/newsfirstlive-kannada/media/media_files/2025/09/18/vijay_suriya_temple-2025-09-18-19-00-10.jpg)
ಕಲಬುರಗಿ: ದೃಷ್ಟಿಬೊಟ್ಟು ಧಾರವಾಹಿ ಮುಗಿದ ಬೆನ್ನಲ್ಲೇ ನಟ ವಿಜಯ್ ಸೂರ್ಯ ಅವರು ತನ್ನ ತಾಯಿಯೊಂದಿಗೆ ಪ್ರಸಿದ್ಧ ಗಾಣಗ ಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ವಿಜಯ್ ಸೂರ್ಯ ಅವರು ತನ್ನ ತಾಯಿ ಲಲಿತಾಂಬ ನಾಗರಾಜ್ ಅವರ ಜೊತೆ ಕಲಬುರಗಿಯ ಅಫಜಲ್‌ಪುರ ತಾಲೂಕಿನಲ್ಲಿರುವ ಪ್ರಸಿದ್ಧ ಗಾಣಗ ಪುರದ ಶ್ರೀ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಿಜಯ ಸೂರ್ಯ ಹಾಗೂ ತಾಯಿ ಲಲಿತಾಂಬ ಅವರು ಶ್ರೀದತ್ತಾತ್ರೇಯ ಗುರುಗಳ ಪರಮ ಭಕ್ತರು ಆಗಿದ್ದಾರೆ. ಹೀಗಾಗಿಯೇ ವರ್ಷದಲ್ಲಿ ಹಲವು ಬಾರಿ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡು ಪವಿತ್ರವಾದ ಪೂಜೆ ಸಲ್ಲಿಕೆ ಮಾಡುತ್ತಾರೆ.
ಅದರಂತೆ ಇಂದು ಕೂಡ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಎಂದಿನಂತೆ ಮುಂಜಾನೆಯ ಪೂಜೆಯಲ್ಲಿ ಮಗ ಮತ್ತು ತಾಯಿ ಇಬ್ಬರೂ ಶ್ರದ್ಧಾ, ಭಕ್ತಿಯಿಂದ ಪಾಲ್ಗೊಂಡು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಇದೇ ವೇಳೆ ವಿಜಯ ಸೂರ್ಯ ಅವರನ್ನು ನೋಡಿದ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಇಷ್ಟೇ ಅಲ್ಲ, ಮಹಿಳಾ ಅಭಿಮಾನಿ ಒಬ್ಬರು ವಿಜಯ ಸೂರ್ಯ ಅವರಿಗೆ ಆರತಿ ಬೆಳಗಿರುವುದು ವಿಶೇಷ ಎನಿಸಿತು.
ಇದನ್ನೂ ಓದಿ: MS ಧೋನಿ ಕ್ಯಾಪ್ಟನ್ಸಿಯಲ್ಲಿ ಅನ್ಯಾಯ..ಅನ್ಯಾಯ.. ಹುಕ್ಕಾ ಗ್ಯಾಂಗ್ಗೆ ತಂಡದಲ್ಲಿ ಸ್ಥಾನ..!
ನಟ ವಿಜಯ್ ಸೂರ್ಯ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಜನಪ್ರಿಯ. ನಮ್ಮ ಲಚ್ಚಿ, ಪ್ರೇಮಲೋಕ, ಜೊತೆ ಜೊತೆಯಲಿ ಸೀರಿಯಲ್ಗಳಲ್ಲಿ ಅಮೋಘವಾದ ನಟನೆ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಇದು ಅಲ್ಲದೇ ಸ್ಯಾಂಡಲ್ವುಡ್ನ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಇಷ್ಟಕಾಮ್ಯ, ಸ, ಕದ್ದುಮುಚ್ಚಿ, ಹಾಗೂ ಗಾಳಿಪಟ 2 ಸೇರಿ ಹಲಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರು, ದತ್ತಾ ಭಾಯ್ ಎನ್ನುವ ಪಾತ್ರದಲ್ಲಿ ಮಿಂಚಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ