/newsfirstlive-kannada/media/media_files/2025/09/18/ranjith-2025-09-18-22-07-52.jpg)
ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ರಂಜಿತ್ ಹಾಗೂ ಅವರ ಸಹೋದರಿ, ಮನೆಯಲ್ಲಿ ಪಾಲು ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಒಂದು ಫ್ಲಾಟ್ನ ವಿಚಾರಕ್ಕಾಗಿ ಅಕ್ಕ-ತಮ್ಮನ ಮಧ್ಯೆ ಜಗಳ ನಡೆದಿದೆ. ಈ ಸಂಬಂಧ ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಆಗಿದೆ. ಈ ಬಗ್ಗೆ ಸ್ವತಹ ರಂಜಿತ್ ಅವರೇ ಪ್ರತಿಕ್ರಿಯಿಸಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ಬಿಗ್ಬಾಸ್ ಫೇಮ್ ಅಂಜಿತ್ ಅವರು, ಆ ಕಡೆಯಿಂದ ಲೀಗಲ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ಸಂಬಂಧಸಿದಂತೆ ಅವರಿಗೆ ಉತ್ತರ ಕೊಟ್ಟಿದ್ದೇನೆ. ಅದನ್ನು ಕೋರ್ಟ್ಗೆ ತೆಗೆದುಕೊಂಡು ಹೋಗದೇ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ಪೊಲೀಸರು ಇದು ಸಿವಿಲ್ ಮ್ಯಾಟರ್ ಕೋರ್ಟ್ಗೆ ಹೋಗಿ. ಅಲ್ಲಿ ತೀರ್ಮಾನ ಮಾಡಿಕೊಂಡು ಇರೋ ಪ್ರಾಪರ್ಟಿ ತಗೊಳ್ಳಿ ಎಂದಿದ್ದಾರೆ ಅಂತ ರಂಜಿತ್ ಹೇಳಿದ್ದಾರೆ.
ನಾನು ಅಪಾರ್ಟ್ಮೆಂಟ್ನ ಮೊದಲ ಮಹಡಿಯಲ್ಲಿದ್ದೇನೆ. ಇಬ್ಬರು ಅಕ್ಕಂದಿರು ಹಾಗೂ ಭಾವ, ಮಕ್ಕಳು ಇರೋದು 3ನೇ ಮಹಡಿಯಲ್ಲಿ. ಮನೆಯಲ್ಲಿ ನನ್ನ ಪತ್ನಿ ಇರಬೇಕಾದರೆ ಬಂದು ಎಲ್ಲ ವಸ್ತುಗಳನ್ನು ಬಿಸಾಕಿದ್ದಾರೆ. ಆಗ ಪತ್ನಿ ವಸ್ತುಗಳನ್ನ ತೆಗೆದುಕೊಳ್ಳಲು ಹೋದಾಗ ಮುಟ್ಟಬೇಡ ಎಂದಿದ್ದಾರೆ. ಅವರೇ ಅವಾಚ್ಯ ಪದಗಳನ್ನ ಬಳಸಿದ್ದಾರೆ. ವಿಡಿಯೋದಲ್ಲಿರುವುದು ಅವರು ವಿಡಿಯೋ ಮಾಡಿದ್ದು ಅಷ್ಟೇ. ಅವರು ಬಳಸಿದ ಪದಗಳು ಇಲ್ಲ. ಮನೆಯ ಒಳಗೆ ಕಿಚನ್ ಒಳಗೆ ಕ್ಯಾಮೆರಾ ಹಿಡಿದುಕೊಂಡು ಬಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗಾಣಗ ಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತಾಯಿ ಜೊತೆ ನಟ ವಿಜಯ್ ಸೂರ್ಯ ಭೇಟಿ
ಆಸ್ತಿ ಬೇಕು ಅಂದರು. ಅದಕ್ಕೆ ನಾನು ಕೊಡಲು ಆಗೋದಿಲ್ಲ ಎಂದೇ. ಆಗ ವಿಲ್ಲಾ ಬಿಟ್ಟು ಹೋಗಬೇಕು ಎಂದರು. ಇಎಂಐ ಇದೆ. ಎಲ್ಲ ನೀನೇ ಕಟ್ಟಿಕೊಂಡು ಹೋಗಬೇಕು ಎಂದರು. ಅದಕ್ಕೂ ಸರಿ ಎಂದೆ. ಆದರೆ ಇಷ್ಟು ದಿನ ಒಟ್ಟಾಗಿ ಇಲ್ಲದಾಗ ಏನು ಮಾಡಿಲ್ಲ. ಆದರೆ ನಾನು ಮದುವೆಯಾದ ಮೇಲೆ ಯಾಕೆ ಸಮಸ್ಯೆ ಮಾಡುತ್ತಿದ್ದೀರಿ ಎಂದು ಕೇಳಿದ್ದೆ. ಈ ಮನೆನ 2017-18ನಲ್ಲಿ ತಗೊಂಡೆ. ನಾನು ಬೆಂಗಳೂರಲ್ಲಿ ಇರದೇ ಮುಂಬೈನಲ್ಲಿ ಇರುತ್ತಿದ್ದೆ. ನಾನು ಕಲಾವಿದ ಆದ ಕಾರಣಕ್ಕೆ ಲೋನ್ ಆಗಲಿಲ್ಲ. ಆಗ ಅಕ್ಕಗೆ ಸ್ಯಾಲರಿ ಬರುತ್ತಿತ್ತು. ಹಾಗಾಗಿ ಅವರಿಗೆ ಲೋನ್ ಆಯಿತು ಎಂದು ಹೇಳಿದ್ದಾರೆ.
ಅವರಿಗೆ ಲೋನ್ ಆಗಿದ್ದರಿಂದ ನನ್ನ ಹಣವನ್ನು ಅಕ್ಕನ ಅಕೌಂಟ್ಗೆ ಹಾಕು ಅಂತ ಅಮ್ಮ ಹೇಳಿದ್ದರು. ಅದರಂತೆ ಅಕ್ಕನ ಅಕೌಂಟ್ಗೆ ಹಣ ಹಾಕಿದ್ದೇನೆ. ಕ್ಯಾಶ್ ಕೂಡ ಕೊಟ್ಟಿದ್ದೇನೆ. ಹಣ ಕೊಟ್ಟಿರುವುದಕ್ಕೆ ಎಲ್ಲ ತರಹದ ದಾಖಲೆ ಇವೆ. ಆದರೆ ವಿಡಿಯೋ ಮಾಡುವಾಗ ಮಧ್ಯೆ ಮಧ್ಯೆ ಕ್ಯಾಮೆರಾ ಆಫ್ ಮಾಡಿ ವಿಡಿಯೋ ಎಲ್ಲಿ ಕೊಡಬೇಕು ಅಂತ ಗೊತ್ತು ಎಂದಿದ್ದಾರೆ. ಮನೆ ಕೊಡು ಎಂದರೆ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ದುಡ್ಡು ಕೊಡಲು ಹೋದರೆ ಮನೆ ಬೇಕು ಅಂತಾರೆ ಎಂದು ರಂಜಿತ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ