/newsfirstlive-kannada/media/media_files/2026/01/12/ramanagara-kiccha-sudeep-1-2026-01-12-16-30-03.jpg)
ರಾಮನಗರ: ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ವಿರುದ್ಧ ರಾಮನಗರದ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ.
ಸುದೀಪ್ ವಿರುದ್ಧ ಕೇಳಿಬಂದ ಆರೋಪ ಏನು..?
ಬಿಗ್​ ಬಾಸ್ ನಿರೂಪಣೆ ಮಾಡುತ್ತಿರುವ ಸುದೀಪ್ ಅವರು, ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್​ನಲ್ಲಿ ರಣಹದ್ದು ಬಗ್ಗೆ ತಪ್ಪಾಗಿ ಮಾಹಿತಿ ಹರಡಿದ ಆರೋಪ ಇದೆ. ಈಗಾಗಲೆ ಬಿಗ್ ಬಾಸ್​ ಮನೆಯಲ್ಲಿ ಪ್ರಸಾರವಾಗಿರುವ ಎಪಿಸೋಡ್​ನಲ್ಲಿ ಸುದೀಪ್, ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆ ನೀಡಿದ್ದರು. ಆ ಚಟುವಟಿಕೆ ಪ್ರಕಾರ, ಈ ಮನೆಯಲ್ಲಿ ರಣಹದ್ದು ಯಾರು ಎಂದು ಕೇಳಲಾಗಿತ್ತು. ಸ್ಪರ್ಧಿಗಳಿಗೆ ರಣಹದ್ದುವಿನ ಬಗ್ಗೆ ಮಾಹಿತಿ ನೀಡುವಾಗ.. ‘ರಣಹದ್ದು ರೀತಿ ಹೊಂಚು ಹಾಕಿ, ಸಂಚು ಮಾಡಿ ಕರೆಕ್ಟ್ ಟೈಂಗೆ ಲಬಕ್ ಅಂತಾ ಹಿಡಿಯುವುದು’ ಎಂದು ಸುದೀಪ್ ಹೇಳಿದ್ದರು.
ಇದನ್ನೂ ಓದಿ: ಮಹಿಳಾ ಹೋಮ್ ಗಾರ್ಡ್ಸ್ ಮೇಲೆ ಹಲ್ಲೆ ನಡೆಸಿ ಜೈಲುಪಾಲಾದ ಯುವತಿ : ತಾಳ್ಮೆ ಇದ್ದಿದ್ದರೇ, ಸಮಸ್ಯೆ ಪರಿಹಾರ
/filters:format(webp)/newsfirstlive-kannada/media/media_files/2026/01/12/ramanagara-kiccha-sudeep-2026-01-12-16-30-27.jpg)
ರಣಹದ್ದು ಸಂರಕ್ಷಣಾ ಟ್ರಸ್ಟ್ ವಾದ ಏನು?
ರಣಹದ್ದು ಯಾವುದೇ ಜೀವಿಗೆ ಹಾನಿ ಮಾಡುವುದಿಲ್ಲ. ಅದು ಸತ್ತ ಪ್ರಾಣಿಗಳನ್ನ ಮಾತ್ರ ತಿಂದು ಪರಿಸರ ಸಮತೋಲನ ಕಾಪಾಡುತ್ತವೆ. ಹಾಗಾಗಿ ಅಳಿವಿನಂಚಿನಲ್ಲಿರೋ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಹರಡುವುದು ಸರಿಯಲ್ಲ ಎಂದು ದೂರು ನೀಡಲಾಗಿದೆ. ರಾಮನಗರ ಡಿಸಿಎಫ್ ಹಾಗೂ ಆರ್​ಎಫ್ಓಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ.
ಇದನ್ನೂ ಓದಿ: ನಾಳೆ ದೀಢೀರನೇ ರಾಹುಲ್ ಗಾಂಧಿ ಭೇಟಿಯಾಗುವ ಸಿಎಂ ಸಿದ್ದರಾಮಯ್ಯ: ಕುತೂಹಲಕ್ಕೆ ಕಾರಣವಾದ ಭೇಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us