/newsfirstlive-kannada/media/media_files/2025/09/19/kalaburagi-karave-2025-09-19-07-50-02.jpg)
ಕನ್ನಡ ಪರ ನಿಂತ್ರೆ ಜೈಲಿಗೆ ಹೋಗಬಾಕಾಗುತ್ತೆ.. ನಾವ್ ಹೇಳ್ತಿಲ್ಲ.. ಕಲಬುರಗಿಯಲ್ಲಿ ನಿನ್ನೆ ನಡೆದ ಸ್ಥಿತಿಗತಿ ಹೇಳ್ತಿದೆ.. ಕನ್ನಡ ಪರ ನಿಂತ 11 ಜನರನ್ನ ಪೊಲೀಸರು ಜೈಲಿಗಟ್ಟಿದ್ದಾರೆ. ಅಸಲಿಗೆ ಆಗಿದ್ದೇನು ಅನ್ನೋದರ ವಿವರ ಇಲ್ಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಅನಿರೀಕ್ಷಿತ ಮಳೆಗೆ ಭಾರೀ ದುರಂತ.. ಇಬ್ಬರು ನೀರು ಪಾಲು, ರೈತ ಜಸ್ಟ್ ಮಿಸ್
ಲೋಕೋಪಯೋಗಿ ಎಂಜಿನಿಯರ್ ಅಮೀನ್ ಮುಕ್ತಾರ್.. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ.ಎಸ್.ಮಾಳಗಿ ಇವರಿಬ್ಬರೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ವಿರುದ್ಧ ಕಲಬುರಗಿ ನಗರದ ಕಣ್ಣಿ ಮಾರುಕಟ್ಟೆ ಮಳಿಗೆಯ ಕನ್ನಡ ಫಲಕ ತೆರವುಗೊಳಿಸಿ.. ಉರ್ದು ಫಲಕವನ್ನ ಅಳವಿಡಿಸಲು ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಕರವೇ ಕಾರ್ಯಕರ್ತರು ದಿಢೀರನೆ ಸ್ಥಳಕ್ಕೆ ಧಾವಿಸಿ, ಕನ್ನಡಕ್ಕೆ ಅವಮಾನ ಆದ್ರೆ ಸುಮ್ಮನಿರಲ್ಲ ಎಂದು ಕಪ್ಪು ಮಸಿ ತಂದು ಅಧಿಕಾರಿಗಳ ಮುಖಕ್ಕೆ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ದೂರಿನನ್ವಯ FIR
ಈ ಘಟನೆ ಬೆನ್ನಲ್ಲೇ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ G.S.ಮಾಳಗಿ ದೂರು ನೀಡಿದ್ದು, ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ಆಗಿದೆ. ದೂರಿನ ಅನ್ವಯ ಕರವೇ ನಾರಾಯಣಗೌಡ ಬಣದ 11 ಮಂದಿ ಕಾರ್ಯಕರ್ತರನ್ನ ಬಂಧಿಸಲಾಗಿದೆ. ಆನಂದ ದೊಡ್ಡಮನಿ, ರವೀಂದ್ರ, ರಾಜು, ಪೃಥ್ವಿ, ಸಚಿನ್, ಸಾಹಿಲ್, ಅಪ್ಪಾರಾವ್, ವಿಲಾಸ್ ಸೇರಿ ಒಟ್ಟು 11 ಜನರ ಬಂಧನವಾಗಿದೆ. ಈ ಬಗ್ಗೆ ಕರವೇ ಅಧ್ಯಕ್ಷ ನಾರಾಯಣ ನ್ಯೂಸ್ ಫಸ್ಟ್ ಜೊತೆ ಮಾತನಾಡಿ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಮದುವೆ ಆದ ಮೇಲೆ ಹೀಗ್ಯಾಕೆ ಮಾಡ್ತಿದ್ದಾರೋ.. ಅಕ್ಕನ ಬಗ್ಗೆ ಬಿಗ್ ಬಾಸ್ ರಂಜಿತ್ ಏನೇನು ಹೇಳಿದರು?
ಸಿದ್ದರಾಮಯ್ಯರ ಸರ್ಕಾರಕ್ಕೆ ಕನ್ನಡದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕಾಳಜಿ ಏನಾದರೂ ಇದ್ದಿದ್ದರೆ ನಿಮ್ಮ ಅಧಿಕಾರಿಗಳನ್ನ ಕರೆದು ಬುದ್ಧಿ ಹೇಳಬೇಕು. ಹೋರಾಟಗಾರರ ಮೇಲೆ ಇಲ್ಲ, ಸಲ್ಲದ ಕೇಸ್ ಹಾಕಿ ಜೈಲಿಗೆ ಕಳಿಸಿದ್ರೆ ಹುಷಾರ್. ನೀವು ಏನಾದರೂ ಹಾಗೆ ಮಾಡಿದರೆ ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ದಂಗೆ ಏಳಬೇಕಾಗುತ್ತೆ
ನಾರಾಯಣ ಗೌಡ, ಕರವೇ ಅಧ್ಯಕ್ಷ
ಒಟ್ಟಾರೆ, ಸರ್ಕಾರದ ವಿರುದ್ಧ ಹೋರಾಟಗಾರರು ದಂಗೆ ಏಳುವ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ನಡೆ ತೆಗೆದುಕೊಳ್ಳುತ್ತೆ ಅಂತ ಕಾದು ನೋಡ ಬೇಕಿದೆ.
ಇದನ್ನೂ ಓದಿ:ಸಿದ್ದರಾಮಯ್ಯರ ‘ಜಾತಿ ಗಣತಿ’ ಕನಸಿಗೆ ಮತ್ತೆ ವಿಘ್ನ.. ಸೆಪ್ಟೆಂಬರ್ 22 ರಿಂದ ನಡೆಯೋದು ಡೌಟ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ