/newsfirstlive-kannada/media/media_files/2025/09/18/rera-6-2025-09-18-11-45-33.jpg)
ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಇಲಾಖೆಯಲ್ಲಿ ಅಕ್ರಮಗಳ ಸದ್ದು ಜೋರಾಗಿದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (RERA) ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಎಲ್ಲಾ ವಿಚಾರಗಳು ಗೊತ್ತಿದ್ದೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು, ಸಚಿವರು ಸೈಲೆಂಟ್ ಆಗಿದ್ದಾರೆ ಎಂಬ ಆರೋಪ ಇದೆ.
ಇದನ್ನೂ ಓದಿ:ರೇರಾ ಕಾಯ್ದೆ ಇದ್ರೂ ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ.. ಜಮೀರ್ ಇಲಾಖೆಯಲ್ಲಿ ಬೆಚ್ಚಿ ಬೀಳಿಸಿದ ಅಕ್ರಮಗಳ ಸದ್ದು..!
ಕೆ-ರೇರಾ ವಿರುದ್ಧದ ಆರೋಪಗಳೇನು?
- ರೇರಾ ವೆಬ್ಸೈಟ್ನ ದತ್ತಾಂಶದಲ್ಲಿ ಪಾರದರ್ಶಕತೆ ಇಲ್ಲ
- ವಸತಿ ಯೋಜನೆಗಳ ಪ್ರಗತಿ ಬಗ್ಗೆ ವರದಿಗಳು ಸಲ್ಲಿಸಬೇಕು
- ಪ್ರಗತಿಯ ಬಗ್ಗೆ ತ್ರೈಮಾಸಿಕ ವರದಿಗಳನ್ನ ಸಲ್ಲಿಸಬೇಕಾಗುತ್ತೆ
- ಅದ್ರೆ ಬಹುತೇಕ ಬಿಲ್ಡರ್ಗಳು ವರದಿಯನ್ನ ಸಲ್ಲಿಸದೇ ಕಳ್ಳಾಟ
- ಬಿಲ್ಡರ್ಗಳು ವಸತಿ ಯೋಜನೆಗಳನ್ನ ಜಾರಿಗೆ ತರುತ್ತಿದ್ದಾರೆ
- ಆದ್ರೆ ಹಣಕಾಸು ಸ್ಥಿತಿಗತಿ ಬಗ್ಗೆ ಪ್ರಾಧಿಕಾರಕ್ಕೆ ಮಾಹಿತಿ ಕೊಡ್ತಿಲ್ಲ
- ವೆಬ್ಸೈಟ್ನಲ್ಲಿ ಪೂರ್ಣ, ಅಸಲಿಗೆ ಯೋಜನೆಗಳು ಅಪೂರ್ಣ
- ರೇರಾ ವೆಬ್ಸೈಟ್ನಲ್ಲಿ ಗ್ರಾಹಕರಿಗೆ ಸ್ಪಂದನೆ ಕೂಡ ಸಿಗುತ್ತಿಲ್ಲ
ರೇರಾ ಕಾಯ್ದೆ ದುರುಪಯೋಗ!
ಕಾಯ್ದೆ ಪ್ರಕಾರ ರೇರಾದಲ್ಲಿ ಏನೂ ಪಾಲಿಸುತ್ತಿಲ್ಲವೆಂಬ ಆರೋಪವಿದೆ. ಲಂಚ ಪಾವತಿಸಿದ್ರೆ ವಸತಿ ಯೋಜನೆಗೆ ಥಟ್ ಅಂತ ಅನುಮೋದನೆ ಸಿಗಲಿದೆ. ಕೆಲವು ಕಠಿಣ ನಿಯಮಗಳ ಸಡಿಲಿಕೆಗೆ ಹೆಚ್ಚು ಲಂಚಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರಂತೆ. ಡೀಫಾಲ್ಟ್ ಡೆವಲಪರ್ಗಳ ಹೊಸ ಯೋಜನೆಗಳಿಗೂ ಅನುಮೋದನೆ ಸಿಗುತ್ತಿದೆ. ರಿಜಿಸ್ಟ್ರೇಷನ್ ಆಗದ ನಿವೇಶನಗಳ ಅಡ್ವಾನ್ಸ್ ಬುಕ್ಕಿಂಗ್ ಮತ್ತು ಮಾರಾಟ ಕೂಡ ಆಗುತ್ತಿದೆ. ಜಂಟಿ ಅಭಿವೃದ್ಧಿ ಒಪ್ಪಂದ ಇಲ್ಲದಿದ್ರೂ ವಸತಿ ಯೋಜನೆ ಪ್ರಾರಂಭವಾಗುತ್ತದೆ. ಯೋಜನೆ ವಿಳಂಬದಿಂದ ಖರೀದಿದಾರರಿಗೆ ಸಿಗಬೇಕಾದ ಪರಿಹಾರ ಕುಡ ಸಿಗುತ್ತಿಲ್ಲ. ಬಹುತೇಕ ಪ್ರಾಜೆಕ್ಟ್ಗಳಿಗೆ ಸಮಸ್ಯೆಗಳಾದ್ರೂ ದಂಡ ಮಾತ್ರ ವಿಧಿಸ್ತಿಲ್ಲ. ಸೂಕ್ತ ಮೂಲ ಸೌಕರ್ಯ ಒದಗಿಸದಿದ್ರೂ ಗ್ರಾಹಕರ ಪರ ಮಾತ್ರ ನಿಲ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ರೇರಾ ಕಾಯ್ದೆ ಇದ್ರೂ ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ.. ಜಮೀರ್ ಇಲಾಖೆಯಲ್ಲಿ ಬೆಚ್ಚಿ ಬೀಳಿಸಿದ ಅಕ್ರಮಗಳ ಸದ್ದು..!
ಗ್ರಾಹಕರ ದೂರೇನು?
- ದೂರು-1: ಕೆ-ರೇರಾದಲ್ಲಿ ಯಾವುದೇ ಯೋಜನೆ ಮುಗಿದ Closure ಪಾಲಿಸಿ ಘೋಷಿಸಿಲ್ಲ
- ದೂರು-2: ಕಾಮನ್ ಏರಿಯಾ ಜಾಗ, ಅನ್ ಡಿವೈಡೆಡ್ ಶೇರ್ ಹಸ್ತಾಂತರ ಮಾಡಲಾಗಿಲ್ಲ
- ದೂರು-3: ಗೃಹ ಖರೀದಿದಾರರ ಅಸೋಸಿಯೇಷನ್ಗೆ ಹಸ್ತಾಂತರವನ್ನ ಇನ್ನೂ ಮಾಡಿಲ್ಲ
- ದೂರು-4: ಬೇರೆ ರಾಜ್ಯಗಳಂತೆ ಹಣ ವಸೂಲಿಗೆ ಕಂದಾಯ ಅಧಿಕಾರಿಗಳನ್ನ ನೇಮಿಸಿಲ್ಲ
- ದೂರು-5: ಸೂಕ್ತ ರೀತಿಯಲ್ಲಿ ರೇರಾ ಕಾಯ್ದೆ ಜಾರಿ ಮಾಡೋದಕ್ಕೆ ಸಭೆಯನ್ನೂ ಕರೆದಿಲ್ಲ
- ದೂರು-6: ಸಾರ್ವಜನಿಕ ಮತ್ತು ಮನೆ ಖರೀದಿದಾರರ ಸಭೆಯನ್ನ ರೇರಾ ಕರೆದೇ ಇಲ್ಲ
- ದೂರು-7: ಅಪಾರ್ಟ್ಮೆಂಟ್ ಅಸೋಸಿಯೇಷನ್ ನೋಂದಣಿ ಸುತ್ತೋಲೆಯೂ ಇಲ್ಲ
- ದೂರು-8: ಒಂದೇ ಒಂದು ರೇರಾ ನೋಂದಾಯಿತ ಯೋಜನೆಯೂ ಪೂರ್ಣಗೊಂಡಿಲ್ಲ
- ದೂರು-9: ಇದರ ಮಾಹಿತಿ ಒದಗಿಸೋದಕ್ಕೆ ರೇರಾದ ಪೋರ್ಟಲ್ ಅಪ್ಡೇಟ್ ಆಗಿಲ್ಲ
- ದೂರು-10: ಸಾರ್ವಜನಿಕರ ದೂರುಗಳನ್ನ ಕಾಲಮಿತಿಯೊಳಗೆ ವಿಲೇವಾರಿ ಮಾಡುತ್ತಿಲ್ಲ
- ದೂರು-11: 60 ದಿನಗಳಲ್ಲೇ ವಿಲೇವಾರಿಗೆ ಆದೇಶವಿದ್ರೂ 2-3 ವರ್ಷವಾದ್ರೂ ಇನ್ನೂ ಬಾಕಿ
ಇದನ್ನೂ ಓದಿ:ರೇರಾ ಕಾಯ್ದೆ ಇದ್ರೂ ಆಟಕ್ಕುಂಟು, ಲೆಕ್ಕಕ್ಕೆ ಇಲ್ಲ.. ಜಮೀರ್ ಇಲಾಖೆಯಲ್ಲಿ ಬೆಚ್ಚಿ ಬೀಳಿಸಿದ ಅಕ್ರಮಗಳ ಸದ್ದು..!
ರೇರಾದಲ್ಲಿ ಯಾವುದೇ ದೂರು ದಾಖಲಿಸಿದ್ರೆ ದೂರು ದಾಖಲಾದ 60 ದಿನಗಳ ಒಳಗೆ ಕಂಪ್ಲೆಂಟ್ ಅನ್ನು ವಿಲೇವಾರಿ ಮಾಡಬೇಕು. ಸಾಧ್ಯವಿಲ್ಲ ಅಂದ್ರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು. ಕರ್ನಾಟಕದಲ್ಲಿರುವ ರೇರಾ ಎರಡು, ಮೂರು ವರ್ಷಗಳು ಕಳೆದರೂ ಪ್ರಕರಣಗಳನ್ನು ವಿಲೇವಾರಿ ಮಾಡ್ತಿಲ್ಲ.
ನನ್ನದೇ ಒಂದು ವಿಚಾರ ಹೇಳಬೇಕು ಅಂದರೆ.. 2023ರಲ್ಲಿ ಒಂದು ಪ್ರಾಪರ್ಟಿ ರಿಜಿಸ್ಟರ್ ಮಾಡಿದ್ದೆ. ಇದುವರೆಗೂ ಆರ್ಡರ್ ಪಾಸ್ ಮಾಡಿಲ್ಲ. 2025 ಮುಗಿಯುತ್ತ ಬಂದಿದೆ. ಎರಡು ವರ್ಷಗಳು ಕಳೆದಿದೆ. 2025, ಏಪ್ರಿಲ್ನಲ್ಲಿ ಫೈನಲ್ ಹಿಯರಿಂಗ್ ಆಗಿದೆ. ಆಗಸ್ಟ್ ಮುಗಿದ್ರೂ ಕೂಡ ಆರ್ಡರ್ ಪಾಸ್ ಮಾಡಿಲ್ಲ. ಹೈಕೋರ್ಟ್ನಲ್ಲಿ ಒಂದು ತಿಂಗಳಲ್ಲಿ ಜಡ್ಜ್ಮೆಂಟ್ ಅಪ್ಲೋಡ್ ಮಾಡ್ತಾರೆ. ಇವರು ಹೈಕೋರ್ಟ್ ಸ್ಪೀಡ್ನಲ್ಲಾದರೂ ಕೆಲಸ ಮಾಡಬೇಕು. ಇದನ್ನೆಲ್ಲ ನೋಡಿದ್ರೆ ರೇರಾ ನಿಜಕ್ಕೂ ಕೆಲಸ ಮಾಡ್ತಿದ್ಯಾ ಎಂಬ ಪ್ರಶ್ನೆ ಮೂಡಿಬರುತ್ತದೆ.
ಧನಂಜಯ ಪದ್ಮನಾಭಚಾರ್, ಸಂಸ್ಥಾಪಕರು, ಕರ್ನಾಟಕ ಮನೆ ಗ್ರಾಹಕರ ವೇದಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ