಪೊಲೀಸರಿಗೆ ತನಿಖೆ ನಡೆಸಲು ಒತ್ತಾಯ
- ಶುರು ಮಾಡಿದ ವೇಳೆ ಸುಖ್‌ಜೀತ್ ಸಿಂಗ್ ಸೋನು ಬಂಧನ
- ಮನೆಯಲ್ಲಿ ಜೀವ ತೆಗೆದು ಸ್ಟೋರ್ ರೂಮಿನಲ್ಲಿ ಸುಟ್ಟು ಹಾಕಿದ್ದ
- ಸೋನುಗೆ 50 ಲಕ್ಷ ಕೊಡುವುದಾಗಿ ಹೇಳಿ ಸುಪಾರಿ
ಇದನ್ನೂ ಓದಿ:ಚುನಾವಣಾ ಆಯೋಗದವರು ಕತ್ತೆ ಕಾಯುತ್ತಿದ್ರಾ..?- ಸಚಿವ ಪ್ರಿಯಾಂಕ್ ಖರ್ಗೆ ಗರಂ
ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದು ಜೀವ ತೆಗೆದಿದ್ದಾರಂತೆ. ಆಕೆಯ ದೇಹವನ್ನ ಕಲ್ಲಿದ್ದಲಿನಿಂದ ಸುಟ್ಟು.. ಆಕೆಯ ಅಸ್ಥಿಪಂಜರದ ಅವಶೇಷಗಳನ್ನ ಚೀಲಗಳಲ್ಲಿ ತುಂಬಿಸಿ.. ಚರಂಡಿಯಲ್ಲಿ ಎಸೆಯಲಾಯಿತಂತೆ. ಮೃತದೇಹವನ್ನು ಸುಡಲು ಎರಡರಿಂದ ಮೂರು ದಿನಗಳು ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಆರೋಪಿಯು ಆಕೆಯ ಮೊಬೈಲ್ ಫೋನ್ ಅನ್ನು ಸುತ್ತಿಗೆಯಿಂದ ಒಡೆದಿದ್ದಾನೆ. ಸದ್ಯ ಪೊಲಿಸರು ಕೃತ್ಯಕ್ಕೆ ಬಳಸಿದ ಮಾರಾಕಾಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯರ ‘ಜಾತಿ ಗಣತಿ’ ಕನಸಿಗೆ ಮತ್ತೆ ವಿಘ್ನ.. ಸೆಪ್ಟೆಂಬರ್ 22 ರಿಂದ ನಡೆಯೋದು ಡೌಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ