/newsfirstlive-kannada/media/media_files/2025/09/17/cm-siddaramaiah-1-2025-09-17-18-10-03.jpg)
ರಾಜ್ಯ ರಾಜಕಾರಣದಲ್ಲಿ ಜಾತಿ ಜನಗಣತಿ ಲೆಕ್ಕಾಚಾರ ಭಾರೀ ಕುತೂಹಲ ಮೂಡಿಸಿದೆ. ಜಾತಿ ಜನಗಣತಿ ಜೇನುಗೂಡಿಗೆ ಮತ್ತೆ ಕೈ ಹಾಕಿರೋ ಸಿಎಂ ಸಿದ್ದರಾಮಯ್ಯ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಿಂದೂ ಮೂಲ ಜಾತಿಗಳ ಜೊತೆಯಲ್ಲೇ ಕ್ರಿಶ್ಚಿಯನ್ ಹೆಸರು ಸೇರಿಸಿರುವುದು ಸ್ವಪಕ್ಷದ ಸಚಿವರ ಆಕ್ರೋಶಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸೆಪ್ಟಂಬರ್ 22 ಅಂದ್ರೆ.. ಮುಂದಿನ ಸೋಮವಾರದಿಂದ ಆರಂಭವಾಗಬೇಕಿದ್ದ ಜಾತಿ ಗಣತಿ ಮರು ಸರ್ವೇ ಮುಂದೂಡಿಕೆ ಆಗುವ ಲಕ್ಷಣ ಗೋಚರಿಸಿದೆ.
ಇದನ್ನೂ ಓದಿ:ಚುನಾವಣಾ ಆಯೋಗದವರು ಕತ್ತೆ ಕಾಯುತ್ತಿದ್ರಾ..?- ಸಚಿವ ಪ್ರಿಯಾಂಕ್ ಖರ್ಗೆ ಗರಂ
ದಸರಾ ಹೊತ್ತಲ್ಲೇ ರಾಜ್ಯದಲ್ಲಿ ಹೊತ್ತಿರುವ ಜಾತಿ ಕಿಡಿ ಧಗಧಗಿಸ್ತಿದ್ದು, ಸರ್ಕಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕ್ಯಾಬಿನೆಟ್ ಸಭೆಯಲ್ಲೂ ಜಾತಿ ಜಟಾಪಟಿ ಜೋರಾಗಿತ್ತು. ಕೆಲ ಸಚಿವರು ಸಿಎಂ ಸಿದ್ದರಾಮಯ್ಯ ಎದುರೇ ಏರು ಧ್ವನಿಯಲ್ಲೇ ಜಾತಿ ಗಣತಿ ಮರು ಸರ್ವೆ ಬಗ್ಗೆ ಅಪಸ್ವರ ಎತ್ತಿದ್ದು, ಜಾತಿ ಕಿಚ್ಚಿನಲ್ಲಿ ಸರ್ಕಾರ ಹೋಳಾಗಿದೆ.
ಜಾತಿ ಕಿಚ್ಚು..
- ಕೆಲ ಸಚಿವರಿಂದ ಸಮೀಕ್ಷೆಯನ್ನೇ ಮುಂದೂಡಿ ಎಂದು ಕೂಗು
- ಇನ್ನೂ ಕೆಲ ಸಚಿವರಿಂದ ಜಾತಿಗಣತಿ ಸರ್ವೇ ಬೇಡ ಎಂದು ಧ್ವನಿ
- ಸಮುದಾಯದ ಸ್ವಾಮೀಜಿಗಳ ಹೇಳಿಕೆಗಳ ಬೆನ್ನಲ್ಲೇ ದ್ವಂದ್ವ
- ಜಾತಿಜನಗಣತಿ ಗೊಂದಲ ವಿಚಾರ ಡಿಸಿಎಂ ನೇತೃತ್ವದಲ್ಲಿ ಸಭೆ
- ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಆರು ಹಿರಿಯ ಸಚಿವರ ಜೊತೆ ಸಭೆ
- ಹೆಚ್.ಕೆ.ಪಾಟೀಲ್, ತಂಗಡಗಿ, ಜಮೀರ್, ಬೈರತಿ ಸುರೇಶ್ ಭಾಗಿ
- ಪಟ್ಟಿಯಲ್ಲಿ ಕ್ರಿಶ್ಚಿಯನ್ ಜೊತೆ ಸೇರಿದ ಉಪಜಾತಿಗಳ ಬಗ್ಗೆ ಚರ್ಚೆ
- ಕ್ರಿಶ್ಚಿಯನ್ ಧರ್ಮದಲ್ಲಿ ಕಾಣಿಸಿದ ಹೆಸರು ಬೇಕಾ? ಬೇಡ್ವಾ? ಚರ್ಚೆ
- 331ಜಾತಿಗಳ ಹೊಸದಾಗಿ ಸೇರ್ಪಡೆ ಬಗ್ಗೆಯೂ ಸಮಾಲೋಚನೆ
ಹಿರಿಯ ಸಚಿವರ ಸಭೆಯಲ್ಲೂ ಸಮೀಕ್ಷೆ ಮುಂದೂಡಿಕೆಗೆ ಒತ್ತಾಯ ಕೇಳಿ ಬಂದಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿವಾರು ಗೊಂದಲದ ಸಂಬಂಧ ಮಾಹಿತಿ ಪಡೆದ ಸಚಿವರು, ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ ಸಮೀಕ್ಷೆ ಮುಂದೂಡುವಂತೆ ಪಟ್ಟು ಹಿಡಿದಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರಲು ಮುಂದಾಗಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಅಳಂದ ಕ್ಷೇತ್ರದಲ್ಲಿ 6000 ಮತದಾರರ ಹೆಸರು ಡಿಲೀಟ್ -ರಾಹುಲ್ ಗಾಂಧಿ ಮತ್ತೊಂದು ಆರೋಪ
ಒಟ್ಟಾರೆ ಸಂಪುಟ ಸಭೆ ಬಳಿಕ... ಸಚಿವ ವಿಶೇಷ ಸಭೆಯಲ್ಲೂ ಜಾತಿಗಣತಿ ಸರ್ವೇಗೆ ಅಪಸ್ವರ ಕೇಳಿ ಬಂದಿದ್ದು. ಸಮೀಕ್ಷೆ ಮುಂದೂಡಿಕೆ ಒತ್ತಾಯಿಸಿದ್ರು.. ಇದೀಗ ಜಾತಿ ಗಣತಿ ಮರು ಸರ್ವೆ ಚೆಂಡು ಸಿಎಂ ಅಂಗಳ ತಲುಪಿದ್ದು, ನಿಗದಿಯಂತೆ ಸಮೀಕ್ಷೆ ಶುರುವಾಗುತ್ತಾ.. ಇಲ್ಲ ಮುಂದೂಡಿಕೆ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ