/newsfirstlive-kannada/media/media_files/2025/10/15/alia-bhat-2025-10-15-11-41-37.jpg)
ಮೈಸೂರು: ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಅವರು ವಿಘ್ನ ನಿವಾರಕ ಗಣೇಶನನ್ನು ತುಂಬಾನೇ ನಂಬುತ್ತಾರೆ, ಆರಾಧಿಸುತ್ತಾರೆ. ಲೇಟೆಸ್ಟ್​ ವಿಷಯ ಏನಪ್ಪ ಅಂದರೆ ಶೀಘ್ರದಲ್ಲೇ, ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಗಣಪನ ವಿಗ್ರಹವೊಂದು ಅವರ ಮನೆ ಬೆಳಗಲಿದೆ.
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ (Arun yogiraj) ಅವರು ಆಲಿಯಾ ಭಟ್ ಅವರಿಗಾಗಿ ಗಣೇಶನ ಮೂರ್ತಿಯೊಂದನ್ನು ಕೆತ್ತಿದ್ದಾರೆ. ನಾಲ್ಕು ಅಡಿ ಗಣಪ, ಮೂರಡಿ ಪೀಠವುಳ್ಳ ವಿಗ್ರಹ ಅದಾಗಿದೆ. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಕೆತ್ತನೆ ಮಾಡಲಾಗಿದೆ. ಕಳೆದ ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ 17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ನೆರವೇರಿಸಿದ್ದಾರೆ. ಇಂದು ಈ ವಿಗ್ರಹ ಮುಂಬೈಗೆ ತೆರಳಲಿದೆ.
ಇದನ್ನೂ ಓದಿ: ವಿಶ್ವ ಕ್ರಿಕೆಟ್​ನಲ್ಲಿ ಸ್ಮೃತಿಯದ್ದೇ ಸದ್ದು.. ಸೈಕ್ ಆದ ಫ್ಯಾನ್ಸ್..!
ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನ್ನಾಡಿರುವ ಅರುಣ್ ಯೋಗಿರಾಜ್.. ಗಣಪ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ನಮ್ಮನ್ನ ಮುಂಬೈಗೆ ಕರೆಸಿಕೊಂಡು ಮಾತನಾಡಿದ್ದರು. ನಾವು ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಆ ಮನೆಗೆ ಹೊಂದಿಕೊಳ್ಳುವಂತೆ ಗಣಪನ ಕೆತ್ತನೆ ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಬಡ, ಮಧ್ಯಮ ವರ್ಗದವರಿಗೆ ಗುಡ್​​ನ್ಯೂಸ್​.. 30x40 ನಿವೇಶನಗಳಿಗೆ ಓಸಿ ಅಗತ್ಯವಿಲ್ಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us