/newsfirstlive-kannada/media/media_files/2025/09/18/rahul-gandhi-2-2025-09-18-12-28-54.jpg)
ನವದೆಹಲಿ: ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ (Rahul Gandhi) ಮತ್ತೆ ಗುಡುಗಿದ್ದಾರೆ. 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಆಳಂದ ಕ್ಷೇತ್ರದಲ್ಲಿ (Aland Assembly constituency) ಅಕ್ರಮ ಆಗಿದೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಇವತ್ತು ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಮತಗಳ್ಳತನದ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿದರು. ದಲಿತ, ಆದಿವಾಸಿ, ಓಬಿಸಿ ಹಾಗೂ ಮೈನಾರಿಟಿ ಜನ ವಿರೋಧ ಪಕ್ಷದವರಿಗೆ ಮತಹಾಕುತ್ತಿದ್ದರು. ಆದರೆ ಇವರ ಮತಗಳ ಮೇಲೆ ಟಾರ್ಗೇಟ್ ಮಾಡಲಾಗಿದೆ. ಕರ್ನಾಟಕದ ಆಳಂದ ಪ್ರಕರಣವನ್ನು ಪ್ರಸ್ತಾಪಿಸಿ, 2023 ರಲ್ಲಿ 6018 ಮತಗಳನ್ನ ಡಿಲೀಟ್ ಮಡಲಾಗಿದೆ ಎಂದ ಅವರು ಗೋದಾಬಾಯಿ ಎಂಬ ಮಹಿಳೆಯ ವೀಡಿಯೊವನ್ನ ದಾಖಲೆಯಾಗಿ ಬಿಡುಗಡೆ ಮಾಡಿದರು.
14 ನಿಮಿಷದಲ್ಲಿ 12 ಜನರ ವೋಟರ್ ನೇಮ್ ಡಿಲೀಟ್!
ಸೂರ್ಯಕಾಂತ್ ಎಂಬ ವ್ಯಕ್ತಿ 12 ಜನರ ಮತವನ್ನ 14 ನಿಮೀಷದಲ್ಲಿ ಡಿಲೀಟ್ ಮಾಡಿದ್ದಾನೆ. ಈತ ಸರ್ಸಂಬ ಎಂಬ ಗ್ರಾಮದ ವ್ಯಕ್ತಿಯಾಗಿದ್ದಾನೆ. ನನ್ನ ಹೆಸರಲ್ಲಿ 12 ಜನರ ವೋಟರ್ ನೇಮ್ ಡಿಲೀಟ್ ಮಾಡಲಾಗಿದೆ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅಂತಾ ಸೂರ್ಯಕಾಂತ್ ಹೇಳಿದ್ದಾನೆ. ಇನ್ನು ಆಳಂದ ವಿಚಾರ ಮಾತನ್ನಾಡುವಾಗ ಆಳಂದ ಶಾಸಕ ಬಿ.ಆರ್.ಪಾಟೀಲ್ ಕೂಡ ವೇದಿಕೆಯ ಮೇಲೆ ಉಪಸ್ಥಿತಿರಿದ್ದರು.
ಕರ್ನಾಟಕದ ಸಿಐಡಿ ಚುನಾವಣಾ ಅಯೋಗಕ್ಕೆ ದಾಖಲೆಗಳನ್ನ ನೀಡಲು ಈ ಹಿಂದೆ ಆಗ್ರಹಿಸಿತ್ತು. ಫೆಬ್ರವರಿ, 2023ರಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಚುನಾವಣಾ ಆಯೋಗವು ಆಗಸ್ಟ್ನಲ್ಲಿ ಆಯ್ದ ದಾಖಲೆಗಳನ್ನು ಮಾತ್ರ ನೀಡಿದೆ. 2024 ರ ಜನವರಿಯಲ್ಲಿ ಮತ್ತೆ ಸಿಐಡಿ ಪತ್ರ ಬರೆದು ಪೂರ್ತಿ ವಿವರ ನೀಡುವಂತೆ ಮನವಿ ಮಾಡಿತ್ತು. ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನ ಚುನಾವಣಾ ಆಯೋಗ ನೀಡಿಲ್ಲ ಎಂದು ದೂರಿದ್ದಾರೆ. ಕರ್ನಾಟಕ ಚುನಾವಣಾ ಆಯೋಗ, ಕೇಂದ್ರ ಚುನಾವಣಾ ಆಯೋಗಕ್ಕೆ ಹಲವು ಬಾರಿ ಪತ್ರ ಬರೆದಿದೆ. ಆದರೆ ಕೇಂದ್ರ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಈ ಕುರಿತು ಕೇಂದ್ರ ಚುನಾವಣಾ ಆಯೋಗದ ಜ್ಞಾನೇಶ್ ಕುಮಾರ್ಗೆ ಗೊತ್ತಿದೆ ಎಂದಿದ್ದಾರೆ.
ಮಹಾರಾಷ್ಟ್ರಾದ ರಜೌರಾ ವಿಧಾನ ಸಭಾ ಕ್ಷೇತ್ರದಲ್ಲೂ 6850 ನಕಲಿ ಮತದಾರರು ಮತ ಚಲಾವಣೆ ಮಾಡಿದ್ದಾರೆ ಎಂದು ಅರೋಪಿಸಿದ ರಾಹುಲ್ ಗಾಂಧಿ, ಕರ್ನಾಟಕದ ಆಳಂದದಲ್ಲಿ ಫೇಕ್ ಐಡಿ, ಫೋನ್ ನಂಬರ್ ಬಳಸಿ ಡಿಲಿಟ್ ಮಾಡಿದ್ದಾರೆ. ಅದೇ ರಜೌರಾದಲ್ಲಿ ಮತಗಳನ್ನ ಸೇರ್ಪಡೆ ಮಾಡಲಾಗಿದೆ ಎಂದಿದ್ದಾರೆ.