/newsfirstlive-kannada/media/media_files/2025/09/18/rera-3-2025-09-18-11-23-28.jpg)
ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಇಲಾಖೆಯಲ್ಲಿ ಅಕ್ರಮಗಳ ಸದ್ದು ಜೋರಾಗಿದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (RERA) ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಎಲ್ಲಾ ವಿಚಾರಗಳು ಗೊತ್ತಿದ್ದೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು, ಸಚಿವರು ಸೈಲೆಂಟ್​ ಆಗಿದ್ದಾರೆ ಎಂಬ ಆರೋಪ ಇದೆ.
ಆರೋಪ ಏನು..?
ಸಚಿವ ಜಮೀರ್ ಅಹ್ಮದ್ ಅಣತಿಯಂತೆಯೇ ಅಧ್ಯಕ್ಷ ರಾಕೇಶ್ ಸಿಂಗ್ (Rakesh Singh)​ ಕೆಲಸ ಮಾಡ್ತಿದ್ದಾರೆ ಎನ್ನಲಾಗಿದೆ. ರೇರಾ (Real Estate Regulation and Development Act) ಅಡಿಯಲ್ಲಿ ಬಿಲ್ಡರ್ ಹಾಗೂ ಪ್ರಾಜೆಕ್ಟ್​​ನ ವಿರುದ್ಧ ಲೆಕ್ಕಕ್ಕೆ ಸಿಗದಷ್ಟು ದೂರುಗಳು ದಾಖಲಾಗಿವೆ. ಆದರೆ ರೇರಾ ಜನಸಾಮಾನ್ಯರ, ಗ್ರಾಹಕರ ಪರ ನಿಲ್ಲುತ್ತಿಲ್ಲ. ಸಕಾಲಕ್ಕೆ ಫ್ಲ್ಯಾಟ್ ಹಸ್ತಾಂತರ ಮಾಡದಿದ್ರೂ ಬಿಲ್ಡರ್​ಗಳ ಮೇಲೆ ಯಾವುದೇ ಕ್ರಮಗಳಿಲ್ಲ. ನಿಗದಿತ ಅವಧಿಗೆ ಯೋಜನೆ ಪೂರ್ಣಗೊಳಿಸದಿದ್ರೂ ಸೈಲೆಂಟ್​ ಆಗಿದೆ. ಜೊತೆಗೆ ಪ್ರಾಧಿಕಾರದಲ್ಲಿ ದಾಖಲಾಗಿರೋ ದೂರುಗಳನ್ನ ಇತ್ಯರ್ಥವೇ ಮಾಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:K-RERA ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ.. ಗ್ರಾಹಕರ ದೂರುಗಳೇನು..?
/filters:format(webp)/newsfirstlive-kannada/media/media_files/2025/09/18/rera-2-2025-09-18-11-23-43.jpg)
ರೇರಾ ನಿರ್ಲಕ್ಷ್ಯ!
ರಿಯಲ್ ಎಸ್ಟೇಟ್ ಉದ್ಯಮ ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಈ ಉದ್ಯಮದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ರೇರಾ ಸೃಷ್ಟಿಯಾಗಿದೆ. ಗ್ರಾಹಕರ ರಕ್ಷಣೆ, ನಕಲಿ ಲೇಔಟ್, ಅಪಾರ್ಟ್​ಮೆಂಟ್​ಗೆ ಕಡಿವಾಣ ಹಾಕುವ ಉದ್ದೇಶವೇ ರೇರಾ ಪ್ರಾಧಿಕಾರ ರಚನೆಯಾಗಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮವನ್ನು ನಿಯಂತ್ರಣ ಮಾಡುವ ಬದಲಿಗೆ ಭ್ರಷ್ಟಾಚಾರದಲ್ಲಿ ಭಾಗಿಯಾದ ಆರೋಪವಿದೆ.
ರೇರಾದಲ್ಲಿ ಯಾವುದೇ ದೂರು ದಾಖಲಿಸಿದ್ರೆ ದೂರು ದಾಖಲಾದ 60 ದಿನಗಳ ಒಳಗೆ ಕಂಪ್ಲೆಂಟ್ ಅನ್ನು ವಿಲೇವಾರಿ ಮಾಡಬೇಕು. ಸಾಧ್ಯವಿಲ್ಲ ಅಂದ್ರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು. ಕರ್ನಾಟಕದಲ್ಲಿರುವ ರೇರಾ ಎರಡು, ಮೂರು ವರ್ಷಗಳು ಕಳೆದರೂ ಪ್ರಕರಣಗಳನ್ನು ವಿಲೇವಾರಿ ಮಾಡ್ತಿಲ್ಲ. ನನ್ನದೇ ಒಂದು ವಿಚಾರ ಹೇಳಬೇಕು ಅಂದರೆ.. 2023ರಲ್ಲಿ ಒಂದು ಪ್ರಾಪರ್ಟಿ ರಿಜಿಸ್ಟರ್ ಮಾಡಿದ್ದೆ.
ಇದುವರೆಗೂ ಆರ್ಡರ್ ಪಾಸ್ ಮಾಡಿಲ್ಲ. 2025 ಮುಗಿಯುತ್ತ ಬಂದಿದೆ. ಎರಡು ವರ್ಷಗಳು ಕಳೆದಿದೆ. 2025, ಏಪ್ರಿಲ್ನಲ್ಲಿ ಫೈನಲ್ ಹಿಯರಿಂಗ್ ಆಗಿದೆ. ಆಗಸ್ಟ್ ಮುಗಿದ್ರೂ ಕೂಡ ಆರ್ಡರ್ ಪಾಸ್ ಮಾಡಿಲ್ಲ. ಹೈಕೋರ್ಟ್ನಲ್ಲಿ ಒಂದು ತಿಂಗಳಲ್ಲಿ ಜಡ್ಜ್ಮೆಂಟ್ ಅಪ್ಲೋಡ್ ಮಾಡ್ತಾರೆ. ಇವರು ಹೈಕೋರ್ಟ್ ಸ್ಪೀಡ್ನಲ್ಲಾದರೂ ಕೆಲಸ ಮಾಡಬೇಕು. ಇದನ್ನೆಲ್ಲ ನೋಡಿದ್ರೆ ರೇರಾ ನಿಜಕ್ಕೂ ಕೆಲಸ ಮಾಡ್ತಿದ್ಯಾ ಎಂಬ ಪ್ರಶ್ನೆ ಮೂಡಿಬರುತ್ತದೆ.
ಧನಂಜಯ ಪದ್ಮನಾಭಚಾರ್, ಸಂಸ್ಥಾಪಕರು, ಕರ್ನಾಟಕ ಮನೆ ಗ್ರಾಹಕರ ವೇದಿಕೆ
ಇದನ್ನೂ ಓದಿ:K-RERA ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ.. ಗ್ರಾಹಕರ ದೂರುಗಳೇನು..?
/filters:format(webp)/newsfirstlive-kannada/media/media_files/2025/09/18/rera-1-2025-09-18-11-24-17.jpg)
ಎಷ್ಟು ದೂರು ದಾಖಲಾಗಿವೆ..?
ರಾಜ್ಯದಲ್ಲಿ ರೇರಾ ಕಾಯ್ದೆ ಜಾರಿಯಾಗಿ ಒಟ್ಟು 8 ವರ್ಷಗಳಾಗಿವೆ. ಈ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ದೂರುಗಳೂ ದಾಖಲಾಗಿವೆ. ಆದ್ರೆ ಬಹುತೇಕ ದೂರುಗಳು ಇತ್ಯರ್ಥವಾಗದೇ ಬಾಕಿಯೇ ಇವೆ. 8 ವರ್ಷದಲ್ಲಿ ರೇರಾ ಅಡಿ ಬರೋಬ್ಬರಿ 12,165 ದೂರುಗಳು ದಾಖಲಾಗಿವೆ. ಸಾವಿರಾರು ದೂರುಗಳು ದಾಖಲಾದ್ರೂ ರೇರಾ ನಿರ್ಲಕ್ಷ್ಯ ಮಾಡಿದೆ. ದೂರುಗಳನ್ನ ವಿಲೇವಾರಿ ಮಾಡೋದಕ್ಕೂ ಸಹ ನಿರ್ಲಕ್ಷ್ಯ ಮಾಡಿದೆ. ಮಾಹಿತಿಗಳ ಪ್ರಕಾರ, ಇನ್ನೂ 2 ಸಾವಿರದಷ್ಟು ಕೇಸ್​ಗಳು ಬಾಕಿ ಇವೆ. ಇನ್ನು, ವಿಲೇವಾರಿ ಆದ ಹಲವು ಕೇಸ್​ಗಳಲ್ಲಿ ಆದೇಶವೇ ನೀಡಿಲ್ಲ ಎನ್ನಲಾಗಿದೆ.
‘ರೇರಾ’ ಕೇಸ್​ಗಳ ಲೆಕ್ಕ!
- ದಾಖಲಾದ ಕೇಸ್​ಗಳು - 12,165
- ವಿಲೇವಾರಿ ಆದ ಕೇಸ್​ಗಳು - 9,168
- ಆದೇಶಕ್ಕೆ ಕಾಯ್ದಿರಿಸಿದ್ದು - 812
- ಪರಿಶೀಲನೆಯಲ್ಲಿರುವ ಕೇಸ್ - 116
- ಪ್ರಕ್ರಿಯೆಯಲ್ಲಿರುವ ಕೇಸ್ - 291
- ತನಿಖಾ ಹಂತದಲ್ಲಿರುವ ಕೇಸ್ - 1,894
‘ವಸೂಲಿ’ ಆಗಿದ್ದೆಷ್ಟು?
- ಹಣ ವಸೂಲಿಗೆ ಆದೇಶಿಸಿದ್ದ ಪ್ರಕರಣ - 1,857
- ವಸೂಲಿ ಮಾಡಬೇಕಾಗಿದ್ದ ಮೊತ್ತ - ₹849.7 ಕೋಟಿ
- ವಸೂಲಿ ಆಗಿರುವ ಪ್ರಕರಣ - 254
- ವಸೂಲಿ ಮಾಡಿರುವ ಮೊತ್ತ - ₹99 ಕೋಟಿ
- ವಸೂಲಿ ಬಾಕಿ ಇರುವ ಮೊತ್ತ - ₹750.5 ಕೋಟಿ
ಇದನ್ನೂ ಓದಿ:K-RERA ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ.. ಗ್ರಾಹಕರ ದೂರುಗಳೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us